Posts

ವಿದ್ಯುತ್ ಅಪಘಾತದಲ್ಲಿ ಕಾಲು- ಕೈ ಕಳೆದುಕೊಂಡ ವ್ಯಕ್ತಿಗೆ ಮರದ ಮಂಚ ಕೊಡುಗೆ

1 min read

ಬೆಳ್ತಂಗಡಿ; ಕಳೆದ 5 ತಿಂಗಳ ಹಿಂದೆ ಕೃಷಿ ಕೂಲಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಅವಘಡಕ್ಕೊಳಗಾಗಿ ಕೈ ಮತ್ತು ಕಾಲು ಎರಡನ್ನೂ ಕಳೆದುಕೊಂಡು ಶಾಶ್ವತ ವಿಕಲಚೇತನರಾಗಿರುವ ತೋಟತ್ತಾಡಿ ಗ್ರಾಮದ ಪಂಚಮಿಯಾರು ಗಣೇಶ ಗೌಡ ಅವರಿಗೆ ಮರದ ಮಂಚವನ್ನು ಕೊಡುಗೆ ನೀಡಲಾಯಿತು.

ವಿನ್ಸೆಂಟ್ ಡಿಪೌಲ್ ಸೊಸೈಟಿ‌ ತೋಟತ್ತಾಡಿ ಏರಿಯಾ ಕೌನ್ಸಿಲ್  ಅಧ್ಯಕ್ಷ ಪಿ.ಸಿ ಸೆಬಾಸ್ಟಿಯನ್‌ ಮುಂಡಾಜೆ ಮತ್ತು  ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ಮುಖ್ಯಸ್ಥ ಅಶ್ರಫ್ ಆಲಿಕುಂಞಿ ಅವರು ಈ‌ಕೊಡುಗೆ ಪ್ರಾಯೋಜಿಸಿದ್ದರು.

ಕೊಡುಗೆ ಸಮರ್ಪಣೆ ವೇಳೆ ತೋಟತ್ತಾಡಿ ಸೈಂಟ್ ಆಂಟೊನಿ  ಚರ್ಚ್‌ನ ಸಹಾಯಕ ಧರ್ಮಗುರು ಫಾ. ಸೋಜನ್ ಕೊಟ್ಟಾರತ್ತಿಲ್, ವಿನ್ಸೆಂಟ್ ಡಿಪೌಲ್ ಸೊಸೈಟಿ ಸದಸ್ಯ ರೋಕಿ ಅದಿಗಾರಂ ಅವರು ಉಪಸ್ಥಿತರಿದ್ದರು. 

ಸಂತ್ರಸ್ತ ಗಣೇಶ್ ಗೌಡ, ಪತ್ನಿ ಸುಂದರಿ, ಒಂದೂವರೆ ವರ್ಷ ಪ್ರಾಯದ ಗಂಡು ಮಗು ಲಿಜೇಶ್ ಅವರ ಜೊತೆ, ತನ್ನ ತಂದೆಯ ಜಾಗದಲ್ಲಿ ಸಣ್ಣ ಶೀಟಿನ  ಮನೆಯಲ್ಲಿ‌ ವಾಸವಾಗಿರುವ ಕುಟುಂಬಕ್ಕೆ ಉತ್ತಮ‌ಮನೆ, ಸಂಘ ಸಂಸ್ಥೆಗಳಿಂದ ಇತರ ನೆರವುಗಳನ್ನು ದೊರಕಿಸಿಕೊಡುವ ಆವಶ್ಯಕತೆ ಇದೆ. 

(ಗಣೇಶ್ ಗೌಡರಿಗೆ ನೆರವು ‌ನೀಡಲು ಬಯಸುವವರಿಗೆ  9591302047)

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment