Posts

ಹಿಂದೂ ಧರ್ಮಸಂಸ್ಕಾರ ನಮ್ಮ ಹೆಣ್ಣು ಮಕ್ಕಳಿಗೆ ನಾವು ಕಲಿಸಿಕೊಡದ್ದೇ ಮತಾಂತರಕ್ಕೆ ಕಾರಣ; ಚಾಟಿ ಬೀಸಿದ ಹಾರಿಕಾ ಮಂಜುನಾಥ್

1 min read


ಬೆಳ್ತಂಗಡಿಯಲ್ಲಿ ಗೀತಾಜಯಂತಿ ಕಾರ್ಯಕ್ರಮ 

ಬೆಳ್ತಂಗಡಿ: ಹಿಂದೂ ಧರ್ಮದ ಮೇಲೆ 1500 ವರ್ಷಗಳು ದಾಳಿ ನಡೆದರೂ ಇಂದಿಗೂ ಧರ್ಮ ಬಲಿಷ್ಠವಾಗಿದೆ. ಆದರೆ ಧರ್ಮದ ಆಚಾರ ವಿಚಾರ ಚೌಕಟ್ಟು ಮತ್ತು ಮಹತ್ವವನ್ನು ನಮ್ಮ ಹೆಣ್ಣು ಮಕ್ಕಳಿಗೆ ನಾವು ಸಕಾಲದಲ್ಲಿ ಕಲಿಸಿಕೊಡದೇ ಇರೂದರಿಂದ ಅವರು ಅನ್ಯ ಧರ್ಮೀಯರ ಜೊತೆ ಸಖ್ಯ ಬೆಳೆಸುವಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಕರ್ತರು ನಾವೇ ಹೊರತು ಅನ್ಯ ಧರ್ಮೀಯರಲ್ಲ ಎಂದು ಖ್ಯಾತ ಭಾಷಣಗಾರ್ತಿ ಬೆಂಗಳೂರಿನ ಹಾರಿಕಾ ಮಂಜುನಾಥ್ ಚಾಟಿ ಬೀಸಿದರು. 

ಅವರು ಸೋಮವಾರ, ವಿಶ್ವಹಿಂದೂ ಪರಿಷತ್, ಭಜರಂಗದಳ ಮಾತೃಮಂಡಳಿ, ದುರ್ಗಾ ವಾಹಿನಿ ಬೆಳ್ತಂಗಡಿ ಪ್ರಖಂಡ ವತಿಯಿಂದ ಗೀತಾ ಜಯಂತಿ ಅಂಗವಾಗಿ  ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು.

ಜಾತಿಯ ಹೆಸರಿನಲ್ಲಿ ಛಿದ್ರವಾಗಿರುವ ಹಿಂದೂ ಧರ್ಮವನ್ನು ಒಗ್ಗೂಡಿಸುವ ಕಾರ್ಯ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಾಡುತ್ತಿದೆ. ನಮ್ಮ ಮಕ್ಕಳಿಗೆ ಹಿಂದೂ ಧರ್ಮದ ಅರಿವು ಮತ್ತು ಸಂಸ್ಕಾರವನ್ನು ತಿಳಿಸಿಕೊಡುವಂತಾಗಬೇಕು. ಮತಾಂತರ ಲವ್ ಜಿಹಾದ್‌ಗಳನ್ನು ತಡೆಯಲು ಮನೆ ಮನೆಗಳಲ್ಲಿ ಮಕ್ಕಳಿಗೆ ಸನಾತನ ಹಿಂದೂಧರ್ಮದ ಮಹತ್ವವನ್ನು ತಿಳಿಸುವುದೇ ಅಸ್ತ್ರವಾಗಿದೆ ಎಂದು‌ ಅವರು ಎಚ್ಚರಿಸಿದರು.

ಶ್ರೀರಾಮಕ್ಷೇತ್ರ ಮಹಾಸಂಸ್ಥಾನಮ್ ಮಠಾಧೀಶ ಜಗದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ದೇಶದಲ್ಲಿ ಯಾವುದೇ ಪಕ್ಷವಿರಲಿ ಹಿಂದೂಗಳಾದವರು ನಮ್ಮ ಧರ್ಮವನ್ನು ಪ್ರೀತಿಸಬೇಕು. ಸನಾತನ ಹಿಂದೂ ಧರ್ಮದಲ್ಲಿ ಯಾವುದೇ ಧ್ವೇಷ, ಅಸೂಯೆ ಇಲ್ಲ. ಇದರಲ್ಲಿರುವುದು ಭಾರತೀಯತೆ ಮತ್ತು ರಾಷ್ಟ್ರಾಭಿಮಾನದ ಸಂಕೇತ. ಹಿಂದೂ ಧರ್ಮಕ್ಕೆ ಅನ್ಯಾಯವಾದಾಗ ಅದನ್ನು ತಿದ್ದುವ ಕಾರ್ಯ ಮಾಡುವ ಜವಾಬ್ದಾರಿ ಸಾಧು ಸಂತರ ಮೇಲಿದೆ. ಪ್ರತಿಯೊಬ್ಬ ಹಿಂದೂ ಬಾಂಧವರು ಪವಿತ್ರ ಗೋಮಾತೆಯ ರಕ್ಷಣೆ ಮುಂದಾಗುವ ಅಗತ್ಯವಿದ್ದು ಮುಂದಿನ ದಿನಗಳಲ್ಲಿ ಶ್ರೀ ದೇವರಗುಡ್ಡೆ ಮಠದಲ್ಲಿ ಗೋಶಾಲೆ ತೆರೆಯುವ ಚಿಂತನೆ ಇದೆ ಎಂದರು. 

ಬೆಳ್ತಂಗಡಿಯ  ಉದ್ಯಮಿ ರಾಗ್ನೇಶ್ ರಮಾನಂದ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. 

ವಿಹಿಂಪ ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಪ್ರಾಸ್ತಾವಿಕ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಬಜರಂಗದಳ ತಾಲೂಕು ಅಧ್ಯಕ್ಷ ಸಂತೋಷ್ ಅತ್ತಾಜೆ ಉಪಸ್ಥಿತರಿದ್ದರು.

ವಿಹಿಂಪ ತಾಲೂಕು ಅಧ್ಯಕ್ಷ ದಿನೇಶ್ ಚಾರ್ಮಾಡಿ ಸ್ವಾಗತಿಸಿದರು.  ಜಗದೀಶ್ ಕನ್ನಾಜೆ ಕಾರ್ಯಕ್ರಮ ನಿರೂಪಿಸಿದರು. ವಿಹಿಂಪ ತಾಲೂಕು ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ ವಂದಿಸಿದರು. 

ಬಾಕ್ಸ್ 

ಹಿಂದೂ ಸಮಾಜದ ಮೇಲಾಗುತ್ತಿರುವ ಆಕ್ರಮಣಗಳ ವಿರುದ್ಧ ಜನಜಾಗೃತಿ ಮೂಡಿಸುವುದಕ್ಕಾಗಿ ಗೀತಾ ಜಯಂತಿ ಅಂಗವಾಗಿ ಬೃಹತ್ ಶೌರ್ಯ ಸಂಚಲನಾ ಕಾರ್ಯಕ್ರಮದ ಮೆರವಣಿಗೆ ಲಾಯಿಲ ವೆಂಕಟರಮಣ ದೇವಸ್ಥಾನದ ಬಳಿಯಿಂದ ಕಿನ್ಯಮ್ಮ ಸಭಾಂಗಣದವರೆಗೆ ನಡೆಯಿತು.

 ಶಂಖನಾದ ಮೊಳಗಿಸುವ ಮೂಲಕ  ಜಾಥಾಕ್ಕೆ ಚಾಲನೆ ನೀಡಲಾಯಿತು.‌ ಮೆರವಣಿಗೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಭಾಜಪ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಸಂಘಟನೆಯ ಪ್ರಮುಖರು, ತಾಲೂಕಿನ ಮೂಲೆಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪುರುಷ ಹಾಗೂ ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು. ಭಾರತಮಾತೆ, ಹನುಮಾನ್, ಶಿವಾಜಿಯ ಭಾವಚಿತ್ರವನ್ನರಿಸಿದ ಶೃಂಗಾರಗೊಂಡ ವಾಹನ ಮೆರವಣಿಗೆ ನಡೆಯಿತು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment