Posts

ನಾಳೆಯಿಂದ ಜಿಲ್ಲೆಯಲ್ಲಿ‌ 2 ಗಂಟೆ ಅಲ್ಲ 1 ಗಂಟೆಯವರೆಗೆ ಮಾತ್ರ ಎಲ್ಲಾ ಅಂಗಡಿಗಳು‌ ಓಪನ್! ಸರಕಾರ- ಉಸ್ತುವಾರಿ ಸಚಿವರ ಹೇಳಿಕೆಯಲ್ಲಿ‌ ಗೊಂದಲ

1 min read

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಅಂದರೆ ಜೂ.23 ಬುಧವಾರದಿಂದ ಬೆಳಗ್ಗೆಯಿಂದ ಮಧ್ಯಾಹ್ನ2 ಗಂಟೆಯ ವರೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರೆಯಲು‌ ಅವಕಾಶವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ‌ ಬೆನ್ನಿಗೇ ಇದೀಗ ಸರಕಾರದ ಕಂದಾಯ ಇಲಾಖೆ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಅವರು ಆದೇಶ ಹೊರಡಿಸಿದ್ದು, ಅದರಲ್ಲಿ 1 ಗಂಟೆಯವರೆಗೆ ಮಾತ್ರ ಎಂದು ದ್ವಂದ ಹೇಳಿಕೆ ಇದೆ.

ಆರಂಭದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾಧ್ಯಮಕ್ಕೆ ಹೇಳಿಕೆ ಬಿಡುಗಡೆಗೊಳಿಸಿ, ಜಿಲ್ಲಾ ಸಂಸದರು,‌ಎಲ್ಲಾ ಶಾಸಕರ ಅಪೇಕ್ಷೆ ಮೇರೆಗೆ ಮನವಿಯನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ. ಜನತೆಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ  ಬೆ.7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲಾ ರೀತಿಯ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ ಎಂದಿದ್ದರು. 

ಕೋಟ ಶ್ರೀನಿವಾಸ ಪೂಜಾರಿ ಅವರ ಬಿನ್ನಹದ ಮೇರೆಗೆ ಸಿ.ಎಂ ಅವರು ಕಂದಾಯ ಇಲಾಖಾ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ ಬೆನ್ನಿಗೇ ಸರಕಾರಿ ಆದೇಶ ಬಿಡುಹಡೆಯಾಗಿದೆ. ಆದರೆ ಅದರಲ್ಲಿ ಬೆಳಿಗ್ಗೆ6 ಗಂಟೆಯಿಂದ1 ಗಂಟೆಯವರೆಗೆ ಎಂದು ಉಲ್ಲೇಖಿಸಲಾಗಿದೆ. 

ಈ‌ ಮಧ್ಯೆ ಉಸ್ತುವಾರಿ ಸಚಿವರು, ದ.ಕ‌ ಜಿಲ್ಲಾಧಿಕಾರಿಗೆ ಜಿಲ್ಲಾ ಮಟ್ಟದ ಆದೇಶ ಬಿಡುಗಡೆಗೊಳಿಸುವಂತೆ ಸೂಚನೆ ನೀಡಿದ್ದು, ಅವರ ಹೇಳಿಕೆ ಯಾವ ರೀತಿ ಹೊರಬರಲಿದೆ ಎಂದು ಕಾದುನೋಡಬೇಕಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment