ಬೆಳ್ತಂಗಡಿ: 2021 ಜನವರಿ 26 ಗಣರಾಜ್ಯ ದಿನದ ಅಂಗವಾಗಿ ,ಕೇಂದ್ರ ಸರಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾನೂನನ್ನು ವಿರೋಧಿಸಿ ಮಂಗಳವಾರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ ಬೆಳ್ತಂಗಡಿ ಮೂರು ಮಾರ್ಗದಿಂದ ಬಸ್ಸು ನಿಲ್ದಾಣದವರೆಗೆ ರೈತ ಐಕ್ಯತಾ ಸಂಗಮ ಕಾಲ್ನಡಿಗೆ ಜಾಥಾ ನಡೆಯಿತು.
ಕಾರ್ಯಕ್ರಮದಲ್ಲಿ ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹೈದರ್ ನೀರ್ಸಾಲ್ ಸಂವಿಧಾನ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೊ ರೈತ ಐಕ್ಯತಾ ಸಂಗಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ನಾನಾ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಬೆಳ್ತಂಗಡಿ ತಾಲೂಕು ವಿಧಾನಸಭಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಸದಸ್ಯರುಗಳಾದ ಹನೀಫ್ ಪುಂಜಾಲಕಟ್ಟೆ , ಮುಸ್ತಫಾ ಗುರುವಾಯನಕೆರೆ, ಅಷ್ಫಾಕ್ ಸೇರಿದಂತೆ ನೂರಾರು ರೈತ ಬೆಂಬಲಿಗರು ಉಪಸ್ಥಿತರಿದ್ದರು.
ದೇಶದ ಬೆನ್ನೆಲುಬುಗಳಾದ ರೈತರ ವೇಷ ಭೂಷಣ ಧರಿಸುವ ಮೂಲಕ ವಿಶೇಷವಾಗಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟಿಸಲಾಯಿತು.
ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಶ್ರಫ್ ಕಟ್ಟೆ ಸ್ವಾಗತಿಸಿದರೆ, ನಿಝಾಮ್ ಕಟ್ಟೆ ಕಾರ್ಯಕ್ರಮ ನಿರೂಪಿದರು.