Posts

ಮುಂಡತ್ತೋಡಿಯ ಮಹಿಳೆಯ ಚಿಕಿತ್ಸೆಗೆ ಸ್ಪಂದನ ಸೇವಾ ಸಂಘದಿಂದ ಆರ್ಥಿಕ ನೆರವು

1 min read


ಬೆಳ್ತಂಗಡಿ; ಮಾರಕ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಉಜಿರೆ ಗ್ರಾಮದ ಮುಂಡತ್ತೋಡಿ ನಿವಾಸಿನಿ ಪೂರ್ಣಿಮಾ ಅವರಿಗೆ ಚಿಕಿತ್ಸಾ ಸಹಾಯಾರ್ಥವಾಗಿ ಬೆಳ್ತಂಗಡಿ ಸ್ಪಂದನಾ ಸೇವಾ ಸಂಘದ ವತಿಯಿಂದ ರೂ. 15 ಸಾವಿರದ ಚೆಕ್ಕನ್ನು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕಿ ಉಷಾದೇವಿ ಕಿನ್ಯಾಜೆ ಇವರ ಮೂಲಕ ಫಲಾನುಭವಿಗೆ ಹಸ್ತಾಂತರ ಮಾಡಲಾಯಿತು.

ಈ ಸಂಧರ್ಭದಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿಗ ಮೋಹನ್ ಗೌಡ ಕೊಯ್ಯೂರು, ನಿಕಟಪೂರ್ವ ನಿರ್ದೇಶಕ ಆನಂದ ಗೌಡ ಉಜಿರೆ, ವಾಣಿ ಸೌಹಾರ್ದ ಕೋ-ಆಪರೇಟಿವ್ (ಲಿ.) ನಿರ್ದೇಶಕ ಗೋಪಾಲಕೃಷ್ಣ ಜಿ.ಕೆ ಉಜಿರೆ, ಸುರೇಶ್ ಕೌಡಂಗೆ, ತಾಲೂಕು ಯುವ ವೇದಿಕೆಯ ನಿರ್ದೇಶಕರುಗಳಾದ ತಿಕ್ಷೀತ್ ದಿಡುಪೆ, ನಿತಿನ್ ಗೌಡ ಕನ್ಯಾಡಿ, ಉಜಿರೆ ಗ್ರಾಮ ಸಮಿತಿ ಕಾರ್ಯದರ್ಶಿಗಳಾದ ಧರ್ಣಪ್ಪ ಗೌಡ ಧರಣಿ ಉಜಿರೆ, ಸ್ಪಂದನಾ ಸೇವಾ ಸಂಘದ ಸದಸ್ಯ ಉಮೇಶ್ ಗೌಡ ಮೈರ್ನೋಡಿ ಹಾಗೂ ಸ್ಥಳೀಯ  ಸ್ವಜಾತಿ ಬಾಂಧವರುಗಳಾದ ವಿಜಯ ಗೌಡ ಮುಂಡತ್ತೋಡಿ, ಜಯಂತ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment