ಬೆಳ್ತಂಗಡಿ: ಇಲ್ಲಿನ ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಧನಾತ್ಮಕ ಚಿಂತನೆಯ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಸೋಮಶೇಖರ ಶೆಟ್ಟಿ ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಗುಣಮಟ್ಟದ ಶಿಕ್ಷಣ, ಸರ್ವತೋಮುಖ ವಿಕಸನ ಮತ್ತು ನೈತಿಕ ತಳಹದಿಯ ಶಿಕ್ಷಣವೇ ಸಂಸ್ಥೆಯ ಉದ್ದೇಶ. ವಿದ್ಯಾರ್ಥಿಗಳು ಒಂದು ಸ್ಪಷ್ಟ ಗುರಿ ನಿರ್ಧರಿಸಿಕೊಂಡು ಅದನ್ನು ತಲುಪಲು ಸತತವಾಗಿ ಪ್ರಯತ್ನಿಸ ಬೇಕು. ಏಕಾಗ್ರತೆ, ಸಂಯಮ, ಸಮಯಪಾಲನೆ,ಗುರು ಹಿರಿಯರಿಗೆ ಗೌರವ, ಸತ್ಯ,ಪ್ರಾಮಾಣಿಕತೆ ಯಂತಹ ಮೂಲಭೂತ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಶಾಲಾ ಮುಖೋಪಾಧ್ಯಾಯಿನಿ ಹೇಮಲತಾ ಎಮ್ ಆರ್ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳು ಅನಿಸಿಕೆ ಹಂಚಿಕೊಂಡರು. ಮುರಳಿ ಪಿ ಕಾರ್ಯಕ್ರಮ ನಿರೂಪಿಸಿ. ಸಹಶಿಕ್ಷಕಿ ಚೇತನ ಧನ್ಯವಾದವನಿತ್ತರು.
ಶಾಲಾ ಶಿಕ್ಷಕ ವೃಂದದವರು ಸಹಕರಿಸಿದರು.