Posts

ಉತ್ತಮ‌ ಕಾರ್ಯ ಮಾಡುವ ಸಮೂಹವನ್ನು ಸೃಷ್ಟಿಸಿ ಎಂಬುದು ಪ್ರವಾದಿ ವಚನ; ಅಬೂಸ್ವಾಲಿಹ್ ಸಖಾಫಿ || ಎಸ್‌ಎಮ್‌ಎ ಉಜಿರೆ ರೀಜಿನಲ್ ವಾರ್ಷಿಕ ಮಹಾಸಭೆ

0 min read


ಬೆಳ್ತಂಗಡಿ: ಉತ್ತಮ‌ ಕಾರ್ಯ ಮಾಡುವ ಸಮೂಹವನ್ನು ಸೃಷ್ಟಿಸಿ ಎಂಬುದು ಪ್ರವಾದಿ ವಚನವಾಗಿದೆ. ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಷನ್ ಮೊಹಲ್ಲಾ ನಟ್ಟದಲ್ಲಿ ಈ ಕೆಲಸವನ್ನು ಮಾಡುತ್ತಿದೆ ಎಂದು ಉಜಿರೆ‌ ಕೇಂದ್ರ ಜುಮ್ಮಾ ಮಸ್ಜಿದ್ ಪ್ರಧಾನ ಧರ್ಮಗುರುಗಳಾದ ಅಬೂಸ್ವಾಲಿಹ್ ಸಖಾಫಿ ಹೇಳಿದರು.

ಉಜಿರೆ ಟೌನ್ ಜುಮ್ಮಾ ಮಸ್ಜಿದ್ ನಲ್ಲಿ ಆ. 12 ರಂದು ನಡೆದ ಎಸ್‌ಎಮ್‌ಎ ಉಜಿರೆ ರೀಜಿನಲ್ ಇದರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆಯನ್ನು ಉಜಿರೆ ರೀಜಿನಲ್ ಸಮಿತಿ ಅಧ್ಯಕ್ಷ ಮುಹ್ಯುದ್ದೀನ್ ವಹಿಸಿದ್ದರು. 

ಝೋನ್ ಸಮಿತಿ ಅಧ್ಯಕ್ಷ ಹಮೀದ್ ನೆಕ್ಕರೆ, ಕರ್ನಾಟಕ ಮುಸ್ಲಿಂ ಜಮಾಅತ್ ತಾ. ಅಧ್ಯಕ್ಷ ಎಸ್.ಎಮ್ ಕೋಯ ತಂಙಳ್, ರಾಜ್ಯ ಕಾರ್ಯದರ್ಶಿ ಎಂಬಿಎಮ್ ಸಾದಿಕ್ ಮಾಸ್ಟರ್, ಈಸ್ಟ್ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಬಕ, ಮೊದಲಾದವರು ಉಪಸ್ಥಿತರಿದ್ದರು.

ಅಬ್ದುಲ್ ಹಮೀದ್ ಸ‌ಅದಿ ಕಳೆಂಜಿಬೈಲು ಸಂಪನ್ಮೂಲ ತರಗತಿ ಮಂಡಿಸಿದರು. 

ರೀಜಿನಲ್ ಕಾರ್ಯದರ್ಶಿ ಅಶ್ರಫ್ ಹಿಮಮಿ ಸ್ವಾಗತಿಸಿ ಪ್ರಸ್ತಾವನೆಗೈದರು.

+------

ವರದಿ; ಅಚ್ಚು ಮುಂಡಾಜೆ

9449640130

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment