Posts

ವಸಂತ ಬಂಗೇರ ಕುಟುಂಬದ ವತಿಯಿಂದ ಆರೋಗ್ಯ ಇಲಾಖೆಗೆ 50 ಪಲ್ಸ್ ಆಕ್ಸಿಮೀಟರ್ ಕೊಡುಗೆ ಗೃಹರಕ್ಷಕ ದಳ, ಪೌರ ಕಾರ್ಮಿಕರು, ಇತರ ಸಿಬ್ಬಂದಿಗಳಿಗೆ ಆಹಾರದ ಕಿಟ್,‌ ಎನ್ -95 ಮಾಸ್ಕ್ ವಿತರಣೆ

1 min read


ಬೆಳ್ತಂಗಡಿ; ಮಾಜಿ‌ ಶಾಸಕ‌‌ ವಸಂತ ಬಂಗೇರ ಅವರ ಪುತ್ರಿಯರು ಮತ್ತು ಅಳಿಯಂದಿರ ವತಿಯಿಂದ ತಾ. ಆರೋಗ್ಯ ಇಲಾಖೆಗೆ 50 ಪಲ್ಸ್ ಆಕ್ಸಿಮೀರ್ ಕೊಡುಗೆ, ವಸಂತ ಬಂಗೇರರ ಕುಟುಂಬದ ವತಿಯಿಂದ ತಾಲೂಕಿನ 70 ಮಂದಿ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ, 16 ಮಂದಿ ಪೌರ ಕಾರ್ಮಿಕರಿಗೆ, ಇತರ ,15  ಆಯ್ದ 15 ಕುಟುಂಬಗಳಿಗೆ ಆಹಾರದ ಕಿಟ್ ಮತ್ತು ಮಾಸ್ಕ್ ವಿತರಣೆ ಸೋಮವಾರ ನಡೆಯಿತು.

ಶ್ರೀ ಗುರುನಾರಾಯಣ ಸಂಕೀರ್ಣದ ಆಶಾ ಸಾಲಿಯಾನ ಸಭಾಂಗಣದಲ್ಲಿ‌ ಸರಳ‌ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪಲ್ಸ್ ಆಕ್ಸಿಮೀಟರ್ ಮತ್ತು 200 ಮಾಸ್ಕ್‌ಗಳನ್ನು ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸಿಸ್ಟರ್, ಆಶಾ ಮೆಂಟರ್ ಹರಿಣಿ, ಪುಷ್ಪಾ ಇವರು ಸ್ವೀಕರಿಸಿದರು.

ಸಮಾರಂಭದಲ್ಲಿ ವಸಂತ ಬಂಗೇರರ ಹಿರಿಯ ಪುತ್ರಿ ಪ್ರೀತಿತಾ ವಿಜೇತ್,ಮತ್ತು ಅಳಿಯ ಧರ್ಮವಿಜೇತ್,ಕಿರಿಯ ಪುತ್ರಿ ಬಿನುತಾ ಸಂಜೀವ್ ಮತ್ತು ಅಳಿಯ ಸಂಜೀವ್,  ಕಾನೆಕ್ಕಲ್, ಮೊಮ್ಮಕ್ಕಳಾದ ಪೂರ್ವಿಕಾ, ವೇದಾಂತ್ ಸುಬ್ರಹ್ಮಣ್ಯ ಮತ್ತು ಮತ್ತು ಖುಷಿ, ಮುಖಂಡರಾದ ರಂಜನ್ ಜಿ ಗೌಡ, ಬಿ.ಕೆ ವಸಂತ್, ಅನೂಪ್ ಜೆ ಬಂಗೇರ, ಪಟ್ಟಣ‌ ಪಂಚಾಯತ್ ಸದಸ್ಯರಾದ ಜಗದೀಶ್ ಡಿ ಮತ್ತು ಜನಾರ್ದನ ಕುಲಾಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ ಸ್ವಾಗತಿಸಿದರು. ಗೃಹರಕ್ಷಕ ದಳದ ಸಿಬ್ಬಂದಿ ವಿನೋದ್‌ರಾಜ್ ಆಳ್ವ ವಂದಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment