ಬೆಳ್ತಂಗಡಿ: ಇಲ್ಲಿನ ಬೆಸ್ಟ್ ಫೌಂಡೇಶನ್,ಬೆಳ್ತಂಗಡಿ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮಕ್ಕಳಿಗೆ ಮತ್ತು ಪೋಷಕರಿಗೆ ಶ್ರೀಕೃಷ್ಣ ವೇಷ ಪೋಟೋ ಸ್ಪರ್ಧೆಯನ್ನು ಪೇಸ್ ಬುಕ್ ಆನ್ ಲೈನ್ ಮೂಲಕ ಆಯೋಜಿಸಲಾಗಿದೆ.
ಐದು ವಿಭಾಗದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು.
ಎರಡು ವರ್ಷದ ವರೆಗಿನ ಮಕ್ಕಳಿಗೆ 'ಮುದ್ದುಕೃಷ್ಣ' ಸ್ಪರ್ಧೆ.ಮೂರು ವರ್ಷದಿಂದ ಐದು ವರ್ಷದ ವರೆಗಿನ ಮಕ್ಕಳಿಗೆ ಬಾಲಕೃಷ್ಣ ಸ್ಪರ್ಧೆ. ಆರು ವರ್ಷ ಮೇಲ್ಪಟ್ಟ ಎಲ್ಲರಿಗೂ 'ರಾಧಾಕೃಷ್ಣ ವೇಷ ಸ್ಪರ್ಧೆ. ಮುಕ್ತ ವಿಭಾಗದಲ್ಲಿ 'ಕೃಷ್ಣ ಯಶೋದ ಮತ್ತು ಕೃಷ್ಣ ಬಲರಾಮ ವೇಷ ಸ್ಪರ್ಧೆಗಳು ನಡೆಯಲಿದೆ.
ಸ್ಪರ್ಧೆಯಲ್ಲಿ ಸ್ಪರ್ಧಿಸುವ ಪೋಟೋವನ್ನು ಈ ನಂಬರ್ ಗೆ 7204978230 ವಾಟ್ಸ್ ಆ್ಯಪ್ ನ ಮೂಲಕ ಕಳುಹಿಸಿಕೊಡಬೇಕು.ಅತಿ ಹೆಚ್ಚು ಲೈಕ್ ಪಡೆದ ಪ್ರತಿ ವಿಭಾಗಕ್ಕೆ ಪ್ರಥಮ- ಚಿನ್ನದ ನಾಣ್ಯ ,ದ್ವಿತೀಯ -ಬೆಳ್ಳಿಯ ನಾಣ್ಯ ಹಾಗೂ ವಿಶೇಷ 10 ಬಹುಮಾನವನ್ನು ನೀಡಿ ಗೌರವಿಸಲಾಗುವುದು.
ಸ್ಪರ್ಧಿಗಳ ಸ್ಪರ್ಧೆಯ ಪೋಟೋ ವನ್ನು ಆಗಸ್ಟ್ 15 ರ ನಂತರ 'Rakshith Shivaram Tulunad' ಪೇಸ್ ಬುಕ್ ಪೇಜ್ ನಲ್ಲಿ ಹಾಕಲಾಗುತ್ತದೆ.
ಪೋಟೋ ಕಳುಹಿಸಲು ಕೊನೆಯ ದಿನಾಂಕ ಆಗಸ್ಟ್ 25. ಲೈಕ್ ಪಡೆಯಲು ಕೊನೆಯ ದಿನಾಂಕ ಆಗಸ್ಟ್ 28. ಮತ್ತು ಆಗಸ್ಟ್ 31 ರಂದು ಫಲಿತಾಂಶ ಪ್ರಕಟಿಸಲಾಗುವುದು.