ಬೆಳ್ತಂಗಡಿ; ಹುಟ್ಟುತ್ತಲೇ ಎರಡೂ ಕೈಗಳಿಲ್ಲದ ವಿಶೇಷ ಚೇತನೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ವಿಶಿಷ್ಟ ಸಾಧಕಿ ಸಬಿತಾ ಮೋನಿಸ್ ಅವರಿಗೆ 2021ನೇ ಸಾಲಿನ ರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿಗೆ ಒಲಿದುಬಂದಿದೆ.
ಹೊಸದಿಲ್ಲಿಯ ನ್ಯಾಶನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಕರ್ನಾಟಕದ ಪತ್ರಿಕೆಗಳ ಸಂಘ ಜಂಟಿಯಾಗಿ ಪ್ರಾಯೋಜಿಸುತ್ತಿರುವ ಈ ಪ್ರಶಸ್ತಿ ಅತ್ಯಂತ ಗೌರವದ ಹೆಜ್ಜೆ ಗುರುತು ಮೂಡಿಸಿದೆ.
ಹೆತ್ತವರೊಂದಿಗೆ ಸಾಧಕಿ ಪುತ್ರಿ ಸಬಿತಾ ಮೋನಿಸ್
ತಾಲೂಕಿನ ಗರ್ಡಾಡಿ ಗ್ರಾಮದ ನಿವಾಸಿಯಾಗಿರುವ ಸಬಿತಾ ಮೋನಿಸ್ ತನ್ನ ದೈಹಿಕನ್ಯೂನತೆಯನ್ನು ಮೆಟ್ಟಿನಿಂತು ಛಲ ಬಿಡದೆ ತನ್ನ ಎರಡು ಕಾಲುಗಳಿಂದಲೇ ಪರೀಕ್ಷೆ ಬರೆದು ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ.
ಪ್ರತೀ ಸಾರ್ವತ್ರಿಕ ಚುನಾವಣೆಯಲ್ಲೂ ಕಾಲಿನಿಂದಲೇ ಮತ ಚಲಾಯಿಸುವ ಮೂಲಕ ಅವರು ರಾಜ್ಯದ ಗಙಸೆಳೆಯುತ್ತಲೇ ಬಂದಿದ್ದಾರೆ. ಸದ್ಯ ಅವರು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಕಲ್ಯಾಣಾ
ಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಈ ವಿಶೇಷ ಸಾಧನೆಯನ್ನು ಅಸಾಮಾನ್ಯ ಸಾಧನೆ ಎಂದು ಪರಿಗಣಿಸಿ ಅವರನ್ನು ಈ ಪುರಸ್ಕಾರಕ್ಕೆ ಪರಿಗಣಿಸಲಾಗಿದೆ ಎಂದು ಆಯ್ಕೆ ಮಂಡಳಿ ಘೋಷಿಸಿದೆ.