Posts

ಪ್ರಾಪಂಚಿಕ ಬದಲಾವಣೆಯ ಆವಶ್ಯಕತೆ ತಿಳಿದು ಸೇವೆ ಮಾಡಬೇಕು; ಡಾ.‌ವೀರೇಂದ್ರ ಹೆಗ್ಗಡೆ.ಅರಳಿ ರಸ್ತೆಯಲ್ಲಿ ರೋಟರಿ ಸೇವಾ ಟ್ರಸ್ಟ್ ಸಭಾಭವನ ಉದ್ಘಾಟನೆ;

2 min read

ಬೆಳ್ತಂಗಡಿ; ಸೇವೆ ಹಳ್ಳಿಯಲ್ಲೂ ದಿಲ್ಲಿಯಲ್ಲೂ ಇರುತ್ತದೆ. ಆದರೆ ಹಳ್ಳಿಯಲ್ಲಿ ಸೇವೆಗೆ ಇರುವ ಅವಕಾಶ ಪಟ್ಟಣದಲ್ಲಿಲ್ಲ. ಆಧುನಿಕ ಪ್ರಾಪಂಚಿಕ ಬದಲಾವಣೆ ತಿಳಿದುಕೊಂಡು ಈಗಿನ ಸಮಾಜಕ್ಕೆ ಬೇಕಾದ ಆವಶ್ಯಕತೆ ಪೂರೈಸಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರು ಹೇಳಿದರು.

ಬೆಳ್ತಂಗಡಿ ರೋಟರಿ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ರೋಟರಿ ಸುವರ್ಣ ಮಹೋತ್ಸವ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಕಾಶಿಬೆಟ್ಟು ಅರಳಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ರೋಟರಿ ಸೇವಾ ಟ್ರಸ್ಟ್ ಸಭಾಭವನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.




ರೋಟರಿ, ‌ಲಯನ್ಸ್, ಜೇಸಿಐ ಯಂತಹಾ ಸಂಸ್ಥೆಯಲ್ಲಿ ಕುರ್ಚಿಗಾಗಿ ಹೋರಾಟವಿಲ್ಲ.ಸೇವೆಯಲ್ಲಿ ಸ್ಪರ್ಧೆಯಂತೆ ಅವರವರಿಗೆ ಅವಕಾಶ ಬಂದಾಗ ಉತ್ತಮ ಸೇವಾ ಯೋಜನೆ ರೂಪಿಸುತ್ತಾರೆ.

ಸೇವೆಗೆ ಅವಕಾಶ ಬೇಕಾದವರು ಸಂಸ್ಥೆಗೆ ಸೇರಬಹುದು. ಬೆಳ್ತಂಗಡಿ ಕ್ಲಬ್‌ನಲ್ಲಿ ಯಶಸ್ವಿ ಮನುಷ್ಯರು ಇದ್ದಾರೆ ಎಂಬುದು ಹೆಮ್ಮೆ.ಸಾರ್ವಜನಕರ ಜೊತೆ ಬೆರೆಯುವ ಫೆಲೋಶಿಪ್ ವ್ಯವಸ್ಥೆ ಸಂಸ್ಥೆ ಮುಂದುವರಿಸಿಕೊಂಡು ಹೋಗಬೇಕು.ಜಾತೀಯತೆ, ಅಂತಸ್ತು ಎಲ್ಲವನ್ನೂ ಮರೆತು ಸಮಾನವಾಗಿ ಬೆರೆಯಲು ಇದು ಅವಕಾಶ ಕೊಡುತ್ತದೆ. ಇದುವೇ ಸಂಸ್ಥೆಯ ಶಕ್ತಿ ಎಂದು ಹೆಗ್ಗಡೆಯವರು ನುಡಿದರು.

ರೋಟರಿ ಕ್ಲಬ್ ಬೆಳ್ತಂಗಡಿಯಲ್ಲಿ ಇರುವ ಸದಸ್ಯರೆಲ್ಲರೂ ಸಂಪನ್ಮೂಲ ವ್ಯಕ್ತಿಗಳಾಗಿ ಗುರುತಿಸಿಕೊಂಡಿದ್ದಾರೆ.

ಅವರ ಒಂದೊಂದು ಕ್ಷೇತ್ರದ ಎಕ್ಸ್‌ಪೀರಿಯನ್ಸ್ ಸಂಘದ ಮೂಲಕ ಹೊರಹೊಮ್ಮುತ್ತದೆ ಎಂದು ಹೆಗ್ಗಡೆಯವರು ನುಡಿದರು.

ಶಾಸಕ ಹರೀಶ್ ಪೂಂಜ‌ ಮಾತನಾಡಿ, ರೋಟರಿ‌ ಸಂಸ್ಥೆಯ ಸೇವೆ ಮಾದರಿಯಾಗಿದೆ. ಈ ಸಭಾಂಗಣಕ್ಕೆ ತನ್ನ ಶಾಸಕರ ಅನುದಾನದಲ್ಲಿ 10 ಲಕ್ಷ ರೂ.‌ನೀಡಲಿದ್ದೇನೆ.

ಜೊತೆಗೆ ಈ ಸಭಾಂಗಣದ‌‌ ಮುಂಭಾಗದಲ್ಲಿ ಹಾದುಹೋಗುವಂತೆ 18 ಅಡಿ ಅಗಲದ ರಸ್ತೆ ನಿರ್ಮಾಣ ವಾಗುತ್ತಿದ್ದು, ಅದು ಸಭಾಂಗಣದ ಅಂದ ಹೆಚ್ಚಿಸಲಿದೆ ಎಂದು ಭಾವಿಸುತ್ತೇನೆ ಎಂದರು.

ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಮಾತನಾಡಿ ಕೋರೊನಾ ಕಾಲಘಟ್ಟದಲ್ಲಿ ರೋಟರಿ ಸಂಸ್ಥೆಯ ಸೇವೆ ಅಭಿನಂದನೆಗೆ ಅರ್ಹ, ಸಮಾಜಕ್ಕೆ ಅರ್ಪಣೆಯಾಗುತ್ತಿರುವ ಈ‌ಸಭಾಂಗಣಕ್ಕೆ ನನ್ನ ಅನುದಾನದಲ್ಲಿ 5 ಲಕ್ಷ ರೂ. ಅನುದಾನ ನೀಡುತ್ತೇನೆ ಎಂದರು.

ರೋಟರಿ ಜಿಲ್ಲಾ ರಾಜ್ಯಪಾಲ  ರಂಗನಾಥ ಭಟ್ ಮಾತನಾಡಿ, ರೋಟರಿ ಬೆಳ್ತಂಗಡಿಯ ಸೇವೆ ಉತ್ರೃಷ್ಠವಾದದ್ದು, ಸೇವೆಯಲ್ಲಿ ನಮ್ಮ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ರೋಟರಿಯ ಕಿಂಡಿಅಣೆಕಟ್ಟು ಯೋಜನೆ ಭವಿಷ್ಯದ ಚಿಂತನೆಯುಳ್ಳದ್ದು ಎಂದರು. 

ಜಿಲ್ಲೆಯ ಪ್ರಥಮ ಮಹಿಳೆ ರಜನಿ‌ರಂಗನಾಥ್, ಸಹಾಯಕ ರಾಜ್ಯಪಾಲ ಡಾ.  ಯತಿಕುಮಾರಸ್ವಾಮಿ ಗೌಡ, ಮೋನಪ್ಪ ಪೂಜಾರಿ, ರೋಟರಿ ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಬಿ. ಯಶೋವರ್ಮ,ರೋಟರಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಡಾ. ಶಶಿಧರ್ ಡೋಂಗ್ರೆ, ಸುವರ್ಣ ಮಹೋತ್ಸವ ಸಮಿತಿ ಕೋಶಾಧಿಕಾರಿ ಸುನಿಲ್ ಶೆಣೈ, ಕಾರ್ಯದರ್ಶಿ ಡಾ. ಗೋಪಾಲಕೃಷ್ಣ ಭಟ್, ರೋಟರಿ ಕ್ಲಬ್ ಕೋಶಾಧಿಕಾರಿ ಮಿಥುನ್ ಮಾಡ್ತಾ ಉಪಸ್ಥಿತರಿದ್ದರು

ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್‌ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ ಧನಂಜಯ ರಾವ್ ವರ್ಷದ ಚಟುವಟಿಕೆಯ ವಿವರ ನೀಡಿದರು.

ಕಾರ್ಯದರ್ಶಿ ಶ್ರೀಧರ ಕೆ.ವಿ ವರದಿ ನೀಡಿದರು.

ರೋಟರಿ ಸೇವಾ ಟ್ರಸ್ಟ್ ಅಧ್ಯಕ್ಷ,‌ ನಿವೃತ್ತ ಮೇಜರ್ ಜನರಲ್ ಎಂ.ವಿ ಭಟ್, ಕಟ್ಟಡದ‌ ನಿರ್ಮಾಣ‌ ಮತ್ತು ಸಹಕಾರ ನೀಡಿದವರನ್ನು ಸ್ಮರಿಸಿದರು. ರೋಟರಿ ಸೇವಾ ಟ್ರಸ್ಟ್ ಕೋಶಾಧಿಕಾರಿ ಶ್ರೀ ಕಾಂತ ಕಾಮತ್ ವಂದನಾರ್ಪಣೆಗೈದರು.‌ ಪ್ರಕಾಶ ಪ್ರಭು ಪ್ರಾರ್ಥನೆ ಹಾಡಿದರು.

ಡಾ‌ ಎ ಜಯಕುಮಾರ್ ಶೆಟ್ಟಿ ಮತ್ತು ಮನೋರಮಾ ಭಟ್ ಕಾರ್ಯಕ್ರಮ‌ ನಿರೂಪಿಸಿದರು

*'ರೋಟರ್' ಸಂಚಿಕೆ ಬಿಡುಗಡೆ ಮಾಡಲಾಯಿತು.

* ರೋಟರಿ ಸದಸ್ಯರು ಹಳದಿ ಬಣ್ಣದ ಮೇಲ್ವಸ್ತ್ರ, ಪೇಟ ಸಮವಸ್ರ್ತದ ಮೂಲಕ ಮಿಂಚುತ್ತಿದ್ದರು.

* ಆಗಮಿಸಿದ‌ ಎಲ್ಲರಿಗೂ ಕಬ್ಬಿನ‌ಹಾಲು ವಿತರಣೆ, ಭೋಜನ ಏರ್ಪಡಿಸಲಾಗಿತ್ತು.

* ಕಾರ್ಯಕ್ರಮ‌ ಸಮಯಬದ್ಧವಾಗಿ ಮತ್ತು ಶಿಸ್ತುಬದ್ಧವಾಗಿ ನಡೆಯಿತು.

* ಕಾರ್ಯಕ್ರಮದಲ್ಲಿ ಸ್ಮರಣಿಕೆ ನೀಡದೆ ಅದರ ಮೊತ್ತವನ್ನು ಎಸ್‌ಡಿಎಂ ಹಿರಿಯ ವಿದ್ಯಾರ್ಥಿ ಸಂಘಕ್ಕೆ ಧನಂಜಯ ರಾವ್ ಕೊಡುಗೆಯಾಗಿ ನೀಡಿದರು.

* ಅಗಲಿದ ರೋಟರಿ ಸದಸ್ಯರಾದ  ರಮಾನಂದ ಸಾಲಿಯಾನ್ ಅವರ ಸ್ಮರಣೆಯೊಂದಿಗೆ ಅಗಲಿದ ಚಂದ್ರಕಾಂತ ಕಾಮತ್, ಪ್ರಕಾಶ ತುಳಪುಳೆ ಅವರನ್ನು ಸ್ಮರಿಸಿಕೊಂಡ ಧನಂಜಯರಾವ್ ಭಾವುಕರಾದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment