Posts

ಬೆಳ್ತಂಗಡಿಯ ವೃದ್ಧ ಸದನದಲ್ಲಿ ಲಯನ್ಸ್ ಮತ್ತು ಸೀನಿಯರ್ ಚೇಂಬರ್ ಆಶ್ರಯದಲ್ಲಿ ಆಹಾರೋತ್ಪನ್ನಗಳ ಕೊಡುಗೆ

1 min read


ಬೆಳ್ತಂಗಡಿ: ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಬೆಳ್ತಂಗಡಿ ಮತ್ತು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಬೆಳ್ತಂಗಡಿ ಮಂಜುಶ್ರೀ ಲೀಜನ್ ಇವುಗಳ ಜಂಟಿ ಆಶ್ರಯದಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಅಂಗವಾಗಿ ಸ್ನೇಹ ಸಂಗಮ- 2022 ಕಾರ್ಯಕ್ರಮದ ಭಾಗವಾಗಿ ಬೆಳ್ತಂಗಡಿ ಸುದೆಮುಗೇರು ಎಂಬಲ್ಲಿರುವ ಅನುಗ್ರಹ ಚಾರಿಟೇಬಲ್ ಟ್ರಸ್ಟ್ ವೃದ್ಧ ಸದನದಲ್ಲಿ ಮಂಗಳವಾರ ನಡೆಯಿತು. 







ಸೇವಾಶ್ರಮದ ಎಲ್ಲಾ ಫಲಾನುಭವಿಗಳ ಜೊತೆಗೆ ಅವರ ಹಸ್ತದಿಂದಲೇ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಜಂಟಿ ಸಂಘಟನೆಗಳ ಆಶ್ರಯದಲ್ಲಿ ಸಂಸ್ಥೆಗೆ ದಿನಸಿ ಹಾಗೂ ನಿತ್ಯೋಪಯೋಗಿ ವಸ್ತುಗಳನ್ನು, ಅಗತ್ಯ ಔಷಧಿಯನ್ನು ಕೊಡುಗೆಯಾಗಿ ಸಮರ್ಪಿಸಲಾಯಿತು.

ಸಮಾರಂಭದ ನೇತೃತ್ವವನ್ನು ಸೀನಿಯರ್ ಚೇಂಬರ್ ಅಧ್ಯಕ್ಷ ಲೇನ್ಸಿ ಎ ಪಿರೇರಾ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ಹೇಮಂತ ರಾವ್ ವಹಿಸಿದ್ದರು‌. ಡಿಕೆಆರ್‌ಡಿಎಸ್ ಸಂಸ್ಥೆಯ ನಿರ್ದೇಶಕ ಫಾ. ಬಿನೋಯ್ ಎ.ಜೆ ಶುಭ ಹಾರೈಸಿದರು. 

ಲಯನ್ಸ್ ಕ್ಲಬ್ ಪ್ರಾಂತ್ಯಾಧ್ಯಕ್ಷ ಧರಣೇಂದ್ರ ಕೆ ಜೈನ್, ಆಶ್ರಮದ ಸೀನಿಯರ್ ಸಿಸ್ಟರ್ ವಿಮಲ್ ರೋಸ್, ಸಿಸ್ಟರ್ ದೀಪಾ ತೋಮಸ್, ಸಿಸ್ಟರ್ ಅಲ್ಫೋನ್ಸ್ ಮರಿಯಾ ಮತ್ತು ಸಿಸ್ಟರ್ ಅನಿ ವರ್ಗೀಸ್, ಲಯನ್ಸ್ ಕಾರ್ಯದರ್ಶಿ ಅನಂತಕೃಷ್ಣ, ಕೋಶಾಧಿಕಾರಿ ಧತ್ತಾತ್ರೇಯ ಜಿ, ಸೀನಿಯರ್ ಚೇಂಬರ್‌ನ ಕಾರ್ಯದರ್ಶಿ 

ಹರೀಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರಾದ ವಿನ್ಸೆಂಟ್ ಟಿ ಡಿಸೋಜಾ ಮತ್ತು  ಜಗದೀಶ್ ಡಿ‌ಸೋಜಾ ಉಪಸ್ಥಿತರಿದ್ದರು. ಜೋನ್ ಅರ್ವಿನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಮತ್ತು ಸೀನಿಯರ್ ಚೇಂಬರ್ ಸಂಘಟನೆಯ ಸದಸ್ಯರುಗಳು ಭಾಗಿಯಾಗಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment