ಬೆಳ್ತಂಗಡಿ; ಇತ್ತೀಚಿಗೆ ಮದ್ದಡ್ಕದ ಲಾಡಿ ಎಂಬಲ್ಲಿ ಒಂದೇ ಮನೆಯ ಇಬ್ಬರು ಗಂಡು ಮಕ್ಕಳು ವಿಪರೀತ ಜ್ವರದಿಂದ ಮೃತಪಟ್ಟಿದ್ದು ಅವರ ಮನೆಗೆ ತಾಲೂಕಿನ ಅಡಿಕೆ ವರ್ತಕರ ಸಂಘದ ವತಿಯಿಂದ ಸಾಂತ್ವಾನ ಭೇಟಿ ಮಾಡಲಾಯಿತು.
ತೀರಾ ಬಡತನದ ಸ್ಥಿತಿಯಲ್ಲಿರುವ ಮನೆಯ ಯಜಮಾನ ಕಾರ್ಮಿಕನಾಗಿ ದುಡಿಯುತ್ತಿದ್ದು, ಮಕ್ಕಳ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದರೂ ಮಕ್ಕಳನ್ನು ಉಳಿಸಿಕೊಳ್ಳಲಾಗದೆ ದುಃಖದಲ್ಲಿರುವುದನ್ನು ಮನಗಂಡು
ತಾಲೂಜಿನ ಅಡಿಕೆ ವರ್ತಕರ ಸಂಘದ ಮೂಲಕ ಸಂಗ್ರಹಿಸಿದ 26, 000 ರೂಗಳನ್ನು ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಬಾಲಕ್ರಷ್ಣ ವಿ ಶೆಟ್ಟಿ ಸವಣಾಲು, ಕಾರ್ಯದರ್ಶಿ ಶಂಶುದ್ದೀನ್ ಜಾರಿಗೆಬೈಲು, ಉಪಾಧ್ಯಕ್ಷರುಗಳಾದ ಸತೀಶ್ ರೈ ಮತ್ತು ಹೈದರ್ ಎಂ.ಆರ್, ಲಾಡಿ ಮಸೀದಿ ಅಧ್ಯಕ್ಸ ಇಸುಬು ಹಾಗು ಸದಸ್ಯರಾದ ರಝಾಕ್ ಮೊದಲಾದವರು ಉಪಸ್ಥಿತರಿದ್ದರು.
ವರದಿ; ಅಚ್ಚು ಮುಂಡಾಜೆ