ಬೆಳ್ತಂಗಡಿ; ಕೋಮುಗಲಭೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ ಎಂದು ಚುನಾವಣೆಯ ಸಂದರ್ಭದಲ್ಲಿ ಬೆಳ್ತಂಗಡಿ ಪೊಲೀಸರಿಂದ ಗಡಿಪಾರು ಅದೇಶಕ್ಕೊಳಗಾಗಿರುವ ಚಾರ್ಮಾಡಿಯ ಮಹರೂಫ್ , ಶಬೀಬ್ ಮತ್ತು ಮುಬಶೀರ್ ಅವರ ವಿರುದ್ಧದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಚಾರ್ಮಾಡಿಯಲ್ಲಿ ಬಸ್ಸು ನಿರ್ವಾಹಕನಿಗೆ ಹಲ್ಲೆ ನಡೆಸಿದ್ದಾರೆ ಎಂಬ ಕಾರಣಕ್ಕೆ ಕೇವಲ ಒಂದೇ ಅಪರಾಧ ಪ್ರಕರಣದ ಹಿನ್ನೆಲೆ ಇದ್ದರೂ ಉದ್ದೇಶಪೂರ್ವಕ ಎಂಬಂತೆ ಪೊಲೀಸರು ಈ ಮೂವರು ಬಾಲಕರ ವಿರುದ್ಧ ರೌಡಿ ಶೀಟರ್ ತೆರೆದಿದ್ದರು. ಅದೇ ಆಧಾರಿತವಾಗಿ ಚುನಾವಣೆಯ ಸಂದರ್ಭವನ್ನು ಮುಂದಿಟ್ಟು ಈ ಮೂವರನ್ನೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರು ನಗರದ ಬೆಳಂದೂರು ಪೋಲಿಸ್ ಠಾಣಾ ವ್ಯಾಪ್ತಿಗೆ 3 ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶ ಪುತ್ತೂರು ಸಹಾಯಕ ಕಮೀಷನರ್ ಆದೇಶ ನೀಡಿದ್ದರು. ಇದೀಗ ಸದ್ರಿ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಮೇಲ್ಮನವಿದಾರರಾದ ಮಹರೂಫ್ ಮತ್ತು ಶಬೀಬ್'ರ ರಿಟ್ ಅರ್ಜಿಯನ್ನು ಜಸ್ಟೀಸ್ ನಾಗಪ್ರಸನ್ನರವರ ಏಕಸದಸ್ಯ ಪೀಠ ಹಾಗೂ ಮುಬಶ್ಶಿರ್'ರ ರಿಟ್ ಅರ್ಜಿಯನ್ನು ಜಸ್ಟೀಸ್ ಸಚಿನ್ ಶಂಕರ್ ಮಗದ್ದುಮ್'ರ ಏಕಸದಸ್ಯ ಪೀಠವು ಪರಿಶೀಲಿಸಿ ಈ ಆದೇಶವನ್ನು ಹೊರಡಿಸಿದೆ.
ಅರ್ಜಿದಾರರ ಪರವಾಗಿ ಹೈಕೋರ್ಟ್ ವಕೀಲರುಗಳಾದ ಮಹಮ್ಮದ್ ಮುಸ್ತಾಫ ಕಟ್ಟೆ ಹಾಗೂ ಅನ್ವರ್ ಕೆ.ಪಿ ಕುಪ್ಪೆಟ್ಟಿ ರವರುಗಳು ವಾದಮಂಡಿಸಿದ್ದರು.