ಬೆಳ್ತಂಗಡಿ; ಕಡಿರುದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಮುಖಂಡ ನೇಮಣ್ಣ ಗೌಡ, ನಾರಾಯಣ ಗೌಡ ಬರೆ, ಕೊರಗಪ್ಪ ಗೌಡ ಅಂತರ ಮೊದಲಾದ ಪ್ರಮುಖರು ರವಿವಾರ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ಮಾಜಿ ಶಾಸಕ,ಮಾಜಿ ಮುಖ್ಯ ಸಚೇತಕ ವಸಂತ ಬಂಗೇರ ಅವರು ಪಕ್ಷದ ಧ್ವಜ ನೀಡಿ ಅವರನ್ನು ಬರಮಾಡಿಕೊಂಡರು.
ಈ ಸಂದರ್ಭ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಬ್ಲಾಕ್ ಅಧ್ಯಕ್ಷ ರಂಜನ್ ಗೌಡ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಿತ್ ಜೈನ್, ಗ್ರಾಮ ಸಮಿತಿ ಅಧ್ಯಕ್ಷ ಲಿಜೋ ಕಡಿರುದ್ಯಾವರ, ಗ್ರಾ.ಪಂ ಮಾಜಿ ಸದಸ್ಯ ನೇಮಿರಾಜ್, ಮಾಜಿ ಉಪಾಧ್ಯಕ್ಷ ಸಂತೋಷ್ ಗೌಡ ವಳಂಬ್ರ , ಪ್ರಮುಖರಾದ ನಾಗರಾಜ್ ಲ್ಯಾಲ, ಪೌಲೋಸ್ ನೂಜಿ, ರಮೇಶ್ ಗೌಡ, ರಾಜಗೋಪಾಲ್, ಮಹೇಶ್ ಗೌಡ ಕೌಡಂಗೆ ಇವರು ಉಪಸ್ಥಿತರಿದ್ದರು.