Posts

ಇಂಧನ‌ ಬೆಲೆ‌‌ಏರಿಕೆ: ಕೊಕ್ಕಡದಲ್ಲೂ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

1 min read


ಬೆಳ್ತಂಗಡಿ:ಕೊರೊನ ಎರಡನೇ ಅಲೆಯ ಸಮಸ್ಯೆ ನಡುವೆಯೂ ಪೆಟ್ರೋಲಿಯಂ ಉತ್ಪನ್ನಗಳಿಗೆ 3 ಪಟ್ಟು ತೆರಿಗೆ ವಸೂಲಾತಿ ಮಾಡುತ್ತಾ  ಪೆಟ್ರೋಲ್ ದರವನ್ನು ನೂರರ ಗಡಿದಾಟಿಸಿ ಜನಸಾಮಾನ್ಯರ, ದೈನಂದಿನ ವಾಹನ ಸವಾರರ ಬದುಕಿನ ಜೊತೆ ಆಟವಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ ನೇತೃತ್ವದಲ್ಲಿ ಕೊಕ್ಕಡದಲ್ಲಿ‌ ರವಿವಾರ ಪ್ರತಿಭಟನೆ ನಡೆಯಿತು.

ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೇಶವ ಪಿ ಗೌಡ ಬೆಳಾಲು, ಕಾಂಗ್ರೆಸ್ ಯುವ ಮುಖಂಡ ಅಭಿನಂದನ್ ಹರೀಶ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಕಾರ್ಯದರ್ಶಿ ಪ್ರವೀಣ್ ವಿ.ಜಿ, ದಯಾನಂದ ಬೆಳಾಲು, ಪ್ರಮುಖರಾದ ಎ. ಸಿ ಮ್ಯಾಥ್ಯೂ, ಸನ್ನಿ ಕೊಕ್ಕಡ, ಸುಬ್ರಮಣ್ಯ ಶಬರಾಯ, ಹಕೀಂ ಕೊಕ್ಕಡ, ಸೆಬಾಸ್ಟಿಯನ್ ಪಿ.ಟಿ, ನಿತ್ಯಾನಂದ ರೈ, ಅಶೋಕ್ ಭಟ್ ಕಳೆಂಜ, ಶ್ರೀಧರ ರಾವ್ ಶಿಬಾಜೆ, ರೋಯ್ ಪುದುವೆಟ್ಟು, ಅಭಿ ಅರಿಗ ಧರ್ಮಸ್ಥಳ, ಕಲಂದರ್ ಕೊಕ್ಕಡ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment