Posts

ವಿಶೇಷ ಕಾರ್ಯಕ್ರಮ‌ ಸಾದರಪಡಿಸಲು ನಾಲ್ವರು ಕಲಾವಿದರು ದುಬಾಯಿಗೆ

1 min read

ಬೆಳ್ತಂಗಡಿ; ಸಾಂಪ್ರದಾಯಿಕ ಸ್ಯಾಕ್ಸೋಫೋನ್ ವಾದನ ಕ್ಷೇತ್ರದಲ್ಲಿ ಅತ್ಯುನ್ನತ ಕಲಾವಿದರಾಗಿ ಮೂಡಿಬಂದಿರುವ ಹಾಗೂ ಇದೇ ಕ್ಷೇತ್ರಕ್ಕೆ ಪೂರಕವಾಗಿರುವ ಕಲಾಪ್ರಕಾರಗಳಲ್ಲಿ ಅತ್ಯಪೂರ್ವ ಸಾಧನೆ ಮಾಡಿ ಹೆಮ್ಮೆಯ ಕಲಾವಿದರಾಗಿ ಗುರುತಿಸಿಕೊಂಡಿರುವ ನಾಲ್ವರು ಕಲಾವಿದರು ಡಿ. 26 ರಂದು  ದುಬಾಯಿಯಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ‌ ವಿಶೇಷ ಕಾರ್ಯಕ್ರಮ ನೀಡುವುದಕ್ಕಾಗಿ ತೆರಳಲಿದ್ದಾರೆ.

ಸ್ಯಾಕ್ಸೋಫೋನ್ ವಾದನ ಕ್ಷೇತ್ರದಲ್ಲಿ  ಹೆಸರಾಂತ ಹಿರಿಯ ಕಲಾವಿದರಾಗಿ ಗುರುತಿಸಿಕೊಂಡಿರುವ ಪಿ ಹರಿದಾಸ ಡೋಗ್ರ ಬೆಳ್ತಂಗಡಿ ಮತ್ತು ಧರ್ಮಸ್ಥಳ ಬಿ ಪ್ರಕಾಶ ದೇವಾಡಿಗ,ತವಿಲ್ ವಾದಕರಾದ ಹೊನ್ನಪ್ಪ ದೇವಾಡಿಗ ಬಳ್ಳಮಂಜ ಹಾಗೂ ತಬಲಾ ವಾದಕರಾದ ಸುಮನ್ ರಾಜರತ್ನಂ ದೇವಾಡಿಗ ಪುತ್ತೂರು ಅವರು ಈ ಹೆಮ್ಮೆಯ ಕಲಾವಿದರಾಗಿದ್ದಾರೆ. ಇವರಿಗೆ ದುಬಾಯಿ ಪಾರ್ಕ್ ಹಯಾತ್ ಮೈನ್‌ಬಲ್‌ರೂಮ್ ದುಬಾಯಿ ಕ್ರೀಕ್ ಇಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ.

ಪಿ ಹರಿದಾಸ ಡೋಗ್ರ ಅವರು ಪ್ರಖ್ಯಾತ ಸ್ಯಾಕ್ಸೋಫೋನ್ ವಾದನ  ಕ್ಷೇತ್ರದಲ್ಲಿ ಆಕಾಶವಾಣಿ ಕಲಾವಿದರಾಗಿ ಮಾನ್ಯತೆ ಪಡೆದಿರುವ ಹಿರಿಯ ಕಲಾವಿದರಾಗಿದ್ದು, ದೇಶ ವಿದೇಶಗಳಲ್ಲಿ ಹಲವು ಕಾರ್ಯಕ್ರಮ ನೀಡಿದವರಾಗಿದ್ದಾರೆ. 

ಡಿ. ಬಿ ಪ್ರಕಾಶ ದೇವಾಡಿಗ ಅವರು ಆಕಾಶವಾಣಿ ಮತ್ತು ದೂರದರ್ಶನ ಎ ಗ್ರೇಡ್ ಕಲಾವಿದರಾಗಿದ್ದು ಕಳೆದ 25. ವರ್ಷಗಳಿಂದ ಮುಂಬೈ, ಚೆನ್ನೈ, ಸಹಿತ ಅಮೇರಿಕಾದಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಪ್ರಸ್ತುತ ಶ್ರೀ ಜನಾರ್ದನ ದೇವಸ್ಥಾನ ಉಜಿರೆ ಇಲ್ಲಿನ ಪ್ರಮುಖ ವಾದಕರಾಗಿದ್ದಾರೆ. 

ಹೊನ್ನಪ್ಪ ದೇವಾಡಿಗ ಬಳ್ಳಮಂಜ ಅವರು ಪಕ್ಕವಾದ್ಯವಾದ ತವಿಲ್ ವಾದನದಲ್ಲಿ ಕಳೆದ 25 ವರ್ಷಗಳಿಂದ ಅನುಭವಿಯಾಗಿದ್ದು ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರಸಿದ್ದಿ ಪಡೆದಿದ್ದಾರೆ‌. ಮತ್ತೋರ್ವ ತಬಲಾ ವಾದನದಲ್ಲಿ  ಕಳೆದ 5 ವರ್ಷಗಳಲ್ಲಿ ಹೆಸರು ಗಳಿಸಿರುವ ಸುಮನ್ ರಾಜರತ್ನಂ ದೇವಾಡಿಗ ಪುತ್ತೂರು ಅವರು ಪ್ರಸಿದ್ಧ ಕಲಾವಿದರ ಜೊತೆಗೆ ತಬಲಾ ವಾದನ ಹಂಚಿಕೊಂಡಿದ್ದು ಭವಿಷ್ಯದ ಕಲಾವಿದರಾಗಿ ಗಮನಸೆಳೆದಿದ್ದಾರೆ.

----

ಅಚ್ಚು ಮುಂಡಾಜೆ, ಪ್ರಿನ್ಸಿಪಲ್ ಎಡಿಟರ್, ಲೈವ್ ಮೀಡಿಯಾ ಟೀಮ್: 9449640130

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment