Posts

ಬಿಸಿ ನೀರು ಮೈಮೇಲೆ ಬಿದ್ದು ಗಂಭೀರಗೊಂಡಿದ್ದ ನಾಲ್ಕು ವರ್ಷದ ಮಗು ಮೃತ್ಯು

0 min read

ಬೆಳ್ತಂಗಡಿ: ಬಿಸಿ ನೀರು ಮೈಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ನಾಲ್ಕು ವರ್ಷದ ಮಗು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.

ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿ ಸಮೀಪದ  ಸರಳಿಕಟ್ಟೆ ಮುನೀರ್ ರವರ ಪುತ್ರಿ ಫಾತಿಮತ್ ಸಲಹಾ (4ವ.) ಅವರೇ ದಾರುಣವಾಗಿ ಮೃತಪಟ್ಟ ಮಗು.

ವಿಟ್ಲ ಸಮೀಪದ ಕೆಲಿಂಜ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ರವರ ಮಗಳ ಪುತ್ರಿಯಾಗಿರುವ ಪಾತಿಮಾತ್ ಸಹಲ ಳಿಗೆ ಕೆಲವು ದಿನಗಳ ಹಿಂದೆ ಆಕಸ್ಮಿಕವಾಗಿ ಬಿಸಿ ನೀರು ಮೈಗೆ ಬಿದ್ದು ಗಂಭೀರ ಸ್ವರೂಪದ ಬೆಂದ ಗಾಯಗಳಾಗಿತ್ತು. ಆ ಬಳಿಕದಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಜೀವನ್ಮರಣ ಹೋರಾಟ ನಡೆಸಿ, ಶನಿವಾರ ಕೊನೆಯುಸಿರೆಳೆದಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment