Posts

ಉರೂಸಿಗೆ ಆಗಮಿಸುವ ಎಲ್ಲರನ್ನೂ ಅತಿಥಿಗಳೆಂದೇ ಗೌರವಿಸಿ; ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ

1 min read

 


ಬೆಳ್ತಂಗಡಿ; ಕಾಜೂರು ದರ್ಗಾ ಶರೀಫ್ ನಲ್ಲಿ ನಡೆಯುವ ಉರೂಸ್ ಕಾರ್ಯಕ್ರಮಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು ಇಲ್ಲಿನ‌ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಇಲ್ಲಿನ‌ ಆಡಳಿತ ಮಂಡಳಿ‌ ಮತ್ತು ಸ್ವಯಂ ಸೇವಕರು ಎಲ್ಲಾ ಆಹ್ವಾನಿತರನ್ನು ಅತಿಥಿಗಳಂತೆ ಗೌರವಿಸಬೇಕು ಎಂದು ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್   ಸಂದೇಶ್ ಪಿ.ಜಿ ಮಾರ್ಗದರ್ಶನ ನೀಡಿದರು.

ಕಾಜೂರು ಉರೂಸ್ ಕಾನೂನು ಸುವ್ಯವಸ್ತೆಯ ಬಗ್ಗೆ ಸಮಿತಿ‌ ಜೊತೆಗೆ ಶನಿವಾರ ನಡೆದ ವಿಶೇಷ ಸಭೆಯಲ್ಲಿ‌ ಅವರು ಮಾತನಾಡುತ್ತಿದ್ದರು.




ಸಭೆಯ ಅಧ್ಯಕ್ಷತೆಯನ್ನು  ಉರೂಸ್ ಸಮಿತಿ‌ ಅಧ್ಯಕ್ಷ ಕೆ.ಯು ಇಬ್ರಾಹಿಂ ವಹಿಸಿದ್ದು,  ಪೊಲೀಸ್ ಇಲಾಖೆಯ ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ಸರ್ಕಲ್‌ ಇನ್ಸ್‌ಪೆಕ್ಟರ್ ರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ  ಪ್ರ.‌ಕಾರ್ಯದರ್ಶಿ  ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಉಪಾಧ್ಯಕ್ಷ ಕೆ.ಮುಹಮ್ಮದ್ ಕಿಲ್ಲೂರು, ಕೋಶಾಧಿಕಾರಿ ಕೆ.ಎಮ್ ಕಮಾಲ್ ಕಾಜೂರು, ಪ್ರಮುಖರಾದ ಎಂ. ಅಬೂಬಕ್ಕರ್ ಮಲ್ಲಿಗೆಮನೆ, ಅಬ್ದುಲ್ ರಹಿಮಾನ್ ಕಾಜೂರು, ಬಿ.ಹೆಚ್ ಅಬ್ದುಲ್ ಹಮೀದ್, ಬದ್ರುದ್ದೀನ್, ಗ್ರಾ.ಪಂ ಸದಸ್ಯರಾದ ಶಾಹುಲ್ ಹಮೀದ್ ಮತ್ತು ಕೆ.ಯು ಮುಹಮ್ಮದ್, ಮೆನೇಜರ್ ಶಮೀಮ್, ಸಿದ್ದೀಕ್ ಕೆ.ಹೆಚ್, ಎನ್.ಎಂ ಯಾಕೂಬ್, ಎ.ಯು ಮುಹಮ್ಮದ್ ಅಲಿ,  ಮೊದಲಾದವರು ಉಪಸ್ಥಿತರಿದ್ದರು.

ಉರೂಸ್ ಸಮಿತಿ ಸದಸ್ಯ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕುಂತೂರು ಪ್ರಸ್ತಾವನೆಗೈದು ಸ್ವಾಗತಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment