Posts

ಯಾವುದೇ ಧರ್ಮ ಕೇಂದ್ರಗಳನ್ನು ನಾಶಮಾಡುವ ಅಧಿಕಾರ ಯಾರಿಗೂ ಇಲ್ಲ; ಮಾಣಿಲ ಶ್ರೀ|| ಮಡಂತ್ಯಾರಿನಲ್ಲಿ ಅಂತರ್ ಧರ್ಮೀಯ ಕ್ರಿಸ್ಮಸ್ ಸೌಹಾರ್ದ ಕೂಟ

1 min read


ಬೆಳ್ತಂಗಡಿ: ಸೌಹಾರ್ದತೆಗೆ ಒತ್ತುಕೊಟ್ಟ ದೇಶ ಭಾರತ. ಪ್ರಪಂಚವೇ ದೇವರ ಸಾಮ್ರಾಜ್ಯ. ಇಲ್ಲಿ ರಾಮ, ಅಲ್ಲಾ, ಕ್ರಿಸ್ತ ಎಲ್ಲವೂ ಎರಡಕ್ಷರಗಳಿಂದ ಸಮಾನವಾಗಿದ್ದಾರೆ. ನೀರು ಗಾಳಿಗೆ ಜಾತಿಗಳಿಲ್ಲ. ಆದರೆ ಇಲ್ಲಿ ಬಣ್ಣಗಳ ಮಂದಿರಗಳ ಹೆಸರಿನಲ್ಲಿ ಸಂಘರ್ಷಗಳು ನಡೆಯುತ್ತಿವೆ. ಎಲ್ಲರೂ ಮಣ್ಣಿನಲ್ಲಿ ಲೀನವಾಗುವವರು. ಯಾವುದೇ ಧರ್ಮಕೇಂದ್ರಗಳನ್ನು ನಾಶಮಾಡುವ ಅಧಿಕಾರ ಯಾರಿಗೂ ಇಲ್ಲ. ಒಂದು ವೇಳೆ ನಾಶ ಮಾಡಿದನೆಂದಾದರೆ ಅಂತವರಿಗೆ ವಿನಾಶ ಕಾದಿದೆ ಎಂದು ಶ್ರೀ ಧಾಮ ಮಾಣಿಲದ  ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.

ಅಂತರ್ ಧರ್ಮೀಯ ಆಯೋಗ ಬೆಳ್ತಂಗಡಿ ವಲಯ ಮತ್ತು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಆಶ್ರಯದಲ್ಲಿ, ಐ.ಸಿ.ವೈ.ಎಂ. ಮಡಂತ್ಯಾರು, ಕಥೊಲಿಕ್ ಸಭಾ ಮಡಂತ್ಯಾರು ಸಹಯೋಗದೊಂದಿಗೆ ಡಿ.30 ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಸಮುದಾಯ ಭವನದಲ್ಲಿ ನಡೆದ ಕ್ರಿಸ್ ಮಸ್ ಸೌಹಾರ್ದ ಕೂಟದಲ್ಲಿ ಅವರಿ ಆಶೀರ್ವಚನ ನೀಡಿದರು.


ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಬಿಷಪ್ ಲಾರೆನ್ಸ್ ಮುಕ್ಕುಯಿ ಮಾತನಾಡಿ, ಯಾವ ಧರ್ಮದ ವಿರುದ್ಧವೂ ಸಂಘರ್ಷಕ್ಕಲ್ಲ ಸಂದಾನಕ್ಕಾಗಿ ಎಂದು ಸ್ವಾಮಿ ವಿವೇಕಾನಂದರು ಹೇಳಿದಂತೆ ಜಗತ್ತಿನಲ್ಲಿ ಶಾಶ್ವತ ಮುಕ್ತಿ ಪಡೆಯುವುದು ಎಲ್ಲ ಧರ್ಮಗಳ ಸಾರವಾಗಿದೆ. ದೇವರು ಮಾತ್ರ ಇಲ್ಲಿ‌ಶಾಶದವತವಾಗಿರುವವನು.‌ ಅವನ‌ ಸೃಷ್ಟಿಗಳಾದ ನಾವೆಲ್ಲರೂ ತಾತ್ಕಾಲಿಕವಾಗಿರುವವರು. ಆದ್ದರಿಂದ ಧರ್ಮ ಧರ್ಮದ ನಡುವೆ ಶಾಂತಿಯನ್ನು ಸಾರೋಣ ಎಂದು ಕರೆ ನೀಡಿದರು.

ಎಸ್.ಕೆ.ಎಸ್.ಎಸ್.ಎಫ್  ರಾಜ್ಯಾಧ್ಯಕ್ಷ ಅನೀಸ್ ಕೌಸರ್ ಮಾತನಾಡಿ, ಭಾರತೀಯತೆ ಅಂದರೇ ಕೋಮು ಸೌಹಾರ್ದತೆ. ದೇಶದ ಸುಧೀರ್ಘ ಪರಂಪರೆಯಲ್ಲಿ ಎಲ್ಲ ಧರ್ಮೀಯರ ಕೊಡುಗೆ ಇದೆ.  ಜಾತಿಯ, ಬೌಗೋಳಿಕ, ಭಾಷಾ  ಬಹುತ್ವದಿಂದಲೇ ಹೆಸರು ಪಡೆದ ಭಾರತ ದೇಶದಂತಹಾ ಇನ್ನೊಂದು ವ್ಯವಸ್ಥೆ ಜಗತ್ತಿನಲ್ಲಿ ಬೇರೆ ಕಾಣಲು ಅಸಾಧ್ಯ. ಮತೀಯರ ಎಡೆಯಲ್ಲಿ ಅಂತರ ಸೃಷ್ಟಿಸುವ ರಾಜಕೀಯ ಶಕ್ತಿಯನ್ನು ದೂರವಿಟ್ಟಾಗ ಮತಾಂತರ ನಿಷೇಧ ಕಾಯ್ದೆಯ ಅವಶ್ಯವಿಲ್ಲ. ಮಸೀದಿಯಲ್ಲಿ ಮೊಳಗುವ ಬಾಂಗ್(ಆಝಾನ್) ಹಿಂದೂಗಳನ್ನು ಕೊಲ್ಲಿ ಎಂದಾಗಿದೆ ಎಂದು ತಪ್ಪು ಸಾರುವ ತಪ್ಪು ಸಂದೇಶಗಳನ್ನು ನಾವು ಯಾರದ್ದೋ ಬಾಯಿಂದ ಕೇಳುವಂತಾಗಿದೆ. ಇಂದು ಧರ್ಮವನ್ನು ಧರ್ಮಗುರುಗಳು, ಮಠಾದೀಶರೇ ಬೋದಿಸಿದ್ದರೆ ಇಲ್ಲಿ ಯಾವುದೇ ಸಂಘರ್ಷಕ್ಕೆ ಎಡಿಯಾಗುತ್ತಿರಲಿಲ್ಲ ಎಂದರು.

ಕಥೊಲಿಕ್ ಸಭಾ ಅಧ್ಯಕ್ಷ ನೆಲ್ಸನ್ ಲಸ್ರಾದೊ, ಐ.ಸಿ.ವೈ.ಎಂ. ಅಧ್ಯಕ್ಷೆ ಶೈನಿ ಡಿಸೋಜ, ಸಹಾಯಕ ಧರ್ಮಗುರುಗಳಾದ ಪಾ. ಸ್ಟೀವನ್ ಕುಟಿನ್ನಾ, ಪ್ರಾಂಶುಪಾಲ ಪಾ. ಜೆರೋಂ ಡಿಸೋಜ, ಪಾ. ದೀಪಕ್ ಡೇಸಾ, ಗರ್ಡಾಡಿಯ ವಲಯ ಫಾ. ಮಾರ್ಕ್ ಸಲ್ಡಾನ್ಹ, ನಾಳದ ಫಾ.ತೋಮಸ್ ಸಿಕ್ವೇರಾ, ಉಜಿರೆಯ ಫಾ. ಜೇಮ್ಸ್ ಡಿಸೋಜಾ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಲಿಯೋ ರೊಡ್ರಿಗಸ್, ಫಾ. ಲಾರೆನ್ಸ್ ಪೂನೋಲಿ ಉಪಸ್ಥಿತರಿದ್ದರು.

ಸಮ್ಮಾನ

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಜೀವರಕ್ಷಕ ಅಬ್ದುಲ್ ಜಲೀಲ್, ಉರಗಪ್ರೇಮಿ ಜಾಯ್ ಮಸ್ಕರೇನ್ಹಸ್, ಸಮಾಜಸೇವಕ ಪದ್ಮನಾಭ ಸಾಲ್ಯಾನ್ ಬಸವನಗುಡಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.






ಅಂತರ್‌ ಧರ್ಮೀಯ ಆಯೋಗ ಬೆಳ್ತಂಗಡಿ ವಲಯದ ಸಂಚಾಲಕ ಪಾ.ಬೇಸಿಲ್ ವಾಸ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಂಚಾಲಕ ವಿವೇಕ್ ವಿನ್ಸೆಂಟ್ ಪಾಯಿಸ್, ಸೇಕ್ರೆಡ್ ಹಾರ್ಟ್ ಚರ್ಚ್ ಪಲನಾ ಮಂಡಳಿ ಕಾರ್ಯದರ್ಶಿ ಜೆರಾಲ್ಡ್ ಮೊರಾಸ್ ಕಾರ್ಯಕ್ರಮ ನಿರ್ವಹಿಸಿದರು.

ಸೇಕ್ರೆಡ್ ಹಾರ್ಟ್ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಂದ, ಐಸಿವೈಎಮ್ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment