ಬೆಳ್ತಂಗಡಿ; ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ನಮ್ಮೂರ ಜಾತ್ರೆ ಮಹಾರಥೋತ್ಸವದ ಪ್ರಯುಕ್ತ ಫೆ.19 ರಂದು ರಂದು ಸಮಯ ಸಂಜೆ 5.30 ರಿಂದ ಬೆಳ್ತಂಗಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗ ಸಂತೆಕಟ್ಟೆ ಇಲ್ಲಿ ನವಶಕ್ತಿ ಫ್ರೆಂಡ್ಸ್ ಬೆಳ್ತಂಗಡಿ ಅರ್ಪಿಸುವ ಕಾಶಿ ಪ್ಯಾಲೇಸ್ ಉಜಿರೆ ಕಾಯೋಜಕತ್ವದಲ್ಲಿ “ಯೋಧರಿಗೊಂದು ನಮನ " ಹಾಗೂ "ಗಾನವೈಭವ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನವಶಕ್ತಿ ಸಂಘಟನೆಯ ಸದಸ್ಯ ಜಗದೀಶ್ ಕನ್ನಾಜೆ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್ ನಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ಯೋಧರಿಗೊಂದು ನಮನ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಉಮೇಶ್ ಬಂಗೇರ ಕುದ್ದುಲ ಹಾಗೂ ರಮೇಶ್ ಕೆ ಬಂದಾರು ಮತ್ತು ಸಮಾಜ ಸೇವಕರಾದ ನಾಣ್ಯಪ್ಪ ಗೌಡ ಮಚ್ಚಿನ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಉದ್ಯಮಿಗಳು ಮತ್ತು ಬರೋಡಾ ತುಳು ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ, ಲಕ್ಷ್ಮೀ ಗ್ರೂಪ್ ಮಾಲಕರು ಮತ್ತು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ , ಬೆಳ್ತಂಗಡಿ ನಗರ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ , ನಗರ ಪಂಚಾಯತ್ ಬೆಳ್ತಂಗಡಿಯ ಉಪಾಧ್ಯಕ್ಷ ಜಯಾನಂದ ಗೌಡ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಷ್ಟ್ರೀಯತೆ ಎನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ಅಂಕಣಕಾರ ಮತ್ತು ಖ್ಯಾತ ವಾಗ್ಮಿ ಆದರ್ಶ ಗೋಖಲೆ ಇವರು ನಡೆಸಿಕೊಡಲಿದ್ದಾರೆ . ಖ್ಯಾತ ಸಂಗೀತ ನಿರ್ದೇಶಕಿ , ಹಿನ್ನಲೆ ಗಾಯಕಿ ಮಾನಸ ಹೊಳ್ಳ ಇವರ ಸಾರಥ್ಯದಲ್ಲಿ ಗಾನ ವೈಭವ " ಕಾರ್ಯಕ್ರಮವು ನಡೆಯಲಿದೆ . ಕೋಸ್ಟಲ್‌ವುಡ್ ಹಾಗೂ ಸ್ಯಾಂಡಲ್ ವುಡ್ ನಟ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಇವರ ನಿರೂಪಣೆಯಲ್ಲಿ , ಮಜಾ ಟಾಕೀಸ್ ಖ್ಯಾತಿಯ ರಮೋ , ಝೀ ಕನ್ನಡದ ಸರಿಗಮಪ ಖ್ಯಾತಿಯ ಶ್ರೀಹರ್ಷ, ಎದೆ ತುಂಬಿ ಹಾಡುವನು ಖ್ಯಾತಿಯ ಸಂದೇಶ್ ನೀರುಮಾರ್ಗ , ಕಲರ್ ಕನ್ನಡದ ಕನ್ನಡ ಕೋಗಿಲೆ ಖ್ಯಾತಿಯ ಕು.ಮಹನ್ಯಾ ಗುರು ಪಾಟೀಲ ಇವರುಗಳಿಂದ ಗಾಯನ ಕಾರ್ಯಕ್ರಮ ಮತ್ತು ಝೀ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು, ಹಿತೇಶ್ ಕಾಪಿನಡ್ಕ, ಪ್ರವೀಣ್ ಜೈನ್ ಅವರಿಂದ ಹಾಸ್ಯದ ಹೊನಲು ಕಾರ್ಯಕ್ರಮವು ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಪ್ರಕಾಶ್ ಆಚಾರ್ಯ, ಸ್ಮಿತೇಶ್ ಎಸ್ ಬಾರ್ಯ, ಅರವಿಂದ ಕುಮಾರ್, ಆದರ್ಶ ಜೈನ್, ಸ್ವಸ್ತಿಕ್, ಗುರು ಲಾಯಿಲ ಇವರು ಉಪಸ್ಥಿತರಿದ್ದರು.