ಬೆಳ್ತಂಗಡಿ: ಈದ್ ಮೀಲಾದ್ ಪ್ರಯುಕ್ತ ರಹ್ಮಾನಿಯಾ ಮಹಿಳಾ ಶರೀಅತ್ ಕಾಲೇಜ್ ಕಾಜೂರು ಇಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೆ ಯು ಇಬ್ರಾಹಿಂವಹಿಸಿದ್ದರು.
ವೇದಿಕೆಯಲ್ಲಿ ದರ್ಗಾ ಆಡಳಿತ ಸಮಿತಿ ಪ್ರದಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ ಹೆಚ್, ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಕೋಶಾಧಿಕಾರಿ ಮುಹಮ್ಮದ್ ಕಮಾಲ್, ಮಹಿಳಾ ಶರೀಅತ್ ಕಾಲೇಜ್ ಅಸಿಸ್ಟೆಂಟ್ ಪ್ರಿನ್ಸಿಪಾಲ್ ಅಬ್ದುಲ್ ಖಾದರ್ ಸಅದಿ, ಮಹಿಳಾ ಕಾಲೇಜ್ ಮುದರ್ರಿಸ್ ಆಸಿಫ್ ಮದನಿ, ಅಬ್ದುಲ್ ರಹಿಮಾನ್ ಸಅದಿ, ಮಹಿಳಾ ಶರೀಅತ್ ಉಪನ್ಯಾಸಕಿ ಫಾತಿಮಾ ತಸ್ಕಿಯಾ, ಹಾಗೂ ಫಾತಿಮಾ ಮುಬಶ್ಶಿರ ಉಪಸ್ಥಿತರಿದ್ದರು..
ವಿವಿಧ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ ಮಾಡಿ ಪ್ರಮಾಣ ಪತ್ರ ನೀಡಲಾಯಿತು.ಮಹಿಳಾ ಶರೀಅತ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು ಸದರ್ ಉಸ್ತಾದ್ ರಶೀದ್ ಮದನಿ ಕಾರ್ಯಕ್ರಮ ನಿರೂಪಿಸಿದರು.