ಬೆಳ್ತಂಗಡಿ; ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಇದರ ಪ್ರಾಂತ್ಯಾಧ್ಯಕ್ಷರಾಗಿ ಧರಣೇಂದ್ರ ಕೆ ಜೈನ್ ಕಾರ್ಯನಿರ್ವಹಿಸುತ್ತಿದ್ದು, ಅವರ ಅಧ್ಯಕ್ಷತೆಯಲ್ಲಿ ಮುಂದಕ್ಕೆ ನಡೆಯಲಿರುವ ಪ್ರಾಂತ್ಯ ಸಮ್ಮೇಳನದ ಸಮಿತಿ ರಚನೆ ಸಭೆಯು ಜೇಸಿ ಭವನದಲ್ಲಿ ಮಂಗಳವಾರ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಲಯನ್ ಪ್ರಾಂತ್ಯಾಧ್ಯಕ್ಷ ಧರಣೇಂದ್ರ ಕೆ ಜೈನ್ ವಯಸಿದ್ದು, ಸಮ್ಮೇಳನ ರೂಪುರೇಷೆ, ಸಮಿತಿಗಳ ಹುದ್ದೆಗಳ ಬಗ್ಗೆ ಪ್ರಸ್ತಾವನೆಯೊಂದಿಗೆ ವಿಷಯ ಮಂಡಿಸಿದರು.
ಲಕ್ಷ್ಮಣ ಪೂಜಾರಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ರಘುರಾಮ ಶೆಟ್ಟಿ ಉಜಿರೆ ನೀತಿ ಸಂಹಿತೆ ವಾಚಿಸಿದರು. ಮೇದಿನಿ ಡಿ ಗೌಡ ಪ್ರಾರ್ಥನೆ ಹಾಡಿದರು.
ಈ ವೇಳೆ ಪ್ರಾಂತ್ಯ ಸಮ್ಮೇಳನದ ಸಮಿತಿ ರಚಿಸಲಾಗಿದ್ದು ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ನೊಚ್ಚ, ಕಾರ್ಯಾಧ್ಯಕ್ಷರಾಗಿ ನಿತ್ಯಾನಂದ ನಾವರ, ಪ್ರಧಾನ ಕಾರ್ಯದರ್ಶಿಯಾಗಿ ಕೆ ಕೃಷ್ಣ ಆಚಾರ್, ಕೋಶಾಧಿಕಾರಿಯಾಗಿ ರಾಜು ಶೆಟ್ಟಿ ಬೆಂಗೆತ್ಯಾರು ಇವರನ್ನು ಆಯ್ಕೆ ಮಾಡಲಾಯಿತು.
ಉಳಿದಂತೆ ವಿವಿಧ ಉಪಸಮಿತಿಗಳನ್ನು ರಚಿಸಲಾಗಿ, ಸಂಚಾಲಕರು ಮತ್ತು ಸಹಸಂಚಾಲಕರುಗಳನ್ನು ನೇಮಿಸಲಾಯಿತು. ಪ್ರಾಂತ್ಯದ ಎಲ್ಲಾ ಕ್ಲಬ್ಬುಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.