ಬೆಳ್ತಂಗಡಿ: ಇಲ್ಲಿನ ಸಂಪಿಗೆ ನಗರ ಸಮೀಪದ ನಿವಾಸಿ, ದಿ. ಪ್ರಭಾಕರ ಸಂಪಿಗೆತ್ತಾಯರ ಪುರ್ರ ಶ್ರೀಕಾಂತ ಸಂಪಿಗೆತ್ತಾಯ(56) ಜೂ. 29 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೆದುಳಿನ ರಕ್ತಸ್ರಾವದಿಂದ(ಬ್ರೈನ್ ಎಮರೇಜ್) ನಿಧನರಾದರು.
ಉಜಿರೆಯಲ್ಲಿ ಹಲವು ವರ್ಷಗಳ ಕಾಲ ಫೈನಾನ್ಸ್, ಲ್ಯಾಂಡ್ ಲಿಂಕ್ಸ್ ವ್ಯವಹಾರ ನಡೆಸುತ್ತಿದ್ದ ಅವರು ಬಳಿಕ ಕೃಷಿಯತ್ತ ಒಲವು ತೋರಿದ್ದರು.
ಮೃತರ ತಂದೆ ಪ್ರಭಾಕರ ಸಂಪಿಗೆತ್ತಾಯ ಅವರು ಜನಸಂಘ, ಬಿಜೆಪಿಯ ಹಿರಿಯ ನಾಯಕರಾಗಿದ್ದರು. ವಾಜಪೇಯಿ ಅವರು ಮಂಗಳೂರು ಸಾರ್ವಜನಿಕ ಸಭೆಗೆ ಆಗಮಿಸಿದ್ದಾಗ ಅವರ ಭಾಷಣವನ್ನು ವೇದಿಕೆ ಯಲ್ಲೇ ಕನ್ನಡಕ್ಕೆ ತರ್ಜುಮೆ ಮಾಡಿದ್ದರು.
ಇದೀಗ ಅವರ ಪುತ್ರ ಶ್ರೀಕಾಂತ್ ಸಂಪಿಗೆತ್ತಾಯ ಅವರು ತಾಯಿ, ಬಿಎಎಂಎಸ್ ವೈದ್ಯೆಯಾಗಿರುವ ಪತ್ನಿ ಸಹಿತ ಬಂಧುವರ್ಗದವರನ್ನು ಅಗಲಿದ್ದಾರೆ.