Posts

ಮಾದರಿ ಹುಟ್ಟು ಹಬ್ಬ; ಯುವ ಕಾಂಗ್ರೆಸ್ ಮುಖಂಡ ಅಭಿನಂದನ್ ಹರೀಶ್ ಕುಮಾರ್ ರಿಂದ ನೇತ್ರದಾನದ ಪ್ರತಿಜ್ಞೆ

1 min read

ಬೆಳ್ತಂಗಡಿ: ತಾಲೂಕು ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ ತನ್ನ ವಿಶೇಷ ಸಮಾಜಮುಖಿ ಕೆಲಸಗಳ ಮೂಲಕ ಗುರುತಿಸಿಕೊಂಡಿರುವ ಯುವ ರಾಜಕಾರಣಿ. 

ಗುರುವಾರ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬ ಎಂದರೆ ಏನಿರುತ್ತೆ? ಕೇಕ್, ಮೋಜು ಮಸ್ತಿ, ಗೆಳೆಯರೊಂದಿಗೆ ಔಟಿಂಗ್ ಇತ್ಯಾದಿ. ಆದರೆ ಇದಕ್ಕೆ ಹೊರತುಪಡಿಸಿ ಅಭಿನಂದನ್ ಹರೀಶ್ ಕುಮಾರ್, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ತನ್ನ ಹುಟ್ಟುಹಬ್ಬವನ್ನು ಸದಾ ನೆನಪಿನಲ್ಲಿಡುವಂತಹ ಪುಣ್ಯದ ಕಾರ್ಯದೊಂದಿಗೆ ಆಚರಿಸಿದ್ದು ಇತರರಿಗೆ ಮಾದರಿಯಾಗಿದ್ದಾರೆ.

ಹೌದು, ಸರಳ ವ್ಯಕ್ತಿತ್ವದ, ಮತ್ತು ಬಡವರ ಮತ್ತು ನೊಂದವರ ಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಗುಣಗಳುಳ್ಳ ಅಭಿನಂದನ್ ಹರೀಶ್ ಕುಮಾರ್ ತನ್ನ ಹುಟ್ಟುಹಬ್ಬದ ಪ್ರಯುಕ್ತ ಸರ್ವರೂ ಸದಾ ನೆನಪಿಡುವಂತೆ ತನ್ನ ನೇತ್ರಗಳನ್ನು ದಾನ ಮಾಡುವ ಪ್ರತಿಜ್ಞೆಯನ್ನು ಕೈಗೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾದರು. ತನ್ನ ಹುಟ್ಟುಹಬ್ಬದ ಪ್ರಯುಕ್ತ ಗುರುವಾರ ಫಾದರ್ ಮುಲ್ಲರ್ ಹಾಸ್ಪಿಟಲ್ ಕಂಕನಾಡಿಯಲ್ಲಿ ತಮ್ಮ ಅಮೂಲ್ಯವಾದ ನೇತ್ರಗಳನ್ನು ದಾನ ಮಾಡುವ ಪ್ರತಿಜ್ಞಾ ವಿಧಿಗೆ ಸಹಿ ಹಾಕಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಈಗಿನ ಯುವ ಪೀಳಿಗೆ ಬೇರೆ ಬೇರೆ ಘಟನೆಗಳಲ್ಲಿ ಭಾಗಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ನೇತ್ರದಾನ, ರಕ್ತದಾನ ಮಾಡುವುದರ ಮುಖಾಂತರ ಬಡವರಿಗೆ ಹಾಗೂ ಕಷ್ಟ ಸಂಕಷ್ಟದಲ್ಲಿರುವ ರೋಗಿಗಳಿಗೆ ದಾನ ಮಾಡುವುದರ ಮುಖಾಂತರ ಯುವಕರು ಈಗಿನ ಸಾಮಾಜಿಕ  ನೆಲೆಯಲ್ಲಿ  ತಿದ್ದಿ ನಡೆಯುವ ಒಂದು ಉದಾಹರಣೆಯಾಗಿ ಮೂಡಿ ಬರಬೇಕು. ಕಣ್ಣುದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ತನ್ಮೂಲಕ ಅಂಧರ ಬಾಳಲ್ಲಿ ಬೆಳಕು ತರುವ ಪುಟ್ಟ ಪ್ರಯತ್ನವನ್ನು ನಾವೆಲ್ಲಾ ಮಾಡಬೇಕಾಗಿದೆ ಎಂದರು.

ಸಮಾಜದಲ್ಲಿ ನೇತ್ರದಾನ ಮಾಡುವವರಿಗೆ ಪ್ರೇರಣೆಯಾಗಲಿ ಎನ್ನುವ ದೃಷ್ಟಿಯಿಂದ ನೇತ್ರದಾನ ಮಾಡುವ ಪ್ರತಿಜ್ಞೆ ಕೈಗೊಂಡಿರುವ ಅಭಿನಂದನ್ ಹರೀಶ್ ಕುಮಾರ್ ಅವರ ಈ ಮಾದರಿ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment