ಲೈವ್ ಮೀಡಿಯಾ ನ್ಯೂಸ್ ಜನಸ್ಪಂದನ ಅಭಿಯಾನ
ನಿಮ್ಮ ಪಂಚಾಯತ್ ಹೇಗೆ ಕೆಲಸ ಮಾಡಬೇಕೆಂದು ಭಾವಿಸಿದ್ದೀರಿ?
ಗ್ರಾಮ ಪಂಚಾಯತ್‌ಗಳ ಚುನಾವಣೆ ಮುಗಿದು ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯೂ ಆಗಿದೆ. ಸರಕಾರ ನೇಮಿಸಿದ್ದ ಆಡಳಿತಾಧಿಕಾರಿಗಳನ್ನು ಹಿಂಪಡೆದುಕೊಂಡು ಹೊಸ ಆಡಳಿತಮಂಡಳಿಗೆ ಅಧಿಕಾರ ವಹಿಸಿಕೊಡಲಾಗಿದೆ. ಬಹುತೇಕಕಡೆ ಹೊಸ ಸದಸ್ಯರುಗಳು ಆರಿಸಿಬಂದಿದ್ದರೆ ಇನ್ನೂ ಹಲವೆಡೆ ಹಳೆಮುಖಗಳು ಮತ್ತೆ ಗೆದ್ದು ಬಂದಿದ್ದಾರೆ.
ಗ್ರಾಮ ಪಂಚಾಯತ್ ಹಳ್ಳಿಯ ವಿಧಾನಸಭೆ ಇದ್ದಂತೆ. ಗ್ರಾಮಕ್ಕೆ ಏನೇನು ಬೇಕು ಎಂದು ತಿಳಿದು ಸ್ವಂತ ಸಂಪನ್ಮೂಲ ಮತ್ತು ಸರಕಾರದ ಅನುದಾನ ಬಳಸಿ ಅದನ್ನು ಒದಗಿಸಿಕೊಡುವವರು ಗ್ರಾಮ ಮಟ್ಟದ ಇದೇ ಜನಪ್ರತಿನಿಧಿಗಳು.
ಆ ನಿಟ್ಟಿನಲ್ಲಿ ನಿಮ್ಮ ಪಂಚಾಯತ್ ಆಡಳಿತ ಹಿಡಿದಿರುವವರು ನಿಮ್ಮ ಗ್ರಾಮಕ್ಕೆ ಏನು ಮಾಡಬೇಕು? ನಿಮ್ಮ ಗ್ರಾಮದ ಮೂಲಭೂತ ಆವಶ್ಯಕತೆಗಳು ಏನೇನು? ಅದರಲ್ಲಿ ಪ್ರಾಶಸ್ತ್ಯ ಪ್ರಕಾರ ಆಗಲೇ ಬೇಕಾದ ಕೆಲಸ ಯಾವುದು? ಇದೆಲ್ಲದರ ಬಗ್ಗೆ ಎಂಬ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ.
------
ನಿಮ್ಮ ಬರಹಗಳು ಪೀಠಿಕೆಗಳಿಲ್ಲದೆ ನೇರವಾಗಿರಲಿ.
* ವೈಯಕ್ತಿಕ ಸಮಸ್ಯೆಗಳಿಗಿಂತಲೂ ಸಾರ್ವತ್ರಿಕ ವಿಚಾರಕ್ಕೆ ಒತ್ತುಕೊಡಿ.
* ಕೇವಲ ಸಮಸ್ಯೆ ಮಾತ್ರವಲ್ಲದೆ ಅದಕ್ಕೆ ನಿಮ್ಮ ಬಳಿ ಏನಾದರೂ ಪರಿಹಾರ -ಸಲಹೆಗಳಿವೆಯೇ? ಅದನ್ನೂ ತಿಳಿಸಿ.
* ಮೊನ್ನೆ ಚುನಾವಣೆ ನಡೆದ 46 ಗ್ರಾಮ ಪಂಚಾಯತ್‌ಗಳ ಯಾರೂ ಬೇಕಾದರೂ ಮುಕ್ತವಾಗಿ ಬರೆದುಕೊಳ್ಳಬಹುದು.
* ಆಯ್ದ ಬರಹಗಳನ್ನು ನಮ್ಮ ಲೈವ್ ಮೀಡಿಯಾ ನ್ಯೂಸ್ ನಲ್ಲಿ ಪ್ರಕಟಿಸಲಾಗುವುದು.
ನಿಮ್ಮ ಎಲ್ಲ ಬೇಡಿಕೆಗಳನ್ನು ಆಯಾಯಾ ಪಂಚಾಯತ್ ಜನಪ್ರತಿನಿಧಿಗಳಿಗೆ ತಲುಪಿಸಿ ಬೇಡಿಕೆ ಈಡೇರುವಲ್ಲಿ ಲೈವ್ ಮೀಡಿಯಾ ಪ್ರಯತ್ನಿಸಲಿದೆ. ಅಗತ್ಯ ಬಿದ್ದಲ್ಲಿ ಕಾರ್ಯಕ್ರಮ ಆಯೋಜಿಸಿ ಸಮಸ್ಯೆಗಳ ಇನ್ನೊಂದು ಪ್ರತಿಯನ್ನು ಶಾಸಕರು, ಸಚಿವರ ಗಮನಕ್ಕೂ ತರಲಾಗುವುದು.
*ಬರಹದೊಂದಿಗೆ ನಿಮ್ಮ ಪೂರ್ಣ ಅಂಚೆ ವಿಳಾಸ, ಭಾವಚಿತ್ರ, ಮೊಬೈಲ್ ಸಂಖ್ಯೆ ಇರಲೇಬೇಕು. ಬರಹ ಎರಡು ಪುಟ ಮೀರದಂತಿದ್ದರೆ ಉತ್ತಮ.
ವಾಟ್ಸ್ ಆಪ್ ಮೂಲಕವೂ ಟೈಪಿಸಿ ಕಳಿಸಬಹುದು.
ಆಯ್ದ ಬರಹಗಳನ್ನು ಲೈವ್ ಮಿಡಿಯಾ ನ್ಯೂಸ್ ನಲ್ಲಿ ಪ್ರಕಟಿಸಲಾಗುವುದು.
ನಿಮ್ಮ ಅಭಿಪ್ರಾಯ ಬರೆದು ಕಳಿಸಬೇಕಾದ ಕಚೇರಿ ವಿಳಾಸ;.
ಪ್ರಿನ್ಸಿಪಲ್ ಎಡಿಟರ್,
ಲೈವ್ ಮೀಡಿಯಾ ನ್ಯೂಸ್.
ತಮನ್ನಾ ಅಪಾರ್ಟ್ಮೆಂಟ್.
ಜೈನ್‌ಪೇಟೆ. ಬೆಳ್ತಂಗಡಿ
574214
9449640130
Email : livemedia2k@gmail.com