ಬೆಳ್ತಂಗಡಿ; ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಲಾಯಿಲ ಮಸ್ಜಿದ್‌ನ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಅಶ್ರಫ್ ಚಿಲಿಂಬಿ ಮದ್ದಡ್ಕ ಅವರ ಮಾಲಿಕತ್ವದ "ಸ್ಟಾರ್ ಫರ್ನಿಚರ್ಸ್ ಸ್ಪೆಷಲ್ ಶೋರೂಮ್" ಇತ್ತೀಚೆಗೆ ಕಾರ್ಯಾರಂಭಿಸಿದೆ.
ನೂತನ ಮಳಿಗೆಯಲ್ಲಿ ಮರದ ಅತ್ಯಾಕರ್ಷಕ ಪೀಠೋಪಕರಣಗಳ ಅದ್ಭುತ ಸಂಗ್ರಹವಿದೆ.
ಡೈನಿಂಗ್ ಟೇಬಲ್ ಗ್ಲಾಸ್ ವಿದ್ ಎಟ್ರೇಕ್ಟೀವ್ ಸ್ಟೋನ್ಸ್, ಮರದ ಕುರ್ಚಿಗಳು, ಮಂಚಗಳ ಪೈಕಿ ಸಿಂಗಲ್ ಬೆಡ್ಡ್ ನಿಂದ ಆರಂಭಿಸಿ 6*6 ಅಳತೆಯ ವಿಶಾಲವಾದ ಮಂಚಗಳು, ಮರದಿಂದ ನಿರ್ಮಿಸಿದ ಈಸಿ ಚೇರ್ಸ್, ಟೀಪಾಯಿಗಳು, ಕಪಾಟು, ಟಿ.ವಿ ರೇಕ್ ಗಳು, ಮನೆಯ ಮುಖ್ಯ ಭಾಗಕ್ಕೆ ಅಳವಡಿಸುವ ಡಿಸೈನ್ಡ್ ಚೌಕಟ್ಟು ಗಳು(ದಾರಂದ), ಮನೆಗೆ ಉಪಯೋಗಿಸುವ ಎಲ್ಲಾ ರೀತಿಯ ದಾರಂದಗಳು ಮತ್ತು ಬಾಗಿಲು, ದೇವರ ಕೋಣೆಯ ಮರದ ಬಾಗಿಲುಗಳು, ಮನೆಯ ಕಿಟಕಿಗಳು, ಶೆಟರ್ ಪಟ್ಟಿಗಳು, ಪೈಬಲ್ ಚೇರ್, ಡೈನಿಂಗ್ ಟೇಬಲ್, ಸ್ಟೂಲ್ ಗಳು, ಕಚೇರಿ ಬಳಕೆಯ ಟೇಬಲ್ ಮತ್ತು ರೊಟೆಟ್ ಚೇರ್ ಗಳು, (ಆಫೀಸ್ ಚೆರ್ಸ್), ಪ್ರಖ್ಯಾತ ಕಂಪೆನಿಗಳ ಹಾಸಿಗೆಗಳು, ದಿಂಬುಗಳು, ಅಪ್ಪಟ ಊರ ಶೈಲಿಯ ಹತ್ತಿ ಬೆಡ್ಡ್‌ಗಳು ಮತ್ತು ದಿಂಬುಗಳು, ಇತ್ಯಾಧಿಗಳೆಲ್ಲವೂ ಒಂದೇ ಸೂರಿನಡಿ ಲಭ್ಯವಿದೆ.
ಮನೆ ಮತ್ತು ಕಚೇರಿಗೆ ಬೇಕಾದ ಎಲ್ಲಾ ಪೀಠೋಪಕರಣಗಳು ಲಭ್ಯವಿದ್ದು, ಇತರೇ ಅಗತ್ಯಗಳಿಗೆ ಅನುಗುಣವಾಗಿ ಅಳತೆ ಪಡೆದು ನುರಿತ ಕಾಷ್ಟಶಿಲ್ಪಿಗಳಿಂದ ಬೇಕಾದ ರೀತಿಯ ಮರದ ಫರ್ನಿಚರ್ಸ್ ಗಳನ್ನು ತಯಾರಿಸಿಕೊಡಲಾಗುವುದು.
ಮನೆ, ದೇವಾಲಯಗಳಿಗೆ ಬೇಕಾದ ಶಿಲ್ಪಗಳು, ಮಸೀದಿಗೆ ಬೇಕಾದ ಮಿಂಬರ್ ಇತ್ಯಾಧಿ ಯನ್ನೂ ಅತ್ಯಾಕರ್ಷಕ ಡಿಸೈನ್ ನೊಂದಿಗೆ ತಯಾರಿಸಿಕೊಡಲಾಗುವುದು.
ಸಂಸ್ಥೆಯ ಮಾಲಿಕ ಅಶ್ರಫ್ ಚಿಲಿಂಬಿ ಮದ್ದಡ್ಕ ಅವರು
ಟಿಂಬರ್ ವ್ಯವಹಾರ ಕ್ಷೇತ್ರದಲ್ಲಿ ದೀರ್ಘ ಅವಧಿಯ ಅನುಭವಿಯಾಗಿದ್ದು ಇದೀಗ ಹೊಸ ಉದ್ದಿಮೆ ಆರಂಭಿಸಿದ್ದಾರೆ. ಕರ್ನಾಟಕ ಮುಸ್ಲಿಂ ಜಮಾಅತ್, ತಾಲೂಕು ಮುಸ್ಲಿಂ ಒಕ್ಕೂಟ, ಮದ್ದಡ್ಕ ನೂರುಲ್ ಹುದಾ ಜುಮ್ಮಾ ಮಸ್ಜಿದ್ ಸಮಿತಿ, ಎಸ್ ವೈ ಎಸ್, ಜಮೀಯತುಲ್ ಫಲಾಹ್ ಸಹಿತ ವಿವಿಧ ಸಾಮಾಜಿಕ- ಧಾರ್ಮಿಕ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿದ್ದು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ಇದೀಗ ಅವರು ಲಾಯಿಲದಲ್ಲಿ ಆರಂಭಿಸಿರುವ ನೂತನ ಸಂಸ್ಥೆಯಲ್ಲಿ ಬಜಾಜ್ ಫೈನಾನ್ಸ್ ಕಂಪೆನಿ ವತಿಯಿಂದ ಸ್ಥಳದಲ್ಲೇ ಸಾಲ ಸೌಲಭ್ಯದ ಜೊತೆಗೆ ಆರಂಭಿಕ ಮೊತ್ತ ಮಾತ್ರ ಪಾವತಿಸಿ ಸುಲಭ ಕಂತುಗಳ ಮೂಲಕ ವಸ್ತುಗಳನ್ನು ಖರೀದಿಸುವ ಅವಕಾಶವಿದೆ ಎಂದು ಅಶ್ರಫ್ ಅವರು ತಿಳಿಸಿರುತ್ತಾರೆ. ವಸ್ತುಗಳನ್ನು ಖರೀದಿಸದಿದ್ದರೂ ಕುಟುಂಬ ಸಮೇತರಾಗಿ ಸಂಸ್ಥೆಗೆ ಭೇಟಿ ನೀಡಿ ಉತ್ಪನ್ನಗಳ ಬೃಹತ್ ಪ್ರದರ್ಶನವನ್ನು ಮುಕ್ತವಾಗಿ ವೀಕ್ಷಿಸಬಹುದು ಎಂದೂ ಅವರು ಗ್ರಾಹಕರ ಬಳಿ ವಿನಂತಿಸಿದ್ದಾರೆ.