ಬೆಳ್ತಂಗಡಿ; ಇಳಂತಿಲ ಗ್ರಾಮದ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ಶಾಲಾ ನಿರ್ಮಾಣಕ್ಕಾಗಿ ಶ್ರಮಿಸಿದ್ದ ಮಹನೀಯರಲ್ಲಿ ಪ್ರಮುಖರೆನಿಸಿದ್ದ ಅಲಂಗಡೆ ಸುಬ್ರಾಯ ಭಟ್ ಅವರು ಡಿ.13 ರಂದು ನಿಧನ ಹೊಂದಿದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಅವರು ಗ್ರಾಮದ ಇಚ್ಚೂರು ಮಹಾತೋಬಾರ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಅಭಿವೃದ್ಧಿಯ ನೇತೃತ್ವವಹಿಸಿ ಸುದೀರ್ಘ ಅವಧಿಗೆ ಜೀರ್ಣೋದ್ಧಾರ ಸಮಿತಿ ಅದ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಇಳಂತಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿಯೂ ಸೇವೆಸಲ್ಲಿಸಿರುವ ಅವರು ಇಳಂತಿಲ ಸರಕಾರಿ ಶಾಲೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮೃತರು ಪತ್ನಿ ಪಾರ್ವತಿ, ಪುತ್ರಿಯರಾದ ಸೀತಾ, ಸುನೀತಾ ಹಾಗೂ ಬಂಧುವರ್ಗದವರನ್ನು ವರ್ಗದವರನ್ನು ಅಗಲಿದ್ದಾರೆ.