Posts

ಮದ್ದಡ್ಕದಲ್ಲಿ ತನ್ನದೇ ಕಚೇರಿ ಉದ್ಘಾಟನೆಗೆ ತೆರಳುತ್ತಿದ್ದ ಯುವ ಇಂಜಿನಿಯರ್ ರಸ್ತೆ ಅಪಘಾತಕ್ಕೆ‌ ಬಲಿ

 


ಬೆಳ್ತಂಗಡಿ: ಮದ್ದಡ್ಕ ಸಮೀಪ ತನ್ನ ಸ್ವಂತ ಕಚೇರಿ ಉದ್ಘಾಟನೆಗೆ ತೆರಳುತ್ತಿದ್ದ ಯುವ ಎಂಜಿನಿಯರ್ ಒಬ್ಬರು ರಸ್ತೆ ಅಪಘಾತಕ್ಕೆ ಬಲಿಯಾದ ದಾರುಣ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.



ಬಂಟ್ವಾಳ ತಾಲೂಕು ಬಾಂಬಿಲ ಸನಿಹದ ಮದ್ದ ನಿವಾಸಿ ಮಾಝಿನ್ (26ವ.) ಎಂವರೇ ಮೃತಪಟ್ಟವರು.





ಬೆಳ್ತಂಗಡಿ ತಾಲೂಕಿನ ಮಾಲಾಡಿ ಸಮೀಪ ಅರ್ಕುಲ ತಿರುವಿನಲ್ಲಿ ಇವರ ಬೈಕಿಗೆ ಯಾವುದೋ‌ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ.

ಅವರ ಕಚೇರಿ ಉದ್ಘಾಟನೆ ಆಮಂತ್ರಣ 

----

ರಸ್ತೆಯಲ್ಲಿ ಬೈಕ್ ಉರುಳಿ, ಅದರ ಪಕ್ಕದಲ್ಲೇ ವ್ಯಕ್ತಿಯೊಬ್ಬರು ಬಿದ್ದಿರುವುದನ್ನು ಕಂಡ ಸ್ಥಳೀಯರು ‌ತಕ್ಷಣ ಗಾಯಾಳುವನ್ನು  ಬೆಳ್ತಂಗಡಿ ಸರಕಾರಿ‌ ಆಸ್ಪತ್ರೆಗೆ  ರವಾನಿಸಿದ್ದು, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ತನ್ನದೇ ಕಚೇರಿ ಉದ್ಘಾಟನೆಯ ಎಲ್ಲಾ ತಯಾರಿ ಮುಗಿಸಿಕೊಂಡಿದ್ದ ಮಾಝಿನ್ ಅತಿಥಿಗಳು ಆಗಮಿಸುವ ಮುನ್ನ ವಸ್ರ್ತ ಬದಲಾಯಿಸಿ ಬರಲೆಂದು ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಘಟನೆ ಆಗಿದೆ ಎಂದು ಮೃತರ ಸ್ನೇಹಿತರು ಮಾಹಿತಿ‌ನೀಡಿದ್ದಾರೆ. ಮೃತರು ವಿದೇಶದಲ್ಲಿ ಉದ್ಯೋಗದಲ್ಲಿ ರುವ ತಂದೆ, ತಾಯಿ, ಇಬ್ಬರು ಸಹೋದರರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.


ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official