Posts

ರಾತ್ರಿ 9 ಗಂಟೆಯಿಂದ ಏಕಾಏಕಿ ಸ್ಥಗಿತಗೊಂಡಿದ್ದ ವಾಟ್ಸ್ ಆಪ್ , ಫೇಸ್‌ಬುಕ್‌, ಇನ್ಸ್ಟಾಗ್ರಾಮ್

1 min read



ಬೆಳ್ತಂಗಡಿ:ಬಲವಾದ ತಾಂತ್ರಿಕ ಕಾರಣದಿಂದ  ಫೇಸ್ ಬುಕ್ ಒಡೆತನದಲ್ಲಿರುವ ಮೂರು ಸಾಮಾಜಿಕ ತಾಣಗಳಾದ ಫೇಸ್ ಬುಕ್, ವಾಟ್ ಆಪ್ ಹಾಗೂ ಇನ್ಸ್ಟಾಗ್ರಾಮ್ ಸೇವೆಯಲ್ಲಿ ಸೋಮವಾರ ರಾತ್ರಿ 9 ಗಂಟೆಯಿಂದ ಒಂದಷ್ಟು ಕಾಲ ವ್ಯತ್ಯಯ ಉಂಟಾಯಿತು. ಈ ಕಾರಣದಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗದ ಕಾರಣ ಭಾರತ ಸೇರಿದಂತೆ ವಿಶ್ವದಾದ್ಯಂತ ಲಕ್ಷಾಂತರ ಗ್ರಾಹಕರು ಆತಂಕಕ್ಕೆ ಒಳಗಾದ ವಿದ್ಯಮಾನ ನಡೆಯಿತು. 

ಸಾಮಾಜಿಕ ಜಾಲತಾಣಗಳು ಇದೀಗ ಮಾನವ ಜೀವನದಲ್ಲಿ ಅದೆಷ್ಟು ಪರಿಣಾಮಕಾರಿ ಪ್ರಭಾವ ಬೀರಿದೆ ಎಂಬುದು ಈ  ಘಟನೆಯಿಂದ ಮತ್ತೊಮ್ಮೆ ಸಾಬೀತಾಯಿತು.

ಸಂಜೆ ವೇಳೆ ಭಾರೀ ಪ್ರಮಾಣದ ಸಿಡಿಲು, ಮಳೆ ಬಂದುದರಿಂದ ತೊಂದರೆ ಆಗಿರಬಹುದು ಎಂದು ಗ್ರಾಹಕರು ಅಂದುಕೊಂಡಿದ್ದರು.

ಆರಂಭದಲ್ಲಿ ಸಾರ್ವತ್ರಿಕ ತಾಂತ್ರಿಕ ದೋಷ ಗಮನಕ್ಕೆ ಬಾರದೆ ಗ್ರಾಹಕರು ತಮ್ಮ ಮೊಬೈಲ್ ಅಥವಾ ನೆಟ್ ವರ್ಕ್ ಸಮಸ್ಯೆ ಎಂದುಕೊಂಡು ಮೊಬೈಲ್ ಗಳನ್ನು ಸ್ವಿಚ್ ಆಫ್, ರಿಸ್ಟಾರ್ಟ್ ಮಾಡುತ್ತಾ ಕಾಲ ಕಳೆಯುವ ಮೂಲ ಚಡಪಡಿಸುತ್ತಿರುವುದು ಕಂಡು ಬಂತು. 

ವಾಟ್ಸಪ್ ಸ್ಥಗಿತಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ ಡೌನ್‌ಟೆಕ್ಟರ್ ಪ್ರಕಾರ, ಶೇ. 40 ರಷ್ಟು ಬಳಕೆದಾರರಿಗೆ ಆಪ್ ಡೌನ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ. ಶೇ. 30 ರಷ್ಟು ಜನರಿಗೆ ಸಂದೇಶ ಕಳುಹಿಸಲು ತೊಂದರೆಯಾಗಿದೆ ಮತ್ತು ಶೇ. 22 ರಷ್ಟು ಜನರು ವೆಬ್ ಆವೃತ್ತಿಯಲ್ಲಿ ಸಮಸ್ಯೆಗಳನ್ನು ಹೊಂದಿದ್ದಾರೆ. ಫೇಸ್ ಬುಕ್ ಸಂಬಂಧಿತ ಆ್ಯಪ್ ಗಳಲ್ಲಿ ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಿಮ್ಸ್ ಮತ್ತು ಜಿಐಎಫ್ ಗಳೊಂದಿಗೆ ಜನರು ಟ್ವಿಟರ್ ಗೆ ವರದಿ ಮಾಡುತ್ತಿದ್ದಾರೆ. ಕ್ಷಮಿಸಿ, ಏನೋ ತಪ್ಪಾಗಿದೆ. ಇದರ ಮೇಲೆ ಕೆಲಸ ಮಾಡುತ್ತಿದ್ದೇವೆ, ಆದಷ್ಟು ಬೇಗ ಅದನ್ನು ಸರಿಪಡಿಸುತ್ತೇವೆ ಎಂದು ಫೇಸ್ ಬುಕ್  ವೆಬ್ ಸೈಟ್  ನಲ್ಲಿ ಸಂದೇಶವೊಂದನ್ನು ಹಾಕಲಾಗಿದೆ.  ಭಾರತೀಯ ಕಾಲಮಾನ ರಾತ್ರಿ 9 ಗಂಟೆಯ ಬಳಿಕ ಮೂರು ಜನಪ್ರಿಯ ಜಾಲತಾಣಗಳು ಕಾರ್ಯನಿರ್ವಹಿಸದೆ ಗ್ರಾಹಕರು ಪರದಾಡಿದರು. ವಿಶ್ವದ ಎಲ್ಲ ಕಡೆಯ ಬಳಕೆದಾರರಿಗೂ ಈ ತಾಂತ್ರಿಕ ಸಮಸ್ಯೆಯ ಬಿಸಿ ತಟ್ಟಿದೆ. ಇದರಿಂದಾಗಿ ವಾಟ್ಸಪ್‌ನಿಂದ ಯಾವುದೇ ಮೆಸೇಜ್‌ ಸೆಂಡ್‌ ಆಗುತ್ತಿಲ್ಲ ಜೊತೆಗೆ ಬೇರೆಯವರು ಕಳಿಸಿದ ಮೆಸೇಜ್‌ ಕೂಡಾ ರಿಸೀವ್‌ ಆಗುತ್ತಿಲ್ಲ. ಇನ್‌ಸ್ಟಾಗ್ರಾಂನಲ್ಲಿ couldn’t refresh the feed ಎಂಬ ಸಂದೇಶ ಬಳಕೆದಾರರಿಗೆ ಕಾಣಿಸುತ್ತಿತ್ತು. Facebook ಪೇಜ್‌ ಲೋಡ್‌ ಆಗುತ್ತಿರಲಿಲ್ಲ. ಬಳಕೆದಾದರು ಈ ಬಗ್ಗೆ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಲೇ ಎಚ್ಚೆತ್ತ ಫೇಸ್‌ಬುಕ್‌ ಸಂಸ್ಥೆ ತನ್ನ Twitter ಖಾತೆಯ ಮೂಲಕ ಸೇವೆ ವ್ಯತ್ಯಯವಾಗಿದ್ದನ್ನು ಖಚಿತಪಡಿಸಿತು. ಅಲ್ಲದೇ ಬಳಕೆದಾರರ ಕ್ಷಮೆ ಯಾಚಿಸಿತು. ‘ನಮ್ಮ App & Productಗಳ ಸೇವೆ ಪಡೆಯಲು ಕೆಲವು ಬಳಕೆದಾರರಿಗೆ ಸಮಸ್ಯೆಯಾಗುತ್ತಿದೆ ಎಂಬುದು ನಮ್ಮ ಅರಿವಿಗೆ ಬಂದಿದೆ. ನಾವು ಸಾಧ್ಯವಾದಷ್ಟು ಬೇಗ ಈ ಸಮಸ್ಯೆ ಬಗೆಹರಿಸುವ ಕೆಲಸದಲ್ಲಿ ನಿರತವಾಗಿದ್ದೇವೆ. ನಿಮಗಾಗುತ್ತಿರುವ ತೊಂದರೆಗೆ ನಾವು ಕ್ಷಮೆ ಯಾಚಿಸುತ್ತೇವೆ’ ಎಂದು Facebook ಅಧಿಕೃತವಾಗಿ ಟ್ವೀಟ್ ಬರೆದುಕೊಂಡಿದೆ. WhatsApp ಕೂಡಾ ತನ್ನ ಟ್ವಿಟ್ಟರ್‌ ಖಾತೆಯಲ್ಲಿ, ಕೆಲವು ಬಳಕೆದಾರರಿಗೆ ವಾಟ್ಸಪ್‌ ಬಳಸಲು ತೊಂದರೆಯಾಗುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ. ನಾವು ಈ ಸಮಸ್ಯೆಯನ್ನು ಬಗೆಹರಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಈ ಸಮಸ್ಯೆ ಬಗೆಹರಿಯುತ್ತಿರುವಂತೆಯೇ ನಾವು ನಿಮಗೆ ಅಪ್ಡೇಟ್‌ ಮಾಡುತ್ತೇವೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು ಎಂದು ಬರೆದುಕೊಂಡಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment