ಬೆಳ್ತಂಗಡಿ; ರಹ್ಮಾನಿಯ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರ್,ನೂರುಲ್ ಹುದಾ ಅರ್ರಿಫಾಯಿಯ್ಯಾ ಮದರಸ ಕಾಜೂರ್ ವತಿಯಿಂದ ಈದ್ ಮೀಲಾದ್ ಪ್ರಯುಕ್ತ ಬೆಳಗ್ಗಿನ ಜಾವಾ ಮೌಲೀದ್ ಪಾರಾಯಣ ಕಾಜೂರು ಹಳೆ ಮಸ್ಜಿದ್ ನಲ್ಲಿ ಸಯ್ಯದ್ ಕಾಜೂರ್ ತಂಙಳ್ ಅವರ ನೇತೃತ್ವದಲ್ಲಿ ಜರುಗಿತು.
ಮಧ್ಯಾಹ್ನ ಹೊಸ ಮಸೀದಿಯಲ್ಲಿ ಮೌಲೀದ್ ಪಾರಾಯಣ ನಂತರ ಅನ್ನದಾನ ನಡೆಯಿತು.
ದರ್ಸ್ ಮತ್ತು ಮದರಸ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮದರಸ, ದರ್ಸ್ ವಿದ್ಯಾರ್ಥಿಗಳು ಜಮಾಅತೆರೆಲ್ಲರೂ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಜನಾಬ್ ಕೆ. ಯು ಇಬ್ರಾಹಿಂ ವಹಿಸಿದ್ದರು. ಸಯ್ಯದ್ ಕಾಜೂರ್ ತಂಙಳ್ ದುವಾ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ದರ್ಗಾ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ ಹೆಚ್, ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಕೋಶಾಧಿಕಾರಿ ಮುಹಮ್ಮದ್ ಕಮಾಲ್, ಸ್ಥಳೀಯ ಮುದರ್ರಿಸ್ ಅಬ್ದುಲ್ ಖಾದರ್ ಸಅದಿ, ಮುಅಲ್ಲಿo ಆಸೀಫ್ ಮದನಿ, ಇಕ್ಬಾಲ್ ಉಸ್ತಾದ್, ಝುಬೈರ್ ಉಸ್ತಾದ್, ಅಂಗಸಂಸ್ಥೆ ಜಿ. ನಗರ, ದಿಡುಪೆ, ಕುಕ್ಕಾವು ಮದರಸ ಅಧ್ಯಾಪಕರು, ಎಸ್‌ವೈಎಸ್ ಅಧ್ಯಕ್ಷ ಅಬೂಬಕ್ಕರ್ ಕುಕ್ಕಾವು, ಪಂಚಾಯತ್ ಸದಸ್ಯ ಕೆ.ಯು ಮುಹಮ್ಮದ್, ಎಸ್ಸೆಸ್ಸೆಫ್ ಅಧ್ಯಕ್ಷ ಸಿರಾಜುದ್ದೀನ್, ಆರ್‌ಡಿಸಿ ಅಧ್ಯಕ್ಷ ಮುಹಮ್ಮದ್ ಶರೀಫ್, ಸ್ವಲಾತ್ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್, ಪಿಟಿಎ ಅಧ್ಯಕ್ಷ ಡಿ.ವೈ ಉಮ್ಮರ್, ದಿಡುಪೆ ಮಸೀದಿ ಅಧ್ಯಕ್ಷ ಎ ಯು ಮುಹಮ್ಮದ್, ಜಿ ನಗರ ಮಸೀದಿ ಅಧ್ಯಕ್ಷ ಉಸ್ಮಾನ್ ಪಗರೆ, ಕುಕ್ಕಾವು ಮಸೀದಿ ಅಧ್ಯಕ್ಷ ಸಿದ್ದೀಕ್, ಮಾಜಿ ಅಧ್ಯಕ್ಷ ಬಿ.ಎ ಯೂಸುಫ್ ಶರೀಫ್ ,ಎಸ್‌ಎಮ್‌ಎ ಜಿಲ್ಲಾ ನಾಯಕ ಕೆ.ಪಿ ಮುಹಮ್ಮದ್, ಸಂಸ್ಥೆ ವ್ಯವಸ್ಥಾಪಕ ಶಮೀಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಉಸ್ತುವಾರಿಯನ್ನು ಮದರಸ ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷ ಪಿ. ಎ ರಾಝಿಕ್ ವಹಿಸಿದ್ದರು. ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರುಗಳು ಕಾಜೂರ್ ಜಮಾತ್ ಯುವಕರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.
ಮದರಸ, ದರ್ಸ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಸದರ್ ಉಸ್ತಾದ್ ರಶೀದ್ ಮದನಿ ಕಾರ್ಯಕ್ರಮ ನಿರ್ವಹಿಸಿದರು.