ಬೆಳ್ತಂಗಡಿ; ದೇಶದಲ್ಲಿ 3 ಕೋಟಿ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದು, ಜನತೆಗೆ ಶೀಘ್ರ ನ್ಯಾಯ ನೀಡುವುದು ಮತ್ತು ಕಡಿಮೆ ಖರ್ಚಿನಲ್ಲಿ ನ್ಯಾಯ ದೊರಕಿಸಿಕೊಡುವುದು ನಮ್ಮ ಆದ್ಯತೆಯಾಗಬೇಕು ಎಂದು ದೇಶದ ಸರ್ವೋಚ್ಚ ನ್ಯಾಯಾಲಯ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಹೇಳಿದರು.
ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ, ದಕ್ಷಿಣ ಕನ್ನಡ ಹಾಗೂ ವಕೀಲರ ಸಂಘ ಬೆಳ್ತಂಗಡಿ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ನ್ಯಾಯಾಲಯ ಆವರಣದಲ್ಲಿ ಸುಮಾರು 2.10 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ವಕೀಲರ ಭವನವನ್ನು ಡಿ.28ರಂದು ಉದ್ಘಾಟಿಸಿ ಅವರು ಮಾತನಾಡಿದರು.
ನೂತನವಾಗಿ ನಿರ್ಮಿಸಿದ ಈ ಕಟ್ಟಡದ ಕೆಲಸ ಸುಂದರವಾಗಿ ಮೂಡಿಬಂದಿದೆ. ಇದಕ್ಕೆ ಮೂರು ಮಹಡಿಗಳಿದ್ದು, ಲಿಫ್ಟ್ ಆವಶ್ಯಕತೆ ಇದೆ. ಅದನ್ನು ಶಾಸಕ ಹರೀಶ್ ಪೂಂಜ ಅವರು ನಡೆಸಿಕೊಡಬೇಕೆಂದು ಕೇಳಿಕೊಂಡಿದ್ದಕ್ಕೆ ಒಪ್ಪಿಗೆ ನೀಡಿದ್ದಾರೆ. ಎಂ.ಎಲ್.ಸಿ ಪ್ರತಾಪಸಿಂಹ ನಾಯಕ್ ಅವರೂ 10 ಲಕ್ಷ ರೂ ಅನುದಾನವನ್ನು ಲೇಬ್ರೇರಿ ನಿರ್ಮಾಣಕ್ಕೆ ನೀಡುವುದಾಗಿ ತಿಳಿಸಿದ್ದಾರೆ. ನಾನು ಇನ್ನೊಮ್ಮೆ ಬರುವ ವೇಳೆ ಇದು ಪೂರ್ತಿಗೊಳಿಸುವಂತೆ ತಿಳಿಸಿದರು.
ಅಧ್ಯಕ್ಷತೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಕೆ. ಸೋಮಶೇಖರ್ ವಹಿಸಿದ್ದರು.
ಘನ ಉಪಸ್ಥಿತರಿದ್ದ ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಝ್ ಮತ್ತು ಎಸ್.ವಿಶ್ವಜಿತ್ ಶೆಟ್ಟಿ ಶುಭ ಕೋರಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಹೈಕೋರ್ಟ್ ವಕೀಲರೂ ಆಗಿರುವ ಶಾಸಕ ಹರೀಶ್ ಪೂಂಜ,
ಹಿರಿಯ ವಕೀಲರು ಹಾಗೂ ವಿಧಾನ ಪರಿಷತ್ ಶಾಸಕ ಕೆ.ಪ್ರತಾಪಸಿಂಹ ನಾಯಕ್, ಕರ್ನಾಟಕ ದಕ್ಷಿಣ-ಪಶ್ಚಿಮ ಶಿಕ್ಷಕರ ಕ್ಷೇತ್ರ ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇ ಗೌಡ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷ ಎಲ್. ಶ್ರೀನಿವಾಸ ಬಾಬು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮಾಜಿ ಅಧ್ಯಕ್ಷ ಹಾಗೂ ಹೈಕೋರ್ಟ್ ಹಿರಿಯ ನ್ಯಾಯವಾದಿಯಾಗಿ ನಿಯುಕ್ತಿಗೊಂಡಿರುವ ಪಿ.ಪಿ ಹೆಗ್ಡೆ, ಹೈಕೋರ್ಟ್ ರಿಜಿಸ್ಟ್ರಾರ್ ಶಿವಶಂಕರೇ ಗೌಡ, ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಕಾಂತರಾಜ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯ ವಕೀಲರ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ, ವಕೀಲರ ಸಂಘ ಉಪಾಧ್ಯಕ್ಷ ಗಣೇಶ್ ಗೌಡ, ಕೋಶಾಧಿಕಾರಿ ಪಿ.ಎನ್, ಜೊತೆ ಕಾರ್ಯದರ್ಶಿ ಪ್ರಿಯಾಂಕಾ ಕೆ, ಕ್ರೀಡಾ ಕಾರ್ಯದರ್ಶಿ ಧನಂಜಯ ಕುಮಾರ್ ಡಿ, ಸಾಂಸ್ಕೃತಿಕ ಕಾರ್ಯದರ್ಶಿ ಮಮ್ತಾಝ್ ಬೇಗಂ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಕುಮಾರ್ ಎಸ್.ಎಂ, ಶ್ರೀನಿವಾಸ ಗೌಡ, ಶಿವಯ್ಯ ಎಸ್.ಎಲ್, ಮನೋಹರ್ ಕುಮಾರ್ ಎ, ಆರ್ ಸುಭಾಷಿಣಿ, ಅಶೋಕ್ ಕರಿಯನೆಲ,
ಹಿರಿಯ ಸಮಿತಿಯ ಸದಸ್ಯ ವೈ ಶ್ಯಾಮ್ ಭಟ್, ಸೇವಿಯರ್ ಪಾಲೇಲಿ ಇವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಲಿಖಿತಾ ಕೆ.ಬಿ ಮತ್ತು ಬಳಗದವರು ನಾಡಗೀತೆ ಹಾಡಿದರು. ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಎಸ್ ಪ್ರಸ್ತಾವನೆಗೈದರು. ಜಿಲ್ಲಾ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಮುರಳೀಧರ ಪೈ ಸ್ವಾಗತಿಸಿದರು. ಸಮಾರಂಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ವೀಡಿಯೋ ಸಂದೇಶ ನೀಡಿದ್ದು ಅದನ್ನು ಸಭೆಯಲ್ಲಿ ಬಿತ್ತರಿಸಲಾಯಿತು. ವಕೀಲರ ಸಂಘದ ಕಾರ್ಯದರ್ಶಿ ಶೈಲೇಶ್ ಆರ್ ಠೋಸರ್ ವಂದನಾರ್ಪಣೆಗೈದರು. ಬಿ.ಕೆ ಧನಂಜಯರಾವ್ ಮತ್ತು ಶ್ರೀಕೃಷ್ಣ ಶೆಣೈ ಕಾರ್ಯಕ್ರಮ ನಿರೂಪಿಸಿದರು.
---
ಅಚ್ಚು ಮುಂಡಾಜೆ ;ಲೈವ್ ಮೀಡಿಯಾ ಟೀಮ್.
9449640130