ಬೆಳ್ತಂಗಡಿ: ಕಮ್ಯುನಿಸ್ಟ್ ಚಳವಳಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಪದ್ಮುಂಜ ಶಾಖಾ ಸದಸ್ಯರಾಗಿದ್ದು ಆನಂದ (44ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾಗಿದ್ದಾರೆ.
ಇವರು ಪಕ್ಷದ ಪೂರ್ಣಕಾಲದ ಕಾರ್ಯಕರ್ತೆಯಾಗಿ ದುಡಿಯುತ್ತಿರುವ ಪಕ್ಷದ ತಾಲೂಕು ಸಮಿತಿ ಸದಸ್ಯೆಯೂ, ಕಾರ್ಮಿಕ ನಾಯಕಿಯೂ ಆಗಿರುವ ಈಶ್ವರಿ ಅವರ ಹಿರಿಯ ಸಹೋದರರಾಗಿದ್ದಾರೆ.
ತುಂಬಿದ ಕುಟುಂಬದಲ್ಲಿ ಇರುವ ಇವರು ಇಬ್ಬರು ಸಹೋದರರು, ಐವರು ಸಹೋದರಿಯರನ್ನು, ಪತ್ಮಿಹಾಗೂ ಇಬ್ಬರು ಎಳೆಯ ಮಕ್ಕಳನ್ನು ಅಗಲಿದ್ದಾರೆ.
ಕಟ್ಟಡ ನಿರ್ಮಾಣ ಸಂಘಟನೆಯ ತಾಲೂಕು ಪದಾಧಿಕಾರಿಯಾಗಿ, ದಲಿತ ಹಕ್ಕು ರಕ್ಷಣಾ ಸಮಿತಿಯ ತಾಲೂಕು ಸಮಿತಿ ಸದಸ್ಯರಾಗಿಯೂ ಸೇವೆ ನೀಡಿದ್ದಾರೆ. ಇವರ ಅಕಾಲಿಕ ನಿಧನಕ್ಕೆ ಕಾರ್ಮಿಕ ಮುಖಂಡ ಬಿ.ಎಂ ಭಟ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.