Posts

ಚಿಬಿದ್ರೆ ಮಸ್ಜಿದ್ ನಿರ್ಮಾತೃ, ಉದ್ಯಮಿ‌‌ ಕಕ್ಕಿಂಜೆಯ ದಾವೂದ್ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನ

1 min read

ಬೆಳ್ತಂಗಡಿ; ಚಿಬಿದ್ರೆ ಗ್ರಾಮದ ಬೋಂಟ್ರಪಾಲ್ ಮಸ್ಜಿದುನ್ನೂರ್ ಇದರ‌ ನಿರ್ಮಾತೃವಾಗಿದ್ದ ಯಶಸ್ವಿ ಉದ್ಯಮಿ ದಾವೂದ್ ಹಾಜಿ (51) ಅವರು ಹೃದಯಾಘಾತದಿಂದ ಚೆನ್ನೈನಲ್ಲಿ ಆ. 7 ರಂದು ಮಧ್ಯ ರಾತ್ರಿ ಅಸುನೀಗಿದ್ದಾರೆ. 

ಆರಂಭ ಕಾಲದಿಂದಲೂ ಚೆನ್ನೈನಲ್ಲಿ "ದಾನಿಶ್ ಎಗ್ ಮಾರ್ಟ್" ಎನ್ನುವ ಸಂಸ್ಥೆ ಸ್ಥಾಪಿಸಿ ಯಶಸ್ವಿ ಉದ್ಯಮಿ ಎನಿಸಿದ್ದ‌ ದಾವೂದ್ ಅವರು ಚಿಬಿದ್ರೆಯ ಬೋಂಟ್ರಪಾಲ್ ದಿ. ಅಬ್ದುಲ್ ರಹಿಮಾನ್ ಮತ್ತು ನಫೀಸಾ ದಂಪತಿ ಪುತ್ರ.

ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿಯುಳ್ಳವರಾಗಿದ್ದ‌ ಅವರು ಈ ಹಿಂದೆ ಕಕ್ಕಿಂಜೆ ಕೇಂದ್ರ ಜುಮ್ಮಾ ಮಸ್ಜಿದ್ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. 'ಸಮಸ್ತ' ಸಂಘಟನೆಯ ಕಾರ್ಯಕರ್ತರಾಗಿದ್ದರು. 

ಆ.7 ರ ಮಧ್ಯ‌ರಾತ್ತಿ ಅವರಿಗೆ ಹೃದಯಾಘಾತವಾಗಿದ್ದು ಅವರು ಕೊನೆಯುಸಿರೆಳೆದಿದ್ದಾರೆ. ಅವರ ಮೃತದೇಹವನ್ನು ಆ.8 ರಂದು  ಶರೀಫ್ ಯು ಮತ್ತು ಅಝರ್ ಎ.ಕೆ ಅವರ ಸಹಕಾರದೊಂದಿಗೆ ಊರಿಗೆ ತರಲಾಗಿದ್ದು ಸಾರ್ವಜನಿಕ ದರ್ಶನದ ಬಳಿಕ ಕಕ್ಕಿಂಜೆ ಮಸ್ಜಿದ್ ವಠಾರದಲ್ಲಿ ದಫನ ನಡೆಸಲಾಗಿದೆ. 

ಚಿಬಿದ್ರೆಯಲ್ಲಿ ಅವರು ಕಟ್ಟಿಸಿದ ಮಸ್ಜಿದ್ 2010 ನೇ ಆ.8 ರಂದು ಉದ್ಘಾಟನೆಗೊಂಡಿದ್ದು ಅದೇ ಆ.8 ರಂದು ಮೃತರಾದ ಅವರ ಮೃತದೇಹದ ಮಯ್ಯತ್ ನಮಾಝ್ ಅನ್ನು ಅವರೇ ಕಟ್ಟಿಸಿದ ಮಸ್ಜಿದ್‌ನಲ್ಲಿ ಪ್ರಥಮವಾಗಿ ನಿರ್ವಹಿಸುವಂತಾದುದು ವಿಶೇಷವಾಗಿತ್ತು. 

ಮೃತರು ಪತ್ನಿ ಫಿರೋಝಾ, ಇಬ್ಬರು ಮಕ್ಕಳಾದ ದಾನಿಶ್ ಮತ್ತು ಶೈಮಾ, ಸಹೋದರರಾದ ಇಬ್ರಾಹಿಂ ಕೆ ಮತ್ತು ಯಾಸಿರ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.ಅವರ ಸಹೋದರ ಸ್ವಾಲಿಹ್ ಹಾಜಿ ಅವರು ಈ ಹಿಂದೆಯೇ ಅನಾರೋಗ್ಯದಿಂದ ನಿಧನರಾಗಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment