ಬೆಳ್ತಂಗಡಿ: ಗಣರಾಜ್ಯೋತ್ಸವದ ಅಂಗವಾಗಿ ಎಸ್ಸೆಸ್ಸೆಫ್ ಗೇರುಕಟ್ಟೆ ಶಾಖಾ ವತಿಯಿಂದ ರೈತರೊಬ್ಬರ ಕೃಷಿ ತೋಟದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸುವ ಮೂಲಕ ದೆಹಲಿ ರೈತ ಚಳವಳಿಗೆ ಬೆಂಬಲ ಸೂಚಿಸಲಾಯಿತು.
ಎಸ್ಸೆಸ್ಸೆಫ್ ಶಾಖಾ ಮಾಜಿ ಅಧ್ಯಕ್ಷ ಹಮೀದ್ ಜಿಡಿ ಅವರ ಕೃಪಿಭೂಮಿಯಲ್ಲಿ ಹಿರಿಯ ಕೃಷಿಕ ಅಹ್ಮದ್ ಕುಂಞ ಕೆಎಮ್ ರವರು ಧ್ವಜಾರೋಹಣ ನೆರೆವೇರಿಸಿದರು.
ಶಾಖಾ ಅಧ್ಯಕ್ಷ ರಹ್ಮಾನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸೆಕ್ಟರ್ ಕಾರ್ಯದರ್ಶಿ ಆಸಿಫ್ ಅಮ್ಜದಿ ಉಸ್ತಾದ್ ಮನ್‌ಶರ್ ದಿಕ್ಸೂಚಿ ಭಾಷಣ ಮಾಡಿದರು.
ಬಳಿಕ ಡಿವಿಷನ್ ಕಾರ್ಯದರ್ಶಿ ನವಾಝ್ ಮಾವಿನಕಟ್ಟೆ ಶುಭನುಡಿದರು. ರಾಷ್ಟ್ರಗೀತೆ ಹಾಡಿ,ರಾಜ್ಯ ಸಮಿತಿಯ ನಿರ್ದೇಶನ ಪ್ರಕಾರ "ಕಿಸಾನ್ ರಿಪ್ಲಬಿಕ್" ಅಂಗವಾಗಿ ರೈತರಿಗೆ ಬೆಂಬಲ ಸೂಚಿಸಲಾಯಿತು. ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಕಾರ್ಯಕ್ರಮದಲ್ಲಿ ಡಿವಿಷನ್ ಕಾರ್ಯದರ್ಶಿ ಇಸಾಕ್ ಅಳದಂಗಡಿ, ಡಿವಿಷನ್ ಸದಸ್ಯರಾದ ಫಯಾಝ್ ಗೇರುಕಟ್ಟೆ,ಪರಪ್ಪು ಎಸ್‌ವೈಎಸ್ ಬ್ರಾಂಚ್ ನಾಯಕ ಉಸ್ಮಾನ್ ಜಿ.ಎ, ನಿಕಟಪೂರ್ವ ಝೋನ್ ನಾಯಕ ಸಿದ್ದೀಕ್ ಪರಪ್ಪು, ರನೀಝ್, ನಾಸಿರ್,ನೌಫಲ್ ಎಸ್.ಎ, ಸಿಂಮ್ರಾನ್, ಹಕೀಲ್, ಇಸಾತ್ತುದ್ದೀನ್, ಸವಾದ್ ಪಿಎಸ್ ಉಪಸ್ಥಿತರಿದ್ದರು.
ಶಾಖಾ ಕೋಶಾಧಿಕಾರಿ ಸೈಪುಲ್ಲಾ ಗೇರುಕಟ್ಟೆ ಸ್ವಾಗತಿಸಿ,ಪ್ರಧಾನ ಕಾರ್ಯದರ್ಶಿ ದಾವೂದುಲ್ ಹಕೀಂ ಧನ್ಯವಾದವಿತ್ತರು.