Posts

ಪುಂಜಾಲಕಟ್ಟೆಯಲ್ಲಿ ಮಗನನ್ನು ಕೊಂದು ಆತ್ಮಹತ್ಯೆಗೈದ ತಂದೆ

0 min read


ಬೆಳ್ತಂಗಡಿ; ತಂದೆ ಮಗನ ಮಧ್ಯೆ‌ನಡೆದ ಜಗಳದ ಕೊನೆಯಲ್ಲಿ ತಂದೆಯೇ ತನ್ನ ಪುತ್ರನನ್ನು ಕೊಲೆಗೈದು ಆತ್ಮಹತ್ಯೆಗೆ
 ಶರಣಾದ ಘಟನೆ ಪುಂಜಾಲಕಟ್ಟೆ ಭಜನಾ ಮಂದಿರದ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.

ಕೊಲೆಯಾದ ಪುತ್ರ ಸಾತ್ವಿಕ್(17 ವ.) ಎಂಬವರಾಗಿದ್ದು, ಆತ್ಮಹತ್ಯೆ ಗೈದುಕೊಂಡ ತಂದೆ ಬಾಬು ನಾಯ್ಕ(58ವ.) ಎಂಬವರಾಗಿದ್ದಾರೆ.

ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ದೈಕಿನಕಟ್ಟೆ ಎಂಬಲ್ಲಿ ಘಟನೆ ನಡೆದಿದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ತಂದೆ ಮತ್ತು ಮಗ ಯಾವುದೋ ‌ಕಾರಣಕ್ಕೆ ಜಗಳವಾಡಿಕೊಂಡಿದ್ದು, ಬಳಿಕ‌ ತಂದೆ ತನ್ನ ಏಕೈಕ ಪುತ್ರ ಸಾತ್ವಿಕ್‌ನನ್ನು ಕೊಲೆಗೈದಿದ್ದಾನೆ. ಘಟನೆಗೆ ನಿಜವಾದ ಕಾರಣ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

ಸ್ಥಳಕ್ಕೆ ಬಂಟ್ವಾಳ ನಗರ ವೃತ್ತ ನಿರೀಕಕ್ಷ,‌ ಬೆಳ್ತಂಗಡಿ ಪ್ರಭಾರ ಸರ್ಕಲ್‌ ಇನ್ಸ್‌ಪೆಕ್ಟರ್ ಚೆಲುವರಾಜ್, ಪುಂಜಾಲಕಟ್ಟೆ ಠಾಣಾ ಸಬ್ ಇನ್ಸ್‌ಪೆಕ್ಟರ್ ಗಳಾದ ಸೌಮ್ಯಾ ಮತ್ತು ಕುಟ್ಟಿ ಎಂ.ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.



ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment