Posts

ಅಲ್ಲಾಹು‌ ಅಕ್ಬರ್ ಎಂದರೆ ಹಿಂದೂಗಳನ್ನು ಕೊಲ್ಲಿ!? ಹಾರಿಕಾ ವಿರುದ್ಧ ಮುಸ್ಲಿಂ ಸಂಘಟನೆಗಳು ಕೆಂಡಾಮಂಡಲ

1 min read

 



ಪೆರಾಲ್ದರಕಟ್ಟೆ ಮಸೀದಿ ಸಮಿತಿಯಿಂದ ಪ್ರಥಮ ದೂರು

ಬೆಳ್ತಂಗಡಿ; ಬೆಳ್ತಂಗಡಿಯಲ್ಲಿ ಸೋಮವಾರ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಕಿನ್ಯಮ್ಮ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗೀತಾ ಜಯಂತಿ ಸೌರ್ಯ ಪಥಸಂಚಲನ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಾರಿಕಾ ಮಂಜುನಾಥ್ ಅವರು ಮುಸ್ಲಿಮರ ಆಝಾನ್( ಮಸೀದಿಯಲ್ಲಿ 5 ಬಾರಿ ಮೊಳಗುವ ಸಂದೇಶ) ಬಗ್ಗೆ ಅವಹೇಳನಕಾರಿಯಾಗಿ ತಪ್ಪು ವ್ಯಾಖ್ಯಾನ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಅಲ್ಲಾಹು ಅಕ್ಬರ್ ಎಂದು ಮಸೀದಿಯಲ್ಲಿ ಐದು ಬಾರಿ ಕೂಗುವುದರ ಅರ್ಥ ಏನೆಂದರೆ ಹಿಂದೂಗಳನ್ನು ಕೊಲ್ಲಿ ಎಂದು ಹೇಳುವುದಾಗಿದೆ ಎಂದು ಕಪೋಲಕಲ್ಪಿತ ಹೇಳಿಕೆ ನೀಡಿದ್ದಾರೆ. ಇದು ಧರ್ಮದ ಬಗ್ಗೆ ಅವಹೇಳನ ಮಾತ್ರವಲ್ಲದೆ ತಪ್ಪು ವ್ಯಾಖ್ಯಾನ ಮಾಡಿ ಗಲಭೆಗೆ ಪ್ರಚೋದನೆ ನೀಡಿದಂತೆ ಎಂದು ಮುಸ್ಲಿಂ ಸಂಘಟನೆಗಳು ಮತ್ತು ತಾಲೂಕಿನಲ್ಲಿರುವ120 ರಷ್ಟು ಮಸೀದಿಗಳ ಒಕ್ಕೂಟ ಖಂಡನೆ ವ್ಯಕ್ತಪಡಿಸಿದೆ.
ಹಾರಿಕಾ ಮಂಜುನಾಥ ಅವರು ಬಾಂಗ್ ಬಗ್ಗೆ ವಿವರಿಸುತ್ತಾ, ನಿಮ್ಮನ್ನೇ ಕೊಲ್ಲಿ ಎಂದು ಬಹಿರಂಗವಾಗಿ ಧ್ವನಿ ವರ್ಧಕದ ಮೂಲಕ ಕೂಗಿ ಹೇಳುವ ಮಸೀದಿಗೆ ಬೇನರ್ ಹಾಕಿ ನಮ್ಮನ್ನೆಲ್ಲಾ "ಮಸೀದಿ ನೋಡ ಬನ್ನಿ " ಎಂದು ಕರೆಯುತ್ತಿದ್ದಾರೆ. ಅಲ್ಲಿಗೆ ಹೋಗಿ ಬರುವ ಹಿಂದೂಗಳೂ ಕೂಡ , ನಮಗೂ ಮಸೀದಿಯಲ್ಲಿ ಏನು ನಡೆಯುತ್ತದೋ‌ಎಂಬ ಸಂದೇಹವಿತ್ತು. ಇಲ್ಲಿಗೆ ಬಂದ ನಂತರ ನಮ್ಮ ಸಂದೇಹ ಪರಿಹಾರವಾಗಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಅವರ ಆಝಾನ್ ನ ಅರ್ಥ ನಮ್ಮ‌ಹಿಂದೂ ಸಮಾಜಕ್ಕೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಸ್ಲಿಂ ಮುಖಂಡರುಗಳು, ಮುಸ್ಲಿಂ ಒಕ್ಕೂಟ, ಜಮಾಅತ್ ಗಳ ಒಕ್ಕೂಟ, ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ಸೆಸ್ಸೆಫ್, ಎಸ್‌ಕೆಎಸ್‌ಎಸ್ಎಫ್, ಎಸ್‌ವೈಎಸ್, ಪಿಎಫ್‌ಐ, ಮುಸ್ಲಿಂ ಸಂಘಟನೆಗ ಒಕ್ಕೂಟ ಬೆಳ್ತಂಗಡಿ ಮೊದಲಾದ ಸಂಘಟನೆಗಳು ತುರ್ತು ಸಭೆ ಸೇರಿದ್ದು, ಹಾರಿಕಾ ಮಂಜುನಾಥ ಅವರ ಮೇಲೆ ಧರ್ಮನಿಂದನೆ, ತಪ್ಪು‌ಸಂದೇಶ ರವಾನೆ, ಗಲಭೆಗೆ ಪ್ರಚೋದನೆ ಇತ್ಯಾಧಿ ವಿಚಾರಗಳನ್ನು ಮುಂದಿಟ್ಟು ದೂರು ನೀಡಲು ತೀರ್ಮಾನಿಸಿದೆ. ಅಗತ್ಯ ಬಿದ್ದಲ್ಲಿ ವೇದಿಕೆ ರಚಿಸಿ ಪ್ರತಿಭಟನೆಯೊಂದಿಗೆ ಆಝಾನ್ ನ ಅರ್ಥ ವ್ಯಾಖ್ಯಾನವನ್ನು ಎಲ್ಲರಿಗೂ ಅರ್ಥವಾಗುವಂತೆ ಕನ್ನಡದಲ್ಲಿ ತಿಳಿಸಿಕೊಡಲು ನಿರ್ಧರಿಸಿದೆ. 


ಸದ್ರಿ‌ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬಾಂಗ್(ಆಝಾಮ್)ನ ಕನ್ನಡ ಅರ್ಥದ ವೀಡಿಯೋ ಚಿತ್ರಿಸಿ ಯೂಟ್ಯೂಬ್ ಮೂಲಕ ಶೇರ್ ಮಾಡಿದ್ದಾರೆ. ಅಕ್ಷರಗಳ ಮೂಲಕವೂ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹಾರಿಕಾ ಮಂಜುನಾಥ ಅವರ ವಿರುದ್ಧ ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ಆಡಳಿತ ಸಮಿತಿ ವೇಣೂರು ಠಾಣೆಯಲ್ಲಿ ಪ್ರಥಮ‌ ದೂರು ನೀಡಿದ್ದಾರೆ. ನಿಯೋಗದಲ್ಲಿ ಮಸೀದಿ ಅದ್ಯಕ್ಷ ನವಾಜ್ ಶರೀಫ್ ಕಟ್ಟೆ, ಪ.ಕಾರ್ಯದರ್ಶಿ ನಝೀರ್ ಕಾಂತಿಜಾಲ್, ಮಸೀದಿ ಗುರುಗಳಾದ ರಫೀಕ್ ಅಝ್ಹರಿ, ಎಸ್‌ಕೆಎಸ್‌ಎಸ್ಎಫ್ ಅದಕ್ಷ  ಸುಲೈಮಾನ್ ಗಿಂಡಾಡಿ,  ಕೋಶಾಧಿಕಾರಿ ಸಿದ್ದೀಕ್ ಮಸೀದಿ ಬಳಿ, ಮುಸ್ತಫಾ ಮಂಜೊಟ್ಟಿ ಉಪಸ್ಥಿತರಿದ್ದರು.

ಮೋದಿ‌ ಜಾಗಟೆ ವೀಡಿಯೋ ಟ್ರೋಲ್;
ವಿವಾದದ ಜೊತೆಗೆ ಕೆಲವರು ಇದೇ ಹಾರಿಕಾ ಅವರು ಅಂದು ಪ್ರಧಾನಿ ಅವರು ಗಂಟೆ ಜಾಗಟೆ ಬಡಿಯಲು ಮರೆ ನೀಡಿದಾಗ ಇದೇ ಹಾರಿಕಾ ಅವರು ಅದನ್ನು ಬೆಂಬಲಿಸಿ ಮಾಡಿದ ವೀಡಿಯೋ ವನ್ನು ಯೂಟ್ಯೂಬ್ ನಿಂದ ಪಡೆದು ಅದನ್ನು ಟ್ರೋಲ್ ಮಾಡುತ್ತಿದ್ದಾರೆ.
ಹಾರಿಕಾ ಒಳ್ಳೆಯ ಪ್ರತಿಭಾನ್ವಿತ ಯುವತಿ.‌ಭಾಷಣ ಕಲೆ‌ಕರಗತ ಮಾಡಿಕೊಂಡಿದ್ದಾರೆ. ಅವರನ್ನು ಈ‌ರೀತಿ ತಪ್ಪು ಸಂದೇಶ ನೀಡಿ ಇಲ್ಲಿನ‌ ಸಂಘಟಕರು ಧರ್ಮ ಭಾಹಿರವಾಗಿ ನಡೆದುಕೊಳ್ಳುವಂತೆ ದುಶ್ಪ್ಋರರಣೆ ನೀಡಿದ್ದಾರೆ ಎಂದೂ ಕೆಲವರು ಸಂದೇಶ ರವಾನಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment