Posts

ಬೆಳ್ತಂಗಡಿ ಅನುಗ್ರಹ ಸಮೂಹ ಸಂಸ್ಥೆಗಳಲ್ಲಿ ತಿರಂಗಾ ಅಭಿಯಾನ: ಕಾಲೇಜು ಪ್ರಾರಂಭೋತ್ಸವ

1 min read



ಬೆಳ್ತಂಗಡಿ; ಕಳೆದ 12 ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಶೈಕ್ಷಣಕವಾಗಿ, ಸಾಮಾಜಿಕವಾಗಿ, ಮತ್ತು ಸೇವಾ ರೂಪದಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಅನುಗ್ರಹ ಎಜುಕೇಶನ್ & ಸೋಶಿಯಲ್ ವೆಲ್ಫೇರ್  ಟ್ರಸ್ಟ್ (ರಿ) ಬೆಳ್ತಂಗಡಿ ಇದರ ಅಂಗ ಸಂಸ್ಥೆಗಳಾದ 
ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿ ಯಲ್ಲಿ 2022 -23 ನೇ ಶಕ್ಷಣಿಕ ವೃತ್ತಿ ಪರ ತಾಂತ್ರಿಕ ಕೋರ್ಸುಗಳ ತರಬೇತಿ ಪ್ರಾರಂಭೋತ್ಸವ ಮತ್ತು ತಿರಂಗಾ ಅಭಿಯಾನಕ್ಕೆ ಚಾಲನೆ ನಡೆಯಿತು.

ಸದ್ರಿ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥ ಎಂ ಜಿ ತಲ್ಹತ್ ಮಾತನಾಡಿ, ಸಂಸ್ಥೆಯ ಕಳೆದ 12 ವರ್ಷಗಳ ಸೇವೆಗಳ ಬಗ್ಗೆ, ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳು ಇದೀಗ ಉದ್ಯೋಗದಲ್ಲಿ ಇರುವ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ಸಂಸ್ಥೆಯ ಪ್ರಾಂಶುಪಾಲ ಹಾಗೂ ಮಾಜಿ ಸೈನಿಕ  ಮುಹಮ್ಮದ್ ರಫಿ ಇವರು ಸಂಸ್ಥೆಯ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ನಿರ್ದೇಶಕರುಗಳಾದ ಜಿ ಇಸುಬು ಸವಣಾಲು, ಮುಹಮ್ಮದ್ ಅಶ್ರಫ್ ಫೈಝಿ ಉಪಸ್ಥಿತರಿದ್ದರು.

ಸಂಸ್ಥೆಯ ಮ್ಯಾನೇಜರ್ ಮುಹಮ್ಮದ್ ಸಾದಿಕ್ ಕಲ್ಲಗುಡ್ಡೆ ಇವರು ಹೊಸದಾಗಿ ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಅವರೊಂದಿಗೆ ಆಗಮಿಸಿದ ಪೋಷಕರನ್ನು ಸ್ವಾಗತಿಸಿದರು.

ಉಪನ್ಯಾಸಕರೂಗಳಾದ ಕಕ್ಕಿಂಜೆ ನೌಶಾದ್ ಅಝ್ಹರಿ, ವೀಣಾ ಮದ್ದದ್ಕ, ಥೋಮಸ್ ಉಜಿರೆ, ಸಿಬ್ಬಂದಿ ಮುಹಮ್ಮದ್ ಆಶಿರ್ ಸವಾಣಾಲು ಉಪಸ್ಥಿತರಿದ್ದರು.  ಬೆಳ್ತಂಗಡಿ ಇಮೇಜ್ ಮೊಬೈಲ್ ಮತ್ತು ಇಮೇಜ್ ಲೈಫ್ ಸ್ಟೈಲ್ ಇದರ ಮಾಲಕರಾದ ಮುಹಮ್ಮದ್ ಹರ್ಷದ್ ನಾವೂರು, ಮತ್ತು ಅಝರುದ್ದೀನ್ ನಾವೂರು ಇವರು ಸಂಸ್ಥೆಗೆ ಭೇಟಿ ನೀಡಿ ಶುಭ ಹಾರೈಸಿದರು.

ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿ ಇದರ ಎಲ್ಲಾ ವಿದ್ಯಾರ್ಥಿಗಳು ತಿರಂಗಾ ಅಭಿಯಾನದಲ್ಲಿ ಭಾಗಿಯಾದರು. ಸ್ವಾತಂತ್ರೋತ್ಸವದ ಪ್ರಯುಕ್ತ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಅನುಗ್ರಹ ಜನ ಸೇವಾ ಕೇಂದ್ರ ಬೆಳ್ತಂಗಡಿ ಮತ್ತು ಅನುಗ್ರಹ ಸ್ಕೂಲ್ ಬುಕ್ ಕಂಪೆನಿ ಬೆಳ್ತಂಗಡಿ ಇಲ್ಲಿಯೂ ತ್ರಿವರ್ಣ ಧ್ವಜವನ್ನು ಹಾರಿಸಿ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment