Posts

ನಲಿಕೆಯವರ ಸಮಾಜ ಸೇವಾ ಸಂಘದಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಹೆಗ್ಗಡೆ ಭೇಟಿ; ಗೌರವಾರ್ಪಣ

0 min read



ಬೆಳ್ತಂಗಡಿ; ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.‌ಡಿ ವೀರೇಂದ್ರ ಹೆಗ್ಗಡೆಯವರ ಸಮಗ್ರ ಸಾಧನೆಗಾಗಿ ಯು.ಆರ್.ಎಸ್ ಏಷ್ಯಾ  ಒನ್ ಸಂಸ್ಥೆಯು ತನ್ನ ಆರನೇ ಆವೃತ್ತಿಯಲ್ಲಿ ನೀಡಿದ 2020-21 ನೇ ಸಾಲಿನ ಏಷ್ಯಾದ ಶ್ರೇಷ್ಢ ನಾಯಕರು ಪುರಸ್ಕಾರಕ್ಕೆ ಭಾಜನರಾಗಿರುವ ಸಂದರ್ಭ ನಲಿಕೆಯವರ ಸಮಾಜ ಸೇವಾ ಸಂಘ ಬೆಳ್ತಂಗಡಿ ವತಿಯಿಂದ ಸಂಘದ ಪದಾಧಿಕಾರಿಗಳು ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.

ಸಂಘದ ಅಧ್ಯಕ್ಷ ಎಸ್. ಪ್ರಭಾಕರ ಶಾಂತಿಕೋಡಿ‌ ಅವರ ನೇತೃತ್ವದಲ್ಲಿ ಭೇಟಿ ಮಾಡಿದ ಈ ನಿಯೋಗದಲ್ಲಿ ಸಂಘದ ಉಪಾಧ್ಯಕ್ಷ ರಾಮು ಶಿಶಿಲ, ಕಾರ್ಯದಶಿ೯ ತಿಮ್ಮಪ್ಪ, ಕೋಶಾಧಿಕಾರಿ ರಂಜಿನಿ ಮುಂಡಾಜೆ,  ಸದಸ್ಯರುಗಳಾದ ವಿಜಯ ಆರ್, ಓಬಯ್ಯ, ದೈವಾರಾಧನ ಸಮಿತಿಯಾ ಅಧ್ಯಕ್ಷ ಜನಾರ್ದನ ಬಳ್ಳಮಂಜ, ದುಗ್ಗಪ್ಪ ಪೊಕ್ಕಿ, ದುಗ್ಗಪ್ಪ ಶಿರ್ಲಾಲು, ಕಾಂತಪ್ಪ ವೇಣೂರು, ಪ್ರಶಾಂತ್ ಬಳ್ಳಮಂಜ, ಸತೀಶ್ ಪೆರಿಂಜೆ‌ ಮೊದಲಾದವರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment