Posts

ಪೂರ್ಣಕಾಲಿಕ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಭುವನೇಶ್ ಜೆ ಅಧಿಕಾರ ಸ್ವೀಕಾರ


ಬೆಳ್ತಂಗಡಿ; ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬೆಳ್ತಂಗಡಿ ಇಲ್ಲಿನ ಪೂರ್ಣಕಾಲಿಕ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಭುವನೇಶ ಜೆ ಅವರು 

ಪದೋನ್ನತಿಗೊಂಡು (ಗ್ರೂಪ್ ಬಿ ವೃಂದ) ಜೂ.23 ರಂದು ಅಧಿಕಾರ ವಹಿಸಿಕೊಂಡಿದ್ದಾರೆ.

ಮೂಲತಃ ಪುತ್ತೂರು ತಾಲೂಕಿನ ಹಿರೆಬಂಡಾಡಿ ಗ್ರಾಮದ ಜಾಡೆಂಕಿ ನಿವಾಸಿ, ಬೆಳ್ತಂಗಡಿ ಬಿಇಒ ಕಚೇರಿಯಲ್ಲಿ ತನಿಖಾಧಿಕಾರಿಯಾಗಿದ್ದ ಕುಂಜ್ಞಣ್ಣ ಗೌಡ ಅವರ ಪುತ್ರರಾಗಿರುವ ಭುವನೇಶ ಜೆ ಅವರು ಮೈಸೂರು ವಿ.ವಿ ಯಲ್ಲಿ ಬಿಪಿಎಡ್ ಅನ್ನು ಪ್ರಥಮ ರ್ಯಾಂಕ್ ನೊಂದಿಗೆ ಪೂರೈಸಿರುತ್ತಾರೆ. ಎಂಪಿಎಡ್ ಅನ್ನೂ ಅದೇ ಯುನಿವರ್ಸಿಟಿ ಯಲ್ಲಿ ಮುಗಿಸಿದವರಾಗಿದ್ದಾರೆ.

ಬಳಿಕ ಹಾಸನ‌ ಜಿಲ್ಲೆ ಹೊಂಗೆರೆ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿ 1992 ರಲ್ಲಿ ನೇಮಕಾತಿಯಾದವರು, ಬಳಿಕ ಸರಕಾರಿ ಪ್ರೌಢ ಶಾಲೆಗಳಾದ ಕರಾಯ, ಮೂಡಬಿದ್ರೆಯ ಹೊಸಬೆಟ್ಟು, ಮಂಗಳೂರು ತಾಲೂಕಿನ ಮುತ್ತೂರು, ಪುತ್ತೂರು ತಾಲೂಕಿನ ವಳಾಲ್ ಮತ್ತು ಬೆಳ್ತಂಗಡಿ ತಾಲೂಕಿನ ಪದ್ಮುಂಜ, ಎರಡು ವರ್ಷ ಬಲ್ಮಠ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ.

ಜೊತೆಗೆ 2012 ರಿಂದ ಬೆಳ್ತಂಗಡಿ ತಾ.‌ದೈಹಿಕ ಶಿಕ್ಷ ಪರಿವೀಕ್ಷಣಾಧಿಕಾರಿಯಾಗಿ ಪ್ರಭಾರ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official