ಬೆಳ್ತಂಗಡಿ; ಮುಂಬೈ ಮೂಲದ ಓನ್‌ಶೋರ್ ಕಂನ್ಸ್ಟ್ರಕ್ಷನ್ ಕಂಪೆನಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ತಾಲೂಕಿಗೆ ಕೊಡುಗೆಯಾಗಿ ಲಭಿಸಿದ ಎರಡು ಅಂಬುಲೆನ್ಸ್ ಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹಸಿರುನಿಶಾನೆ ತೋರಿ ಉದ್ಘಾಟಿಸಿದರು.
ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಬಯಲು ಆಲಯ ಕ್ಷೇತ್ರದ ಸನ್ನಿಧಿಯಲ್ಲಿ ಬುಧವಾರ ಕಾರ್ಯಕ್ರಮ ನಡೆಯಿತು.
ಓನ್‌ಶೋರ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸೀತಾರಾಮ ಶೆಟ್ಟಿ ಅವರ ಸಹೋದರ, ಮಾರಕ ಕೋವಿಡ್‌ನಿಂದ ಕಳೆದ ಏಪ್ರಿಲ್ ತಿಂಗಳಿನಲ್ಲಿ ನಿಧನರಾದ ಜಯಕುಮಾರ್ ಶೆಟ್ಟಿ ಬೆಳ್ಳೆ ದೊಡ್ಡಮನೆ ಅವರ ಸ್ಮರಣಾರ್ಥ ಮತ್ತು ಎರಡು ವರ್ಷಗಳ ಹಿಂದೆ ಕೊನೆಯುಸಿರೆಳೆದ ಸೀತಾರಾಮ ಶೆಟ್ಟಿ ಅವರ ಪತ್ನಿ ವನಿತಾ ಶೆಟ್ಟಿ ಬೆಳ್ಳೆ ದೊಡ್ಡಮನೆ ಅವರ ಸ್ಮರಣಾರ್ಥ ಕೊಡುಗೆಯಾಗಿ ಸಮರ್ಪಿಸಿದರು.
ಅಂಬುಲೆನ್ಸ್ ಲೋಕಾರ್ಪಣೆ ಸಂದರ್ಭದಲ್ಲಿ, ಈ ಕೊಡುಗೆ ಬೆಳ್ತಂಗಡಿ ತಾಲೂಕಿಗೆ ಸಮರ್ಪಣೆ ಯಾಗುವಲ್ಲಿ ಕಾರಣರಾದ ಶಾಸಕ ಹರೀಶ್ ಪೂಂಜ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಪುತ್ತೂರು ಉಪವಿಭಾಗದ ಎ.ಸಿ ಡಾ. ಯತೀಶ್ ಉಳ್ಳಾಲ್, ಡಿಹೆಚ್‌ಒ ಡಾ. ಕಿಶೋರ್ ಎಂ, ಜಿ.ಪಂ ಸಿಇಒ ಡಾ. ಕುಮಾರ್, ತಾ. ಆರೋಗ್ಯಾಧಿಕಾರಿ ಡಾ.ಕಲಾಮಧು, ಆರೋಗ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಬಿ ಶ್ರೀನಾಥ್, ತಹಶಿಲ್ದಾರ್ ಮಹೇಶ್ ಜೆ, ಇಒ ಕುಸುಮಾಧರ ಬಿ, ಸಿಡಿಪಿಒ ಪ್ರಿಯಾ ಆಗ್ನೇಸ್ ಚಾಕೋ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ತಾಲೂಕು ಅಧ್ಯಕ್ಷ ಜಯಂತ ಕೋಟ್ಯಾನ್, ಬಂಗಾಡಿ ಸಹಕಾರಿ ಸಂಘದ ಅಧ್ಯಕ್ಷ ಹರೀಶ್ ಮೋರ್ತಾಜೆ, ಜಿ.ಪಂ ಮಾಜಿ ಸದಸ್ಯ ಕೊರಗಪ್ಪ ನಾಯ್ಕ, ಆರೋಗ್ಯಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇ.ಪಿ ಶೆಟ್ಟಿ., ಡಾ.ಪ್ರಕಾಶ್, ಡಾ. ಪೂಜಾ ಮೊದಲಾದವರು ಉಪಸ್ಥಿತರಿದ್ದರು.
ಓನ್‌ಶೋರ್ ಕಂಪನಿಯ ಪರವಾಗಿ ಬೆಳ್ಳೆ ಹರೀಶ್ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಸಚಿವರು, ಶಾಸಕರು ಶಾಲು ಹೊದಿಸಿ ಅಭಿನಂದಿಸಿದರು.