ಬೆಳ್ತಂಗಡಿ; ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಇದರ ಶೈಕ್ಷಣಿಕ ಅಂಗ ಸಂಸ್ಥೆಯಾದ ರಹ್ಮಾನಿಯಾ ಮಹಿಳಾ ಶರೀಅತ್ ಕಾಲೇಜಿನ ವಿದ್ಯಾರ್ಥಿನಿಗಳಿಗಾಗಿ ಟೈಲರಿಂಗ್ ವೃತ್ತಿ ಕೌಶಲ್ಯ ತರಬೇತಿಗೆ ವಿಭಾಗಕ್ಕೆ ನ.18 ರಂದು ಚಾಲನೆ ನೀಡಲಾಯಿತು.
ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಕಾಜೂರು ತಂಙಳ್ ದುಆ ಪ್ರಾರ್ಥನೆ ಮೂಲಕ ಉದ್ಘಾಟನೆ ನೆರವೇರಿಸಿದರು.
ಕಾಜೂರು ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ವಕ್ಫ್ ದ. ಕ ಜಿಲ್ಲಾ ಸಲಹಾ ಸಮಿತಿ ಸದಸ್ಯ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಮುಹಮ್ಮದ್ ಕಮಾಲ್, ಸದಸ್ಯರಾದ ಉಮರ್ ಕೆ. ಹೆಚ್, ಸಿದ್ದೀಕ್ ಕೆ. ಹೆಚ್, ಮಾಜಿ ಅಧ್ಯಕ್ಷ ಕೆ.ಯು ಉಮರ್ ಸಖಾಫಿ, ಮುಹಮ್ಮದ್ ಶೆರೀಫ್, ರಶೀದ್ ಮದನಿ, ಅಬ್ದುಲ್ ರಹಿಮಾನ್ ಸಅದಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾಜೂರಿನಲ್ಲಿ ಈಗಾಗಲೇ ಇಂಗ್ಲೀಷ್ ಮೀಡಿಯಂ ಎಲ್.ಕೆ.ಜಿ ಮತ್ತು ಯುಕೆಜಿ ತರಗತಿಗಳು, "ರಾಹ" ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಸ್ಕೂಲ್, ರಹ್ಮಾನಿಯಾ ಕನ್ನಡ ಮಾಧ್ಯಮ ಹೈಸ್ಕೂಲ್, ಮಹಿಳಾ ಶರೀಅತ್ ಕಾಲೇಜು ಮತ್ತು ಪ.ಪೂ ಕಾಲೇಜು, ಹುಡುಗರ ಸನಿವಾಸ ದಅವಾ ಕಾಲೇಜು, ಉಚಿತ ಹಾಸ್ಟೆಲ್ ವ್ಯವಸ್ಥೆ, ಕಾಜೂರು ಮತ್ತು ಅಂಗ ಸಂಸ್ಥೆಗಳಲ್ಲಿ ಇಸ್ಲಾಮಿಕ್ ಅರೆಬಿಕ್ ಮದರಸಗಳು ಇತ್ಯಾದಿ ಸೇವಾ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದೆ.
-------
ವರದಿ: ಅಚ್ಚು ಮುಂಡಾಜೆ