Posts

ರೋಟರಿ ಕ್ಲಬ್ ಬೆಳ್ತಂಗಡಿಗೆ ಜಿಲ್ಲಾ ರಾಜ್ಯಪಾಲ ಎ.ಆರ್ ರವೀಂದ್ರ ಭಟ್ ಭೇಟಿ; ಸೇವಾ ಚಟುವಟಿಕೆಗಳ ಅನಾವರಣ; ಸಾಧಕರಿಗೆ ಗೌರವಾರ್ಪಣೆ

1 min read


ಬೆಳ್ತಂಗಡಿ; ಸುವರ್ಣ ಮಹೋತ್ಸವ ವರ್ಷ ಪೂರೈಸಿ ಅತ್ಯಂತ ಯಶಸ್ವಿ ಕಾರ್ಯಕ್ರಮ ನೀಡಿದ ರೋಟರಿ ಕ್ಲಬ್ ಬೆಳ್ತಂಗಡಿಗೆ ರೋಟರಿ ಜಿಲ್ಲಾ ರಾಜ್ಯಪಾಲ ಎ.ಆರ್ ರವೀಂದ್ರ ಭಟ್ ಭೇಟಿ ಕಾರ್ಯಕ್ರಮ ಡಿ.22 ರಂದು ಲಾಯಿಲ ಅರಳಿ ರಸ್ತೆಯ ರೋಟರಿ ಭವನದಲ್ಲಿ ಜರುಗಿತು.‌ ಇದೇ ವೇಳೆ ರಾಜ್ಯ ಪಾಲರು ರೋಟರಿಯ ಹತ್ತುಹಲವು ಸೇವಾ ಚಟುವಟಿಕೆಗಳನ್ನು ಅನಾವರಣಗೊಳಿಸಿದ್ದೂ ಮಾತ್ರವಲ್ಲದೆ ಸಾಧಕರಿಗೆ ಗೌರವಾರ್ಪಣೆ ನಡೆಸಿಕೊಟ್ಟರು.

ಜಿಲ್ಲಾ ರಾಜ್ಯಪಾಲ ಎ.ಆರ್  ಭಟ್ ಮಾತನಾಡುತ್ತಿರುವುದು

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ ಸ್ವಾಗತಿಸಿ, ರೋಟರಿ ಯೋಜನೆಗಳಿಗೆ ಸಹಕಾರ ನೀಡಿದ ಸದಸ್ಯರನ್ನು ಸ್ಮರಿಸಿದರು.

ವೇದಿಕೆಯಲ್ಲಿ ಸಹಾಯಕ ಗವರ್ನರ್ ಸುರೇಂದ್ರ ಬಿ.ಕೆ, ಜಿಲ್ಲಾ ಕಾರ್ಯದರ್ಶಿ ಜಯರಾಮ ರೈ ಅವರು ಸಂದರ್ಭೋಚಿತವಾಗಿ ಮಾತಮಾಡಿದರು. ಜಿಲ್ಲೆಯ ಪ್ರಥಮ ಮಹಿಳೆ ಸ್ಮಿತಾ ಎ.ಆರ್ ಭಟ್ ಹಾಜರಿದ್ದರು.





ಝೋನಲ್ ಲೆಫ್ಟಿನೆಂಟ್ ಬಿ.ಕೆ ಧನಂಜಯ ರಾವ್ ಸುವರ್ಣ ವರ್ಷಾಚರಣೆಯ ಕಾರ್ಯಕ್ರಮದ ಪಕ್ಷಿ ನೋಟ ನೀಡಿದರು.

ತಾ. ಘಟಕದ ಕಾರ್ಯದರ್ಶಿ ಅಬೂಬಕ್ಕರ್ ವರದಿ ಮಂಡಿಸಿದರು. ರಾಜ್ಯಪಾಲರ ಪರಿಚಯವನ್ನು ಸಂದೇಶ್ ರಾವ್, ಸಹಾಯಕ ರಾಜ್ಯಪಾಲರ ಪರಿಚಯವನ್ನು ಶ್ರೀನಾಥ್ ಕೆ.ಯಂ, ನೂತನ ಸದಸ್ಯ ಕಿರಣ್ ಯೋಗೀಶ್ ಹೆಬ್ಬಾರ್ ಕಡಿರುದ್ಯಾವರ ಅವರ ಪರಿಚಯವನ್ನು ಶ್ರವಣ್ ಕಾಂತಾಜೆ ನಡೆಸಿಕೊಟ್ಟರು. 

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಪ್ರೋತ್ಸಾಹದಡಿ ವಿದ್ಯಾರ್ಥಿಗಳಾದ ವೀಣಾ ಆಚಾರ್ಯ ಮತ್ತು ಶೃಜನ್ ಶೆಟ್ಟಿ ಹಾಗೂ ವಿಕಲ ಚೇತನರ ಪ್ರೋತ್ಸಾಹ ಧನದ ಭಾಗವಾಗಿ ಅಶ್ರಫ್ ಕುಂಟಿನಿ ಅವರಿಗೆ ನೆರವಿನ ಹಸ್ತ ಚಾಚಲಾಯಿತು.‌

ಕೊಳಂಬೆಯಲ್ಲಿ ಗೃಹ ನಿರ್ಮಾಣ ಸೇರಿದಂತೆ ಸಾಮಾಜಿಕ ಸೇವಾ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಬದುಕು ಕಟ್ಟೋಣ ಬನ್ನಿ ತಂಡದ ಪರವಾಗಿ ಸಂಚಾಲಕ, ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ ಅವರನ್ನು ಸನ್ಮಾನಿಸಲಾಯಿತು. 

ಡಾ. ಎ ಜಯಕುಮಾರ್ ಶೆಟ್ಟಿ, ರೇಷ್ಮಾ ಅಬೂಬಕ್ಕರ್ ಮತ್ತು ವೈಷ್ಣವಿ ವೈಕುಂಠ ಬಾಳಿಗಾ ಕಾರ್ಯಕ್ರಮ‌ ನಿರೂಪಿಸಿದರು.ನಿಯೋಜಿತ ಅಧ್ಯಕ್ಷೆ ಮನೋರಮಾ ಭಟ್ ವಂದನಾರ್ಪಣೆಗೈದರು.

--

ಅಚ್ಚು ಮುಂಡಾಜೆ, ಪ್ರಿನ್ಸಿಪಲ್ ಎಡಿಟರ್, ಲೈವ್ ಮೀಡಿಯಾ ಟೀಮ್: 9449640130


ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment