ಬೆಳ್ತಂಗಡಿ; ಇಲ್ಲಿನ ಮುಖ್ಯ ರಸ್ತೆಯ ಸೋಜಾ ಎಲೆಕ್ಟ್ರಾನಿಕ್ಸ್ ಬಳಿ ಸ್ಟೇಷನರಿ, ಬುಕ್ ಐಟಂಸ್, ಹೋಮ್ ಎಪ್ಲಾಯೆನ್ಸಸ್ ಇತ್ಯಾಧಿ ವಸ್ತುಗಳ ತಾಲೂಕಿನ ವಿನೂತನ ಹೋಲ್ಸೇಲ್ ಏಂಡ್ ರಿಟೈಲ್ ಮಾರಾಟ ಮಳಿಗೆ ಪಿನ್ ಪಾಯಿಂಟ್ ಟ್ರೇಡ್ಸ್ ಉದ್ಘಾಟನೆಗೊಂಡಿದೆ.
ಶಾಲಾ ಮಕ್ಕಳ ನೋಟ್ ಪುಸ್ತಕ, ಪೆನ್, ಪೆನ್ಸಿಲ್, ಸ್ಟೇಷನರಿ ವಸ್ತುಗಳು, ಕಚೇರಿ ಬಳಕೆಯ ಪುಸ್ತಕಗಳು ಮತ್ತು ಫೈಲ್‌ಗಳು, ನೆಲ ಒರೆಸುವ ಮೋಪ್, ಬಾತ್ ರೂಮ್ ಕ್ಲೀನರ್ಸ್, ವಾಲ್ ಕ್ಲೀನಿಂಗ್ ಬ್ರಶ್‌ಗಳು, ಪ್ಲಾಸ್ಟಿಕ್ ಹಿಡಿಸೂಡಿ, ಇನ್ನಿತರ ಮನೆಗೆ ಬೇಕಾದ ಪ್ಲಾಸ್ಟಿಕ್ ವಸ್ತುಗಳು, ಬಟ್ಟೆ ಚೀಲಗಳು, ಯೂಸ್ ಏಂಡ್ ತ್ರೋ ಪ್ಲೇಟ್ ಮತ್ತು ಲೋಟಗಳು, ನರ್ಸರಿ ನೆಟ್, ಟರ್ಪಾಲ್ ಗಳು, ನೈಲಾನ್ ಹಗ್ಗಗಳು, ಸೋಪು, ಸೋಪ್ ವಾಟರ್, ಫ್ಲೋರ್ ಕ್ಲೀನಿಂಗ್ ಕೆಮಿಕಲ್‌ಗಳು, ಇತ್ಯಾಧಿ ಹಲವು ಬಗೆಯ ವಸ್ತುಗಳು ಒಂದೇ ಸೂರಿನಡಿ ಮಿತದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
ಹಲವಾರು ವರ್ಷ ವಿದೇಶದಲ್ಲಿ ಉದ್ಯೋಗ ನಡೆಸಿದ ಅನುಭವದೊಂದಿಗೆ ಸಂಸ್ಥೆಯ ಮಾಲಕರುಗಳಾದ ಅಬ್ದುಲ್ ಅಝೀಝ್ ಮತ್ತು ಅಹಮದ್ ಕಬೀರ್ ಕಾಜೂರು ಅವರು ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲು ಉತ್ಸುಕರಾಗಿದ್ದು ಎಲ್ಲರ ಸಹಕಾರ ಕೋರಿದ್ದಾರೆ.