Posts

ಕಕ್ಕಿಂಜೆ ಸೈಂಟ್ ಜೋಸೆಫ್ ಅಕಾಡಮಿಯಲ್ಲಿ ಕೇವಲ ಎಂಟೇ ತಿಂಗಳಲ್ಲಿ ಜರ್ಮನಿ ಭಾಷಾ ಅಧ್ಯಯನ ವ್ಯವಸ್ಥೆ

3 min read


ಬೆಳ್ತಂಗಡಿ: ಕೇವಲ ಎಂಟೇ ತಿಂಗಳಲ್ಲಿ ಜರ್ಮನಿ ಭಾಷೆ ಕಲಿಸುವ ಭಾಷಾ ಅಧ್ಯಯನ ಶಿಕ್ಷಣ ಸಂಸ್ಥೆ "ಸೈಂಟ್ ಜೋಸೆಫ್ ಅಕಾಡಮಿ" ಇದು ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ ಆರಂಭವಾಗಿದ್ದು ಕರ್ನಾಟಕ, ಕೇರಳ ಮತ್ತು ಹರಿಯಾಣ ಮೊದಲಾದ ರಾಜ್ಯಗಳಿಂದ ಇಲ್ಲಿ ವಿದ್ಯಾರ್ಥಿಗಳು ಬಂದು ಕಳೆದ ಎರಡು ತಿಂಗಳಿನಿಂದ ಕಲಿಯುತ್ತಿದ್ದಾರೆ. 

ಆರೋಗ್ಯ ಕ್ಷೇತ್ರದಲ್ಲಿ ಗ್ರಾಮೀಣ ಭಾಗವಾದ ಕಕ್ಕಿಂಜೆಯಲ್ಲಿ 1978 ರಿಂದ ಅತ್ಯಪೂರ್ವ ಸೇವೆ ನೀಡುತ್ತಾ ಬರುತ್ತಿರುವ ಸೈಂಟ್ ಜೋಸೆಫ್ ಆಸ್ಪತ್ರೆ ಕಕ್ಕಿಂಜೆ ಇದರ ಆವರಣದಲ್ಲೇ ಈ ಸೈಂಟ್ ಜೋಸೆಫ್ ಅಕಾಡಮಿ ಕಾರ್ಯಾಚರಿಸುತ್ತಿದೆ. 

ಸಂಸ್ಥೆಯ ಪ್ರಾಂಶುಪಾಲ ಸಾಬು;
----------------------------------------

ಸಂಸ್ಥೆಯಲ್ಲಿ ಈಗಾಗಲೇ 46 ವಿದ್ಯಾರ್ಥಿಗಳು ಸನಿವಾಸ ಶೈಲಿಯಲ್ಲಿ (ರೆಶಿಡೆನ್ಶಿಯಲ್) ತರಬೇತಿ ಪಡೆಯುತ್ತಿದ್ದಾರೆ. 4 ಮಂದಿ ಜರ್ಮನಿ ಭಾಷಾ ನುರಿತ ಶಿಕ್ಷಕರು ಅವರಿಗೆ ತರಬೇತಿ ನೀಡುತ್ತಿದ್ದಾರೆ‌. ಅತ್ಯಾಧುನಿಕ ಎಸಿ ಕ್ಲಾಸ್ ರೂಂ ಗಳು, ಸ್ಮಾರ್ಟ್ ಕ್ಲಾಸ್ ಸೌಲಭ್ಯ, ಸಿಸಿ ಕೇಮರಾ ಸರ್ವೆಲೆನ್ಸ್, ಒಂದು ಕೊಠಡಿಯಲ್ಲಿ ಗರಿಷ್ಠ 20 ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಸೌಲಭ್ಯ ಕಲ್ಪಿಸಲಾಗಿದೆ. ಲೇಡಿಸ್ ಮತ್ತು ಜೆಂಟ್ಸ್‌ಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ, ಕೇಂಟೀನ್ ವ್ಯವಸ್ಥೆ, ಶುಚಿ ರುಚಿಯಾದ ಮಾಂಸಾಹಾರಿ ಮತ್ತು ಸಸ್ಯಾಹಾರಿ ಅಡುಗೆ ವ್ಯವಸ್ಥೆ ಇದೆ. ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 9.30 ರಿಂದ ಸಂಜೆ 4.00 ಗಂಟೆಯವರೆಗೆ ಪುರ್ಣಕಾಲಿಕ ತರಗತಿಗಳು ನಡೆಯುತ್ತದೆ. ಶನಿವಾರ ಮಧ್ಯಾಹ್ನ 12.30 ರ ವರೆಗೆ ತರಗತಿ ನಡೆದರೆ ಅಪರಾಹ್ನ ಮತ್ತು ರವಿವಾರ ಪೂರ್ತಿ ರಜಾ ದಿನ.


ಸಂಸ್ಥೆಯ ನೂತನ ಪ್ರಾಂಶುಪಾಲ ಜೋಸೆಫ್:
--------------------------------------------------------

ಪಠ್ಯ ಅವಧಿ ಮುಗಿದ ಮೇಲೆ ಸಂಜೆಯ ವೇಳೆ ಕ್ರಿಕೆಟ್, ಫುಟ್‌ಬಾಲ್, ಶೆಟ್ಲ್ ಬ್ಯಾಡ್ಮಿಂಟನ್, ಕೇರಂ ಇತ್ಯಾಧಿ ಆಟಕ್ಕೆ ಅವಕಾಶ ಇದೆ. ಸಂಜೆ ಅವರವರ ಧರ್ಮ ಸಂಪ್ರದಾಯ ಆಧರಿತವಾಗಿ ಪ್ರಾರ್ಥನೆ ಮಾಡಲು ಅವಕಾಶ ಮತ್ತು ವ್ಯವಸ್ಥೆ ಕಲ್ಪಿಸಲಾಗಿದೆ. ಹೆತ್ತವರ ಅನುಮತಿ ಹೊರತು ಯಾರಿಗೂ ಕ್ಯಾಂಪಸ್ ನಿಂದ ಹೊರಹೋಗುವುದಕ್ಕಾಗಲೀ, ಸಂದರ್ಶಕರಿಗೆ ಭೇಟಿ ಮಾಡುವುದಕ್ಕಾಗಲೀ ಅವಕಾಶವಿರುವುದಿಲ್ಲ. ಪಿಯುಸಿ ಪೂರೈಸಿದ ವಿದ್ಯಾರ್ಥಿಗಳಿಗೆ  ಜರ್ಮನಿಗೆ ಹೋಗಿ ನರ್ಸಿಂಗ್ ಕಲಿತು ಕೆಲಸ ಪಡೆದುಕೊಂಡರೆ ಮಾಸಿಕ 3 ಲಕ್ಷ ರೂ.ವರೆಗೆ ಅತ್ಯುತ್ತಮ ಸಂಬಳ ಪಡೆಯುವ ಅವಾಕಾಶವಿದೆ. ಅಲ್ಲದೆ ಜರ್ಮನಿಯಲ್ಲಿ ನರ್ಸಿಂಗ್ ಕಲಿಯುವ 3 ವರ್ಷಗಳಲ್ಲಿ ಮಾಸಿಕ 1 ಲಕ್ಷ ರೂ. ಸ್ಟೈಪೆಂಡರಿ ಯೊಂದಿಗೆ ಕೆಲಸದೊಂದಿಗೆ ಕಲಿಕೆ (ಥೆಯರಿ ಮತ್ತು ಪ್ರಾಕ್ಟಿಕಲ್ ಜೋಬ್) ವೃತ್ತಿಕೌಶಲ್ಯ ಶಿಕ್ಷಣ ಪಡೆಯಬಹುದು. ಆದರೆ ಈ ಅವಕಾಶ ಪಡೆದುಕೊಳ್ಳಲು ಜರ್ಮನಿ‌ ಭಾಷೆ ಕಲಿಯುವುದು ಅನಿವಾರ್ಯವಾಗಿದೆ. ಇದು ಭಾರೀ ಬೇಡಿಕೆಯ ಕಲಿಕೆಯಾಗಿದ್ದು ಇದಕ್ಕೆ ದಕ್ಷಿಣ ಕರ್ನಾಟಕದಲ್ಲಿ ಎಲ್ಲೂ ಕಲಿಕಾ ಕೇಂದ್ರಗಳಿಲ್ಲ. ಇಲ್ಲಿನವರು ಕಲಿಕೆಗಾಗಿ ಕೇರಳದ ವಿವಿಧ ಜಿಲ್ಲೆಗಳಿಗೆ ತೆರಳಬೇಕಾಗಿದೆ. ಆದರೆ ಅಂತಹಾ ಜೋಬ್ ಒರಿಯೆಂಟೆಡ್ (JOC) ಕಲಿಕೆಗೆ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯ  ಸೈಂಟ್ ಜೋಸೆಫ್ ಅಕಾಡಮಿಯಲ್ಲಿ ಕೈ ಗೆಟಕುವ ದರದಲ್ಲಿ ಈ ವಿಶಿಷ್ಟ ಅವಕಾಶ ಲಭ್ಯವಿದೆ. 

ವಿಭಾಗ ಮುಖ್ಯಸ್ಥರಾಗಿರುವ ರೋಸ್ ಮಂಜೇಶ್ವರಂ (HOD:
-----------------------------------------------------------------

10 ಸಾವಿರ ರೂ. ನೋಂದಾವಣಿ ಶುಲ್ಕ, ಅದೇ ಸಮಯದಲ್ಲಿ 15 ಸಾವಿರ ರೂ. ಪ್ರವೇಶಾತಿ ಶುಲ್ಕದೊಂದಿಗೆ ದ್ವಿತೀಯ, ತೃತೀಯ ಮತ್ತು ಚತುರ್ಥ ಮಾಸದಲ್ಲಿ ತಲಾ 25, ಸಾವಿರ ರೂ.‌ನಂತೆ ಫೀಸು ತುಂಬಬೇಕು. 8 ತಿಂಗಳ ಕಲಿಕೆಯಲ್ಲಿ 2 ತಿಂಗಳ ಅಂತರದಂತೆ ಎ1, ಎ 2 ಮತ್ತು ಬಿ 1, ಬಿ 2 ಎಂದು ನಾಲ್ಕು ಹಂತಗಳಲ್ಲಿ ಕಲಿಕೆ ಮತ್ತು ಪರೀಕ್ಷೆ ನಡೆಯಲಿದೆ. ಇದರ ಕೊನೆಯ ಎರಡು ಹಂತಗಳಲ್ಲಿ  ಜರ್ಮನಿಯಿಂದಲೇ ಸಂಪನ್ಮೂಲ ವ್ಯಕ್ತಿಗಳು ಅಥವಾ ಜರ್ಮನಿಯಲ್ಲಿ ಕೆಲಸ ಮಾಡಿ ನಿವೃತ್ತ ರಾದವರಿಂದಲೇ ತರಗತಿಗಳು ನಡೆಯಲಿವೆ.  ತರಬೇತಿಯ 5 ನೇ ತಿಂಗಳಿನಲ್ಲಿ ಎ1,  ಎ2 ಪಾಸ್ ಮಾಡಿದ ತಕ್ಷಣ ಜರ್ಮನಿಯಲ್ಲಿ ಕಂಡೀಷನಲ್ ಆಫರ್ ಲೆಟರ್ ಪಡೆಯಲು 2 ಲಕ್ಷ ರೂ. ಪಾವತಿಸಬೇಕಿದೆ. ಒಂದು‌ ವೇಳೆ ಬಿ 1, ಬಿ  2 ಪಾಸ್ ಮಾಡಲು ವಿದ್ಯಾರ್ಥಿ ಅಸಮರ್ಥನಾದರೆ ಈ ಹಣದಲ್ಲಿ ಸಣ್ಣ ಮೊತ್ತ‌ ಕಡಿತವಾಗಿ ಬಾಕಿ ಮೊತ್ತ ವಾಪಾಸು ಸಿಗಲಿದೆ‌. ಪರೀಕ್ಷೆಯಲ್ಲಿ ಪಾಸಾದರೆ ಅಷ್ಟರಲ್ಲೇ  ಜರ್ಮನಿಗೆ ವೀಸಾ ಎಪ್ಲೈ ಮಾಡಬಹುದು. ಇದರ ಸ್ಟಾಂಪಿಂಗ್ 1.5 ಲಕ್ಷ ರೂ. ಹೀಗೆ 4.5 ಲಕ್ಷ ರೂ. ಗಳಲ್ಲಿ ಕೋರ್ಸ್ ಮುಗಿಸಿ ಜರ್ಮನಿಗೆ ಪ್ರಯಾಣ ಬೆಳೆಸಲು ವಿಮಾನ ಟಿಕೆಟ್ ಸಹಿತ 1 ಲಕ್ಷ ರೂ. ಹೀಗೆ ಒಟ್ಟು 5.5 ಲಕ್ಷ ರೂ. ಗಳಲ್ಲಿ ವಿದ್ಯಾರ್ಥಿಗಳು ಜರ್ಮನಿಯ ಭಾಷಾ ಪರಿಣತಿಯೊಂದಿಗೆ ಅಲ್ಲಿ ಅಧ್ಯಯನಕ್ಕೆ ತಯಾರಾಗಿ ನಿಂತಿರುತ್ತಾರೆ. ಇಷ್ಟಾದರೆ ನಿಮ್ಮ ಮಕ್ಕಳು 3 ಲಕ್ಷ ರೂ. ವರೆಗೆ ಆದಾಯ ಗಳಿಕೆಯ ಅರ್ಹತೆಯೊಂದಿಗೆ ಭವಿಷ್ಯ ಕಂಡುಕೊಳ್ಳಲಿದ್ದಾರೆ. 

ಸಂಸ್ಥೆಯ HR ಜೋಸ್ನಾ ನೆಲ್ಯಾಡಿ;
------------------------------------------

ಕೇರಳದ ಕೊಟ್ಟಾಯಂನಲ್ಲೂ ಕೂಡ ಈ ಸಂಸ್ಥೆಗೆ ಇಂತಹದ್ದೇ ಜರ್ಮನಿ ಭಾಷಾ ಕಲಿಕಾ ಕಾಲೇಜು ಇದೆ. ಅಲ್ಲಿನ ಪ್ರಾಂಶುಪಾಲ ಸಾಬು ಅವರೇ ಎರಡೂ ಕಡೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಇದೀಗ ಜೋಸೆಫ್ ಎಂಬವರು ಹೊಸದಾಗಿ ಕಕ್ಕಿಂಜೆಯ ಪ್ರಾಂಶುಪಾಲರಾಗಿ ನಿಯೋಜಿತರಾಗಿದ್ದಾರೆ‌. 



ಜೋಸ್ನಾ ನೆಲ್ಯಾಡಿ ಅವರು ಹೆಚ್ ಆರ್ ಆಗಿ, ರೋಸ್ ಮಂಜೇಶ್ವರಂ ಅವರು ಹೆಚ್.ಒ.ಡಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೂರು ಮಂದಿ ಪಾಕಶಾಸ್ತ್ರ ಪರಿಣತರು ಅಡುಗೆ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.‌ ಸೆಕ್ಯುರಿಟಿ ಗಾರ್ಡ್, ಎಕೌಂಟ್ಸ್ ವಿಭಾಗ, ಕ್ಲೀನಿಂಗ್ ಸ್ಟಾಫ್, ಹೆಲ್ಪಿಂಗ್ ಸ್ಪಾಫ್ ಹುದ್ದೆಗಳು ಭರ್ತಿ ಇವೆ. ಇಲ್ಲಿನ ವಿದ್ಯಾರ್ಥಿಗಳಿಗೆ ಸ್ಥಳೀಯ ಸೈಂಟ್ ಜೋಸೆಫ್ ಆಸ್ಪತ್ರೆಯಲ್ಲಿ ಎರಡು ತಿಂಗಳು ಉಚಿತವಾಗಿ ನರ್ಸಿಂಗ್ ಪೂರ್ವ ಇಂಟರ್ನ್‌ಶಿಪ್ ಮಾಡಿಕೊಳ್ಳಲು ಜೋಡಿಸಿಕೊಳ್ಳಲಾಗಿದೆ‌. ಇಲ್ಲಿ ರಕ್ತದೊತ್ತಡ, ಮಧುಮೇಹ ಕಾಯಿಲೆ, ಇನ್ಸುಲಿನ್, ಇಂಜೆಕ್ಷನ್, ಪ್ರಥಮ ಚಿಕಿತ್ಸೆ, ಟ್ಯೂಬ್ ಗಳ ಅಳವಡಿಕೆ, ಫೀಡಿಂಗ್,‌ ಬೆಡ್ ಬಾತಿಂಗ್, ವೀಲ್ ಚೇರ್, ಸ್ಪಾಂಜ್ ಬಾತ್ ಇತ್ಯಾಧಿ ರೋಗಿಗಳ ಆರೈಕೆ ಹಾಗೂ ವೈದ್ಯಕೀಯ ಸಲಕರಣೆಗಳ ತರಬೇತಿ ನೀಡಲಾಗುತ್ತದೆ. ಇದು ಆ ವಿದ್ಯಾರ್ಥಿಗಳಿಗೆ ಜರ್ಮನಿಯಲ್ಲಿ ನರ್ಸಿಂಗ್ ಕಲಿಯಲು ಪೂರಕವಾಗುತ್ತದೆ.

ಕೇಂಟೀನ್ ವ್ಯವಸ್ಥೆ;
--------------------------
GOETHE ಅಂತಾರಾಷ್ಟ್ರೀಯ ಪರೀಕ್ಷಾ ಕೇಂದ್ರಗಳು
 ಬೆಂಗಳೂರು, ತಿರುವನಂತಪುರಂ, ಕೊಚ್ಚಿ ಈ ಮೂರು ಕಡೆಗಳಲ್ಲಿ ನಡೆಯುತ್ತಿದ್ದು, ಶೀಘ್ರದಲ್ಲೇ ಮಂಗಳೂರಿನಲ್ಲೂ ಪರೀಕ್ಷಾ ಕೇಂದ್ರ  ತೆರೆಯಲು ಎಲ್ಲಾ ಪ್ರಯತ್ನ ಮುಂದುವರಿದಿದೆ. ಅತ್ಯಂತ ಕ್ಲಿಷ್ಟಕರವಾಗಿರುವ ಜರ್ಮನಿ‌ ಭಾಷೆ ಕಲಿಯಲು ಈ ಸಂಸ್ಥೆಯಲ್ಲಿ ನೊಂದಾವಣೆಯಾದವರು ಎಲ್ಲರೂ ಕೂಡ ಉತ್ತೀರ್ಣರಾಗುವಂತೆ ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳ ಮುಖಾಂತರ ವಿಶೇಷ ತರಬೇತಿ ನೀಡಲಾಗುತ್ತಿದೆ.

ಹೆಚ್ಚಿನ ಮಾಗಿತಿಗಾಗಿ: 6364932269, 6364932268,6364932270, 6364932271, 6364932276 ಸಂಪರ್ಕಿಸಬಹುದು.

------

ವಿಶೇಷ ವರದಿ: ಅಚ್ಚು ಮುಂಡಾಜೆ

9449640130

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment