Posts

ಸಂವಿಧಾನ ರಕ್ಷಣಾ ಜಾಥಾ- ಸಾರ್ವಜನಿಕ ಸಭೆ ಸಮಾರೋಪ : ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವ ಆಡಳಿತ ಪತನವಾಗುವವರೆಗೂ ಹೋರಾಟ; ಬಿ.ಎಮ್ ಭಟ್

1 min read

ಬೆಳ್ತಂಗಡಿ: ರೈತರು ಹೋರಾಟ ಮಾಡಿದರೆ ಏನಾಗಬಹುದು ಎಂದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾವು ಕಂಡಿದ್ದೇವೆ. ಗುಂಡೂರಾಯರ ಕಾಲದಲ್ಲೂ ಅತ್ಯಂತ ಸಮೀಪದಿಂದ ಅರಿತಿದ್ದೇವೆ. ಆದ್ದರಿಂದ ರೈತ ವಿರೋಧಿ, ಕಾರ್ಮಿಕ ಹಾಗೂ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿರುವ ಕೇಂದ್ರ- ರಾಜ್ಯಸರಕಾರಗಳು ಅಧಿಕಾರದ‌ ಮದದಿಂದ ವರ್ತಿಸುತ್ತಿದ್ದು ಇದರ ವಿರುದ್ಧ ನಮ್ಮ ಧ್ವನಿ ಈ ಸರಕಾರಗಳು ಪತನಗೊಳ್ಳುವವರೆಗೂ‌ ಇದೆ ಎಂದು ಹಿರಿಯ ಕಾರ್ಮಿಕ ಮುಂದಾಳು, ನ್ಯಾಯವಾದಿ ಬಿ.ಎಮ್ ಭಟ್ ಹೇಳಿದರು.

ಭೂಸುಧಾರಣಾ ಕಾಯ್ದೆ, ಕಾರ್ಮಿಕರ ಕಾಯ್ದೆ,ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆಗಳ  ತಿದ್ದುಪಡಿ, ನೂತನ ವಿದ್ಯುತ್ ಕಾಯ್ದೆ ಜಾರಿ, ಕೃಷಿ ಗುತ್ತಿಗೆ ಪದ್ದತಿ ಈ ಎಲ್ಲಾ ರೈತ- ಕಾರ್ಮಿಕ ವಿರೋಧಿ ಹಾಗೂ ಜನವಿರೋಧಿ ಕಾನೂನುಗಳನ್ನು ಹಿಂಪಡೆಯಲು ಆಗ್ರಹಿಸಿ, ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯನ್ನು ಬೆಂಬಲಿಸಿ  ಕಾರ್ಮಿಕ ರೈತ ಸಂಘಟನೆಗಳ ನೇತೃತ್ವದಲ್ಲಿ ನಡೆದ ವಾಹನ ಜಾಥಾ ಮತ್ತು ಸಾರ್ವಜನಿಕ ಸಭೆಯ ಸಮಾರೋಪ ಸಮಾರಂಭ ಬೆಳ್ತಂಗಡಿ ಬಸ್ಸು ತಂಗುದಾಣದಲ್ಲಿ ಜ.26 ರ ಗಣರಾಜ್ಯೋತ್ಸವ ದಂದು ನಡೆದು ಅವರು ಈ ವೇಳೆ‌ ಸಮಾರೋಪ ಭಾಷಣ ಮಾಡುತ್ತಿದ್ದರು.

ರೈತ ವಿರೋಧಿ ಕೆಲಸವೇ ಸಂವಿಧಾನ ವಿರೋಧಿ ಕೆಲಸ. ಇವರ ಮೇಲೆಯೇ ದೇಶದ್ರೋಹ ಪ್ರಕರಣ ದಾಖಲಾಗಬೇಕು ಎಂದು ಬಿ.ಎಮ್ ಭಟ್ ಆಗ್ರಹಿಸಿದರು.

ಹಿರಿಯ ಕಾರ್ಮಿಕ ಮುಖಂಡ ಎಲ್ ಮಂಜುನಾಥ ಮಾತನಾಡಿ, ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ನಮಗೇನು ಕೊಟ್ಟಿದೆ ಎಂದೇ ಪ್ರಶ್ನೆ ಮಾಡುತ್ತಿರುವ ನಾವು, ಈಗ ಅಧಿಕಾರದಲ್ಲಿರುವವರು ಕಾಂಗ್ರೆಸ್ ಕಾಲದ ಎಲ್ಲವನ್ನೂ ಮಾರುತ್ತಿದ್ದು ಇದು ಯಾರು ಮಾಡಿದ್ದು ಎಂದು ಅರಿಯಲಿ ಎಂದರು.

ಸಮಾರೋಪದಲ್ಲಿ ಶ್ಯಾಂರಾಜ್ ಪಟ್ರಮೆ, ದೇವಕಿ, ನೆಬಿಸಾ, ಜಯಶ್ರೀ, ಸಂಜೀವ ನಾಯ್ಕ, ರಾನಚಂದ್ರ, ಗಣೇಶ್‌ಪ್ರಸಾದ್, ಪುಷ್ಪಾ, ನಾರಾಯಣ ಕೈಕಂಬ ಮೊದಲಾದವರು ಉಪಸ್ಥಿತರಿದ್ದರು.ಕೇಂದ್ರದ ಆಡಳಿತಗಾರರನ್ನು ಅಣಕಿಸುವ ಕ್ರಾಂತಿಗೀತೆಗಳು ಮೊಳಗಿದವು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment