ಬೆಳ್ತಂಗಡಿ: ಒಂದೇ ಮನೆಯಲ್ಕಿ ವಾಸವಾಗಿದ್ದ ತಂದೆ ಮತ್ತು ಮಗ ಇಬ್ಬರೂ ನಿಗೂಢ ರೀತಿಯಲ್ಲಿ ಸಾವನ್ನಪ್ಓದ ಘಟನೆಯೊಂದು ನ.22 ರಂದು ಬೆಳ್ತಂಗಡಿ ತಾಲೂಕಿನ ಪುದುವೆಟ್ಟುವಿನಲ್ಲಿ ನಡೆದಿದೆ.
ಮನೆಯೊಳಗೆ ಅಡುಗೆ ಮಾಡಿಟ್ಟ ಪಾತ್ರೆಗಳು ಕಂಡು ಬಂದಿದ್ದು ಕಾಡಿನಲ್ಲಿ ಸಿಕ್ಕಿದ ವಿಷಪೂರಿತ ಅಣಬೆ ಪದಾರ್ಥ ಸೇವಿಸಿದ್ದರಿಂದ ಈ ರೀತಿ ಆಗಿರುವ ಶಂಕೆ ವ್ಯಕ್ತವಾಗಿದೆ.
ಪುದುವೆಟ್ಟು ಮೀಯಾರುಪಾದೆ ಸನಿಹದ ಕೇರಿಮಾರು ನಿವಾಸಿಗಳಾದ ಗುರುವ(75) ಹಾಗು ಇವರ ಪುತ್ರ ಓಡಿ(45) ಮೃತಪಟ್ಟವರು. ಇವರ ಇಬ್ಬರ ಮೃತದೇಹಗಳೂ ಮನೆಯಿಂದ ಹೊರಗಡೆ ಪತ್ತೆಯಾಗಿದೆ.
ಮನೆಯಲ್ಲಿ ಗುರುವ ಮತ್ತು ಅವರ ಇಬ್ಬರು ಮಕ್ಕಳು ವಾಸವಾಗಿದ್ದಾರೆ. ನಿನ್ನೆಯ ದಿನ ಓರ್ವ ಮಗ ಇಲ್ಲದ್ದರಿಂದ ಇನ್ನೊಂದು ಪ್ರಾಣಾಪಾಯ ತಪ್ಪಿದೆ.
ಮನೆಯಂಗಳದಲ್ಲಿ ಇನ್ಬರೂ ಸತ್ತು ಬಿದ್ದಿರುವ ಬಗ್ಗೆ ಅರಿತ ಅಕ್ಕಪಕ್ಕದವರು
ಪರಿಶೀಲಿಸಿದಾಗ ಮನೆಯೊಳಗೆ ಸೋಮವಾರ ರಾತ್ರಿ ಕಾಡಿನ ಯಾವುದೋ ವಿಷಪೂರಿತ ಅಣಬೆಯನ್ನು ಅಡುಗೆ ಮಾಡಿ ಸೇವಿಸಿದಂತೆ ಕಂಡುಬಂದಿದೆ.
ಇದರಿಂದಲೇ ಈ ಅನಾಹುತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಖಚಿತವಾಗಿದೆ.
ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಅಧಿಕಾರಿಗಳು ಠಾಣಾಧಿಕಾರಿಗಳು ಭೇಟಿ ನೀಡಿದ್ದು ಮಹಜರು ಆರಂಭಿಸಿದ್ದಾರೆ. ಪಾತ್ರೆಯಲ್ಲಿರುವ ಪದಾರ್ಥವನ್ನು ವಿಧಿವಿಜ್ಞಾಬ ಪ್ರಯೋಗಾಲಯಕ್ಕೆ ಕಳುಹಿಸಿ ಘಟನೆಯನ್ನು ಖಚಿತಪಡಿಸಬೇಕಿದೆ.