ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ವೈಎಸ್ ಬ್ರಾಂಚ್ ಅಧ್ಯಕ್ಷ ಬಿ.ಕೆ ಹಸನ್ ಸಖಾಫಿ ವಹಿಸಿದ್ದರು.
ಸಮಾರಂಭದಲ್ಲಿ ಶಾಖೆಯ ಪ್ರಧಾನ ಕಾರ್ಯದರ್ಶಿ ಹಾಜಿ ಹಸೈನಾರ್ ಶಾಫಿ ಗುರುವಾಯನಕೆರೆ, ಕೋಶಾಧಿಕಾರಿ ಅಬ್ದುಲ್ ಹಮೀದ್ ಮುಸ್ಲಿಯಾರ್, ಗುರುವಾಯನಕೆರೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ಲತೀಫ್, ಶಾಖಾ ಉಸ್ತುವಾರಿ ಅಬೂಸ್ವಾಲಿಹ್ ನಾಳ, ಪ್ರಮುಖರಾದ ಅಬ್ಬಾಸ್ ಕೆಸಿಎಫ್ ಒಮಾನ್, ಸಲೀಂ ಸುನ್ನತ್‌ಕೆರೆ, ಇಕ್ಬಾಲ್, ಸುಲೈಮಾನ್, ಆಲಿಯಬ್ಬ, ಉಸ್ಮಾನ್ ಜಿ, ಬಶೀರ್ ಮೇಲಂತಬೆಟ್ಟು, ಶೇಕುಂಞಿ, ಅಶ್ರಫ್ ಹೊಟೇಲ್, ಅಬ್ಬಾಸ್ ದಿಲ್‌ದಾರ್, ಬಾವುಂಜ್ಞಾಕ, ಶರೀಫ್ ಸಅದಿ, ಇಸ್ಮಾಯಿಲ್ ಸಅದಿ, ಇಸಾಕ್, ರಾಫಿ, ಹಾಗೂ ಎಸ್ಸೆಸ್ಸೆಫ್ ಗುರುವಾಯನಕೆರೆ, ಸುನ್ನತ್‌ಕೆರೆ ಶಾಖೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.
ಗುರುವಾಯನಕೆರೆ ಜುಮ್ಮಾ ಮಸ್ಜಿದ್ ನಲ್ಲಿ ಕಳೆದ 48 ವರ್ಷಗಳಿಂದ ಜನಮೆಚ್ಚುವ ರೀತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಜಿ ಶೈಖ್ ಆದಂ ಸಾಹೇಬ್ ಅವರನ್ನು ಅಭಿನಂದಿಸಲಾಯಿತು.