Posts

ಎಸ್ಸೆಸ್ಸೆಫ್ ಕಕ್ಕಿಂಜೆ ಶಾಖೆಗೆ ನೂತನ ಸಾರಥ್ಯ

1 min read

ಬೆಳ್ತಂಗಡಿ: ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಕಕ್ಕಿಂಜೆ ಶಾಖೆಯ ಮಹಾಸಭೆಯು ಕಕ್ಕಿಂಜೆ ಎಸ್ಸೆಸ್ಸೆಫ್ ನಿಕಟಪೂರ್ವ ಅಧ್ಯಕ್ಷ ಸ್ವಾದಿಕ್ ಹನೀಫಿ ಅಧ್ಯಕ್ಷತೆಯಲ್ಲಿ ಜಿ.ಕೆ ಹೌಸ್ ಮರ್ಹೂಮ್ ಮುಸ್ತಾಫ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪಿ.ಎಸ್ ಅಬ್ದುರ್ರಹ್ಮಾನ್ ಬಾಖವಿ ಉದ್ಘಾಟಿಸಿದರು. ಅತಾವುಲ್ಲಾ ಹಿಮಮಿ ಸಖಾಫಿ ಅಲ್ ಹಾದಿ ಕುಪ್ಪೆಟ್ಟಿ ಮಾತನಾಡಿ, ನಮ್ಮ ವಿದ್ವಾಂಸರು ಸಂಘಟನೆಗೆ ಬೇಕಾಗಿ ಕಷ್ಟಪಟ್ಟು ದುಡಿದು ನೇತೃತ್ವ ಕೊಟ್ಟ ಬಗ್ಗೆ ಸ್ಮರಿಸಿ, ಇಂತಹ ಸಂಘಟನೆಯಲ್ಲಿ ನಾವು ಇಖ್ಲಾಸ್ ನಲ್ಲಿ ಕಾರ್ಯಚರಿಸಿ ಇನ್ನಷ್ಟು ಅಭಿವೃದ್ಧಿಗೊಳಿಸಬೇಕು. ಸಂಘಟನೆಯ ಕಾರ್ಯಚಟುವಟಿಕೆಗಳು ಮತ್ತು ನಮ್ಮ ಒಳ್ಳೆಯ ಗುಣ ನಡತೆಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ನಾವು ಇತರರಿಗೆ ಮಾದರಿಯೋಗ್ಯರಾಗಬೇಕು. ರೋಗಿ ಮತ್ತು ಮರಣ ಹೊಂದಿದ ಮನೆಗಳಿಗೆ ತೆರಳಿ ಪ್ರಾರ್ಥನೆ ನಡೆಸಿ ಅವರನ್ನು ಸಾಂತ್ವನ ಪಡಿಸುವ ಕಾರ್ಯವನ್ನು ಹೆಚ್ಚಿಸಬೇಕು ಎಂದು ಹೇಳಿ ಸಂಘಟನೆಯ ಮಹತ್ವವನ್ನು ವಿವರಿಸಿ ತರಗತಿ ನಡೆಸಿದರು.

ಚುನಾವಣಾ ವೀಕ್ಷಕರಾಗಿ ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ನಾಯಕ ಮಜೀದ್ ಅತ್ತಾಜೆ, ಅನ್ವರ್ ಅತ್ತಾಜೆ ಹಾಗೂ ಮುಬೀನ್ ಉಜಿರೆಯವರ ನೇತೃತ್ವದಲ್ಲಿ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳ ವಿವರ:

ಅಧ್ಯಕ್ಷರು: ಎಸ್.ಎಚ್ ಮುಸ್ತಾಫ ಸಅದಿ, ಪ್ರಧಾನ ಕಾರ್ಯದರ್ಶಿ ಇರ್ಷಾದ್ ಪಾದೆ, ಕೋಶಾಧಿಕಾರಿ ಫಾರೂಕ್ ಡಿ.ಮಜಲ್. ಉಪಾಧ್ಯಕ್ಷರಾಗಿ ಹುಸೈನ್ ಸಖಾಫಿ ಗಾಂಧಿನಗರ, ಝೈದ್ ಬಾಹಸನಿ, ಕಾರ್ಯದರ್ಶಿಗಳಾಗಿ ತುಫೈಲ್ ದರ್ಕಾಸ್, ಮುಝಮ್ಮಿಲ್ ಬೆಂದ್ರಾಳ, ಮುಖ್ತಾರ್ ಹಾಫಿಲ್, ಇರ್ಷಾದ್ ಕಜೆ, ಝೈನುದ್ದೀನ್ ಕಜೆ ಹಾಗೂ 19 ಕಾರ್ಯಕಾರಿ ಸದಸ್ಯರನ್ನು ಆರಿಸಲಾಯಿತು. ಕಾರ್ಯಕ್ರಮವನ್ನು ತುಫೈಲ್ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಧನ್ಯವಾದ ಸಲ್ಲಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment