ಬೆಳ್ತಂಗಡಿ: ಉರುವಾಲು ಗ್ರಾಮದ ಕುಪ್ಪೆಟ್ಟಿ ನೆಕ್ಕಿಲ್ ಎಂಬಲ್ಲಿಯ ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ದುರ್ಬಳಸಿಕೊಂಡ ಆರೋಪದಲ್ಲಿ ಪೋಕ್ಸೋ ಪ್ರಕರಣದಡಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ನೆಕ್ಕಿಲ್ ನಿವಾಸಿ ಸಮದ್ ಎಂಬಾತನೆಂದು ಗುರುತಿಸಲಾಗಿದೆ.
ಉರುವಾಲು ಗ್ರಾಮದ ಕುಪ್ಪೆಟ್ಟಿಯ ನೆಕ್ಕಿಲ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಬಾಲಕಿಯು ತನ್ನ ತಾಯಿ, ಅಜ್ಜಿ, ತಮ್ಮನ ಜೊತೆ ವಾಸ್ತವ್ಯವಿದ್ದು, ಸುಮಾರು 3 ತಿಂಗಳ ಹಿಂದೆ ಬಾಡಿಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಸಂದರ್ಭ ಅವರಿಗೆ ಮನೆ ದುರಸ್ತಿ ಮಾಡಿ ಸಹಾಯ ಮಾಡಿದ್ದ ಆರೋಪಿ, ಆ ಬಳಿಕದ ದಿನಗಳಲ್ಲಿ ಬಾಲಕಿಯ ಮನೆಗೆ ಅಪರೂಪಕ್ಕೊಮ್ಮೆ ಹೋಗಿ ಬಂದು ಸಂಪರ್ಕವನ್ನಿಟ್ಟುಕೊಂಡಿದ್ದನು.
ಇದೇ ಪರಿಚಯವನ್ನು ಅನ್ಯಮಾರ್ಗದಲ್ಲಿ ಬಳಸಿಕೊಂಡು ಡಿಸೆಂಬರ್ ತಿಂಗಳಲ್ಲಿ ಯುವತಿ ಜೊತೆ ಸಂಪರ್ಕ ಹೊಂದಿದ್ದನೆಂದು ಮನೆಯವರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದರು.
ಇದೀಗ ಆರೋಪಿ ಸಮದ್ ನನ್ನು ಬಂಧಿಸಿ ವಿಚಾರಣೆ ನಡಿಸಿದ್ದು, ಅ.ಕ್ರ 07/2021 ಕಲಂ: 376, ಐ.ಪಿ.ಸಿ. ಮತ್ತು ಕಲಂ; 4, 6 ಪೋಕ್ಸೋ ಕಾಯ್ದೆ 2012ಯಡಿ ಪರಕರಣ ದಾಖಲಿಸಿಕೊಂಡಿದ್ದಾರೆ.